ಹೊಸ ವರ್ಷಕ್ಕೆ ಜಿಎಂನಿಂದ ಎಲೆಕ್ಟ್ರಿಕ್ ಕಾರು

GM India Electric Cars
ನವದೆಹಲಿ, ಅ.25: ಜನರಲ್ ಮೋಟಾರ್ಸ್ ಸಂಸ್ಥೆ ತನ್ನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ಕಾರುಗಳನ್ನು ಮುಂದಿನ ವರ್ಷದ ಆರಂಭದಲ್ಲಿ ಭಾರತದ ಮಾರುಕಟ್ಟೆಗೆ ಪರಿಚಯಿಸುವುದಾಗಿ ಹೇಳಿದೆ. ಪರಿಸರಸ್ನೇಹಿಯಾದ ಈ ಕಾರುಗಳು ಬ್ಯಾಟರಿ ಶಕ್ತಿಯಿಂದ ಚಲಿಸಲಿವೆ ಎಂದು ಜಿಎಂ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಹೇಳಿದ್ದಾರೆ. ಚೆವರ್ಲೆ ಕಾರುಗಳ ಮಾರಾಟ ಉತ್ತಮವಾಗಿದ್ದು, ಮಾರುಕಟ್ಟೆ ವಿಸ್ತರಣೆಯಲ್ಲಿ ಜಿಎಂ ತೊಡಗಿದೆ.

ಸದ್ಯ ಈಗಿರುವ ರಾಜಸ್ಥಾನದ ಘಟಕವನ್ನು ಇನ್ನೆರಡು ವರ್ಷಗಳಲ್ಲಿ ಮೇಲ್ದರ್ಜೆಗೆ ಏರಿಸಲಾಗುವುದು. ಸದ್ಯ 22,500 ವಾಹನಗಳನ್ನು ಹೊರ ತರುತ್ತಿರುವ ಘಟಕವು 4 ಲಕ್ಷ ವಾಹನಗಳನ್ನು ಹೊರತರುವ ಸಾಮರ್ಥ್ಯಕ್ಕೆ ಏರಿಸುವ ಯೋಜನೆ ಜಿಎಂಗೆ ಇದೆ.

ಭಾರತದಲ್ಲಿ ಸುಮಾರು 4500 ಕೋಟಿ ರು ಬಂಡವಾಳ ಹೂಡಿಕೆ ಮಾಡಿರುವ ಜಿಎಂ, ನಿಧಾನಗತಿಯಲ್ಲಿ ಪ್ರಗತಿ ಸಾಧಿಸುತ್ತಿದೆ. ಕಳೆದ ಆರು ತಿಂಗಳಲ್ಲಿ ಶೇ.79 ರಷ್ಟು ಪ್ರಗತಿ ಸಾಧಿಸಿದೆ.

Most Read Articles

Kannada
Story first published: Thursday, June 14, 2012, 10:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X