ಡಿಸೆಂಬರ್ ನಲ್ಲಿ ಟೊಯೋಟಾ ಸಣ್ಣಕಾರು ಬುಕ್ಕಿಂಗ್

Toyota Etios
ಬೆಂಗಳೂರು, ನ.17: ಜಪಾನ್ ಮೂಲದ ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಬೆಂಗಳೂರಿನ ಬಿಡದಿ ಬಳಿ ತನ್ನ ಉತ್ಪಾದನಾ ಘಟಕವನ್ನು ವಿಸ್ತರಿಸಿದೆ. ಭಾರತದ ಗ್ರಾಹಕ ಸ್ನೇಹಿ ಎಟಿಯೋಸ್ ಸಣ್ಣಕಾರನ್ನು ತಯಾರಿಸಿದ್ದು, ಡಿಸೆಂಬರ್ ಈ ಹೊಸ ಕಾರಿನ ಬುಕ್ಕಿಂಗ್ ಆರಂಭವಾಗಲಿದೆ. ಜನವರಿಯಲ್ಲಿ ದೆಹಲಿ ಆಟೋ ಎಕ್ಸ್ ಪೋನಲ್ಲಿ ಪ್ರದರ್ಶನಗೊಂಡಿದ್ದ ಎಟಿಯೋಸ್ ಕಾರು ಗ್ರಾಹಕರ ಮೆಚ್ಚುಗೆ ಗಳಿಸಿತ್ತು.

ಇನ್ನೋವಾ, ಫಾರ್ಚ್ಯೂನರ್ ಮೂಲಕ MUV ಹಾಗೂ SUV ಮಾರುಕಟ್ಟೆಯಲ್ಲಿ ಉತ್ತಮ ನೆಲೆಯನ್ನು ಟೊಯೋಟಾ ಕಂಡುಕೊಂಡಿದೆ. ಕಿರ್ಲೋಸ್ಕರ್ ಸಹಯೋಗದೊಂದಿಗೆ 65 ಸಾವಿರ ಸೆಡಾನ್ ಮಾದರಿ ಎಟಿಯೋಸ್ ಸಣ್ಣಕಾರುಗಳನ್ನು ನಿರ್ಮಿಸಿ, ಬುಕ್ಕಿಂಗ್ ಆರಂಭಿಸಲು ಉತ್ತುಕವಾಗಿದೆ.

ಬಿಡದಿ ಬಳಿಯ ವಿಸ್ತರಣಾ ಘಟಕದ ಮೇಲೆ ಸುಮಾರು 3,200 ಕೋಟಿ ಬಂಡವಾಳ ಹೂಡಿ, ಸಣ್ಣಕಾರು ತಯಾರಿಕೆಯಲ್ಲಿ ಟೊಯೋಟಾ ತೊಡಗಿದೆ. ವಾರ್ಷಿಕವಾಗಿ ಸುಮಾರು 70 ಸಾವಿರ ವಾಹನಗಳನ್ನು ರಸ್ತೆಗಿಳಿಸಲು ಸಿದ್ಧತೆ ನದೆಸಿದೆ. ವರ್ಷಕ್ಕೆ 1.5 ದಿಂದ 2 ಲಕ್ಷ ವಾಹನಗಳನ್ನು ತಯಾರಿಸುವುದು ನಮ್ಮ ಗುರಿ. ಇದರಲ್ಲಿ ಸುಮಾರು 65 ಸಾವಿರ ವಾಹನಗಳು ಎಟಿಯೋಸ್ ಆಗಲಿವೆ ಎಂದು ಟೊಯೋಟಾ ಸಂಸ್ಥೆ ಪ್ರಕಟಿಸಿದೆ.

ಸಂಗೀತ ದಿಗ್ಗಜ ಎ.ಆರ್.ರೆಹಮಾನ್ ಅವರನ್ನು ಎಟಿಯೋಸ್ ಕಾರಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿರುವ ಟೊಯೋಟಾ, ಇನ್ನೂ ಹೊಸ ಕಾರಿನ ಬೆಲೆ ನಿರ್ಧರಿಸಿಲ್ಲ. ಶೀಘ್ರದಲ್ಲೇ ಸಣ್ಣಕಾರಿನ ಬೆಲೆ ಪ್ರಕಟಿಸಲಾಗುವುದು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಿರೋಷಿ ನಕಗವಾ ಹೇಳಿದರು.

Most Read Articles

Kannada
English summary
The hot race is getting fueled with Toyota entering into the foray with its Etios, for which the booking is scheduled for next month. Toyota Etios was at the display at the Delhi Auto Expo this January and the venture will be with the assistance from the Indian giant Kirloskar.
Story first published: Tuesday, June 19, 2012, 15:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X