ಕಾರ್ ಕೀ ಬದಲಿಗೆ ಐ ಫೋನ್ ಬಳಸಿ

Apple iPhone
ನ್ಯೂಯಾರ್ಕ್ , ಜು.27:ಕಾರ್ ಕೀ ಬಳಸದೇ ಐ ಫೋನ್ ಮೂಲಕ ಕಾರನ್ನು ಚಾಲನೆ ಮಾಡಲು ಸಾದ್ಯವೇ? ಬಹುಶಃ ಜೇಮ್ಸ್ ಬಾಂಡ್ ಚಿತ್ರಗಳಲ್ಲಿ ಮಾತ್ರ ಸಾಧ್ಯ ಎನ್ನುತ್ತಿದೀರಾ? ತಾಳಿ, ಇನ್ನು ಕೆಲವೇ ತಿಂಗಳುಗಳಲ್ಲಿ ಕೀ ಇಲ್ಲದೆ ಐ ಫೋನ್ ಬಳಸಿ ಚಾಲನೆ ಮಾಡಬಹುದಾದ ಕಾರನ್ನು ಜನರಲ್ ಮೋಟಾರ್ಸ್ ಅಮೆರಿಕದಲ್ಲಿ ಬಿಡುಗಡೆ ಮಾಡಲಿದೆ.

ಈ ನೂತನ ಐ ಫೋನ್ ಆಪ್ಸ್ ಬಳಸಿ ಕಾರನ್ನು ಚಾಲನೆ ಮಾಡುವುದು, ಅಂಗಡಿಯ ಸಾಮಾನುಗಳಿಗೆ ಆರ್ಡರ್ ನೀಡುವುದು ಹಾಗೂ ನಿಮ್ಮ ಷೇರುಗಳ ಪೋರ್ಟ್ ಫೋಲಿಯೋ ನಿರ್ವಹಣೆಯನ್ನೂ ಮಾಡುವ ಕುರಿತು ಜನರಲ್ ಮೋಟಾರ್ಸ್ ಅಭಿವೃದ್ಧಿ ಪಡಿಸುತ್ತಿದೆ.

ಈ ಫೋನ್ ನಲ್ಲಿ ರೀಮೋಟ್ ಬಳಸಿ ಕಾರನ್ನು ಬಿಸಿ ಅಥವಾ ತಂಪು ಗೊಳಿಸುವದೂ, ಕಾರಿನ ಹಾರ್ನ್ ಮತ್ತು ದೀಪಗಳನ್ನು ಆರಿಸುವದಷ್ಟೇ ಅಲ್ಲ, ಸಾವಿರಾರು ಕಾರುಗಳನ್ನು ನಿಲುಗಡೆ ಮಾಡಿದ ಸ್ಥಳದಿಂದ ನಿಮ್ಮ ಕಾರನ್ನು ಕ್ಷಣದಲ್ಲೆ ಹುಡುಕಬಹುದಾಗಿದೆ!.

ನೂತನ ಐ ಪೋನ್ ಕಾರು ಮುಂದಿನ ಕೆಲವೇ ತಿಂಗಳುಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಆಗಲಿದ್ದು, ಇದರಲ್ಲಿ ಕಾರಿನ ಇಂಧನ, ತೈಲ ಬದಲಾಯಿಸುವ ಅವಧಿ, ಟೈರುಗಳಲ್ಲಿ ಗಾಳಿಯ ಒತ್ತಡ, ಇಂಧನ ಕ್ಷಮತೆ ಎಲ್ಲವೂ ಕುಳಿತಲ್ಲೇ ತಿಳಿಯಲಿದೆ. ಆದರೆ ಈ ಹೊಸ ಮಾದರಿಯ ಉಪಕರಣವನ್ನು ಚವರ್ಲೆಟ್, ಕ್ಯಾಡಿಲಾಕ್, ಬ್ಯೂಕ್, ಮತ್ತು ಜಿಎಮ್‌ಸಿ ಕಾರುಗಳಗಳಲ್ಲಿ ಮಾತ್ರ ಮೊದಲಿಗೆ ಅಳವಡಿಸಲು ಕಂಪೆನಿ ನಿರ್ಧರಿಸಿದೆ.

ಇವುಗಳು ಅಮೆರಿಕ, ಕೆನಡಾ ಹಾಗೂ ಚೀನಾದ ಗ್ರಾಹಕರಿಗೆ ಲಭ್ಯವಾಗಲಿವೆ. ಕಾರುಗಳ ಸುರಕ್ಷತೆ ಮತ್ತು ಭದ್ರತೆಯಲ್ಲಿ ಬಳಸುವ ಆನ್ ಸ್ಟಾರ್ ಎಂಬ ವ್ಯವಸ್ಥೆಯ ಮೂಲಕ ಈ ಐ ಫೋನ್ ಕೆಲಸ ಮಾಡಲಿದೆ.

Most Read Articles

Kannada
Story first published: Tuesday, July 27, 2010, 16:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X