ಟೈರ್ ಬೆಲೆ ಹೆಚ್ಚಳ=ವಾಹನ ಬೆಲೆ ಏರಿಕೆ

ApolloTyres
ನವದೆಹಲಿ, ಜೂ.30: ಭಾರತದ ಎರಡನೇ ಅತಿದೊಡ್ಡ ಟೈರ್ ಉತ್ಪದನಾ ಸಂಸ್ಥೆ ತನ್ನ ಉತ್ಪನ್ನಗಳ ಬೆಲೆ ಪರಷ್ಕರಣೆ ಮಾಡಲು ನಿರ್ಧರಿಸಿದೆ. ರಬ್ಬರ್ ಬೆಲೆ ಹೆಚ್ಚಳವಾದ ಕಾರಣ, ಟೈರುಗಳ ಬೆಲೆ ಏರಿಸಲು ನಿರ್ಧರಿಸಿದ್ದು, ಮುಂದಿನ ವಾರ ಪರಿಷ್ಕೃತ ದರಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಯಿದೆ ಎನ್ನುತ್ತಾರೆ ಅಪೊಲೊ ಟೈರ್ಸ್ ನ ಮುಖ್ಯ ವಿತ್ತೀಯ ಅಧಿಕಾರಿ ಸುನಾಮ್ ಸರ್ಕಾರ್.

ನೈಸರ್ಗಿಕ ರಬ್ಬರ್ ಬೆಲೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಅನಿವಾರ್ಯವಾಗಿ ಟೈರ್ ಬೆಲೆಯನ್ನು ಏರಿಸಬೇಕಾಗಿದೆ. ಪ್ರಸಕ್ತ ವರ್ಷದಲ್ಲಿ ಈಗಾಗಲೇ ಮೂರು ಬಾರಿ ಟೈರ್ ಬೆಲೆ ಏರಿಸಲಾಗಿದ್ದು, ಶೇ.8 ರಿಂದ 10ರಷ್ಟು ಏರಿಕೆ ಕಂಡಿದೆ. ಕಂಪೆನಿಯ ಕಾರು ಟೈರ್ ಗಳ ಬೆಲೆ ರು. 1,200 ರಿಂದ 10,000ರವರೆಗೂ ಇದೆ. ವಾಣಿಜ್ಯ ವಾಹನಗಳ ಟೈರ್ ಬೆಲೆ 8,000 ರಿಂದ ರು.15,000 ಆಗಿದೆ.

ಕಳೆದ ಒಂದೂವರೆ ವರ್ಷಗಳಲ್ಲಿ ನೈಸರ್ಗಿಕ ರಬ್ಬರ್ ನ ಬೆಲೆ ಶೇ.150 ರಷ್ಟು ಏರಿಕೆ ಕಂಡಿದೆ. ಡಿಸೆಂಬರ್ 2008ರಲ್ಲಿ ಪ್ರತಿ ಕೆಜಿಗೆ 65 ಇದ್ದ ಬೆಲೆ ಈಗ ಪ್ರತಿ ಕೆಜಿಗೆ 170 ರು ಆಗಿದೆ. ಟೈರ್ ಗಳ ಬೆಲೆ ಹೆಚ್ಚಳವಾದಲ್ಲಿ ಸಹಜವಾಗಿ ವಾಹನ ಉತ್ಪಾದನಾ ವೆಚ್ಚವೂ ಹೆಚ್ಚುತ್ತದೆ. ವಾಹನಗಳ ಬೆಲೆ ಏರಿಕೆಯ ಹೊರೆ ಗ್ರಾಹಕರಿಗೆ ಕಟ್ಟಿಟ್ಟ ಬುತ್ತಿ.

Most Read Articles

Kannada
Story first published: Monday, June 18, 2012, 10:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X