ಈ ಬೈಸಿಕಲ್ ಗೆ 25 ವರ್ಷ ಗ್ಯಾರಂಟಿ !

Ludhiana Cycle
ಲೂಧಿಯಾನಾ, ಜೂ.24: ಸಾಮಾನ್ಯವಾಗಿ ನಾವು ಕೆಲವೊಂದು ವಸ್ತುಗಳನ್ನು ಕೊಂಡಾಗ ಒಂದು ವರ್ಷ ಎರಡು ವರ್ಷ,ಮತ್ತು ಸ್ಟೆಬಿಲೈಸರ್ ಗಳನ್ನು ಕೊಂಡಾಗ 6-8 ವರ್ಷಗಳ ಗ್ಯಾರಂಟಿಯನ್ನು ಪಡೆದುಕೊಳ್ಳುತ್ತೇವೆ. ಆದರೆ ಲೂಧಿಯಾನ ಮೂಲದ ಸೈಕಲ್ ತಯಾರಿಕಾ ಕಂಪೆನಿಯೊಂದು ತಾನು ಬಿಡುಗಡೆ ಮಾಡಿದ ಹೊಸ ಶ್ರೇಣೀಯ ಬುಲ್ ಪವರ್ ಸೈಕಲ್ ಗೆ ಬರೋಬ್ಬರಿ 25 ವರ್ಷ ಗ್ಯಾರಂಟಿ ನೀಡಿ ದಾಖಲೆಯನ್ನೇ ಬರೆದಿದೆ.

ಸೈಕಲ್ ಬಿಡುಗಡೆ ಮಾಡಿದ ಲೂಧಿಯಾನದ ಹೈ ಬರ್ಡ್ ಸೈಕಲ್ ತಯಾರಿಕಾ ಕಂಪೆನಿಯ ಅಧ್ಯಕ್ಷ ಆರ್ ಡಿ ಶರ್ಮ ಅವರು ಬುಲ್ ಪವರ್ ಸೈಕಲ್ ಬೆಲೆ 4,000 ರುಪಾಯಿಗಳಾಗಲಿದೆ ಎಂದು ಹೇಳಿದರು. ದೇಶದಲ್ಲೆ ಮೊದಲ ಬಾರಿಗೆ 25 ವರ್ಷಗಳ ಗ್ಯಾರಂಟಿ ನೀಡಲಾಗುತ್ತಿದೆ ಎಂದ ಅವರು ಸೈಕಲ್ ನ ಫ್ರೇಮ್ ಮತ್ತು ಫೋರ್ಕ್ ನಲ್ಲಿ 25 ವರ್ಷಗಳ ವರೆಗೆ ಏನಾದರೂ ದೋಷವಿದ್ದಲ್ಲಿ ಉಚಿತವಾಗಿ ಬದಲಾಯಿಸಿಕೊಡುವುದಾಗಿ ಹೇಳಿದರು.

ಸಾಮಾನ್ಯ ಸೈಕಲ್ ಬೆಲೆ 2,500 ರಿಂದ 3,000 ರುಪಾಯಿಗಳ ವರೆಗೆ ಇದ್ದು 6 ತಿಂಗಳಿನಿಂದ ವರ್ಷದ ವರೆಗೆ ಗ್ಯಾರಂಟಿ ಹೊಂದಿರುತ್ತದೆ. ಈ ಸೈಕಲ್ ನ್ನು ಅಭಿವೃದ್ದಿ ಪಡಿಸಲು ಕಳೆದ ಎರಡು ವರ್ಷಗಳಲ್ಲಿ 5 ಲಕ್ಷ ರುಪಾಯಿ ವ್ಯಯ ಮಾಡಲಾಗಿದೆ ಎಂದ ಅವರು ಸೈಕಲ್ ನ ಫ್ರೇಮ್ ನ್ನು ಉತ್ತಮ ದರ್ಜೆಯ ಲೋಹದಿಂದ ತಯಾರಿಸಲಾಗಿದೆ ಎಂದರು.

Most Read Articles

Kannada
Story first published: Thursday, June 24, 2010, 13:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X