ಜೇಮ್ಸ್ ಬಾಂಡ್ ನ ನೆಚ್ಚಿನ ಕಾರು ಭಾರತಕ್ಕೆ

Aston Martins may drift on Indian Soils.
ಬ್ರಿಟಿಷರ ಹೆಮ್ಮೆಯ ಐಷಾರಾಮಿ ಕ್ರೀಡಾ ಕಾರು ಆಸ್ಟನ್ ಮಾರ್ಟಿನ್ಸ್ ಭಾರತ ಜನತೆಗೆ ಹೆಚ್ಚಾಗಿ ಪರಿಚಯವಿರುವುದು ಜೇಮ್ಸ್ ಬಾಂಡ್ ಮೂಲಕ ಎಂದರೆ ತಪ್ಪಾಗಲಾರದು.

1964ರಲ್ಲಿ ಅಂದಿನ ಜೇಮ್ಸ್ ಬಾಂಡ್ 007 ಸೀನ್ ಕಾನರಿ ಓಡಿಸಿದ ಆಸ್ಟನ್ ಕಾರು, 2008 ರ ಡೆನಿಯಲ್ ಕ್ರೇಗ್ ವರೆಗೂ ಜೊತೆ ಜೊತೆಯಾಗೆ ಅಂಟಿಕೊಂಡು ಬಂದಿದೆ. ಈಗ ಈ ಭರ್ಜರಿ ಕಾರು ಭಾರತಕ್ಕೆ ಎಂಟ್ರಿ ಕೊಡಲು ಸಕಲ ಸಿದ್ಧತೆ ನಡೆಸಿದೆ.

ಮುಂಬೈ ಮೂಲದ ಇನ್ಫಿನಿಟಿ ಕಾರ್ ಸಂಸ್ಥೆಯನ್ನು ಅಧಿಕೃತ ವಿತರಕರನ್ನಾಗಿ ಸಂಸ್ಥೆ ನೇಮಿಸಿದೆ. ಭಾರತದಲ್ಲಿ BMW ಕಾರುಗಳ ವಿತರಕರಾಗಿ ಇನ್ಫಿನಿಟಿ ಕಾರ್ಸ್ ಈಗಾಗಲೇ ಚಾಲ್ತಿಯಲ್ಲಿದೆ.

ಆಸ್ಟನ್ ಮಾರ್ಟಿನ್ಆರಂಭದಲ್ಲಿ V8, DB9, Rapide ಹಾಗೂ DBS ಮಾದರಿಗಳನ್ನು ಭಾರತಕ್ಕೆ ಪರಿಚಯಿಸುತ್ತಿದೆ. ಲಭ್ಯ ಮಾಹಿತಿ ಪ್ರಕಾರ ಇನ್ನೊಂದು ವಾರದಲ್ಲೇ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲು ಇನ್ಫಿನಿಟಿ ಸಂಸ್ಥೆ ತುದಿಗಾಲಲ್ಲಿ ನಿಂತಿದೆ.

ಅದರೆ, ಹೊಚ್ಚ ಹೊಸ ಕಾರು ನಿಮ್ಮ ಮನೆ ತಲುಪಲು ಐದಾರು ತಿಂಗಳಾದರೂ ಬೇಕಾದೀತು. V8 ಹಾಗೂ DB9 ಮಾದರಿ ಕಾರುಗಳ ಬೆಲೆ 1.35 ಕೋಟಿ ಹಾಗೂ 1.9 ಕೋಟಿ ರು ಗಳು ಇದ್ದರೆ, Rapide ಹಾಗೂ DBS ಕಾರುಗಳ ಬೆಲೆ 2.3 ಕೋಟಿ ಹಾಗೂ 2.8 ಕೋಟಿ ಆಗುತ್ತದೆ ಎಂದು ಇನ್ಫಿನಿಟಿ ಪ್ರಕಟಿಸಿದೆ.

1914 ರಲ್ಲಿ ಲಿಯೊನೆಲ್ ಮಾರ್ಟಿನ್ ಹಾಗೂ ರಾಬರ್ಟ್ ಬಾಮ್ ಫೋರ್ಡ್ ಎಂಬ ಉತ್ಸಾಹಿಗಳು ಕಲ್ಪನೆಯ ಕೂಸಾದ ಆಸ್ಟನ್ ಮಾರ್ಟಿನ್, 1994 ರಿಂದ 2007 ರವರೆಗೂ ಫೋರ್ಡ್ ಕಂಪೆನಿಯ ಭಾಗವಾಗಿತ್ತು.

ನಂತರ 2007 ರಲ್ಲಿ 479 ಮಿಲಿಯನ್ ಪೌಂಡ್ಸ್ ಹಣ ತೆತ್ತು ಡೇವಿಡ್ ರಿಚರ್ಡ್ಸ್ ಜಾನ್ ಸಿಂಡರ್ಸ್ ಮತ್ತು ಕುವೈಟ್ ನ ಇನ್ವೆಸ್ಟ್ ಮೆಂಟ್ ದಾರ್ ಹಾಗೂ ಅದೀಂ ಇನ್ವೆಸ್ಟ್ ಮೆಂಟ್ ಆಸ್ಟೀನ್ ಮಾರ್ಟಿನ್ ನ ಒಡೆಯರಾದರು. ವಾರ್ವಿಕ್ ಷೈರ್ ನ ಗೇಡನ್ ನಲ್ಲಿ ಸಂಸ್ಥೆಯ ಕೇಂದ್ರ ಕಚೇರಿಯಿದೆ.

Most Read Articles

Kannada
Story first published: Tuesday, June 19, 2012, 17:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X