ಟೊಯೋಟಾ ಒಂದೂವರೆ ಕೋಟಿ ಕಾರು ಹಿಂದಕ್ಕೆ

Toyota recall
ಮಿನಿವ್ಯಾನ್, ಕಾರ್ ಸೇರಿದಂತೆ ಸರಿ ಸುಮಾರು ಒಂದೂವರೆ ಕೋಟಿಗಿಂತಲೂ ಹೆಚ್ಚು ವಾಹನಗಳನ್ನು ಹಿಂಪಡೆಯಲು ಟೊಯೋಟಾ ಮೋಟಾರ್ಸ್ ನಿರ್ಧರಿಸಿದೆ. ಜಪಾನ್ ಮಾರುಕಟ್ಟೆಯಲ್ಲಿ ಮಾರಾಟವಾದ ಹೆಚ್ಚಿನ ವಾಹನಗಳನ್ನು ಹಿಂಪಡೆಯುತ್ತಿದೆ. ಇಂಧನ ಪೈಪ್ ನಲ್ಲಿರುವ ತೊಂದರೆ ಮತ್ತು ಇಂಧನ ಟ್ಯಾಂಕ್ ನಲ್ಲಿ ಉಂಟಾಗಿರುವ ಅತ್ಯಧಿಕ ಒತ್ತಡವನ್ನು ಸರಿಪಡಿಸಲು ಕಂಪನಿ ಇಷ್ಟೊಂದು ಪ್ರಮಾಣದಲ್ಲಿ ವಾಹನಗಳನ್ನು ಗ್ರಾಹಕರಿಂದ ವಾಪಸ್ಸು ಪಡೆಯಲಿದೆ.

ಇದರಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಳೆದ ವರ್ಷ ಜನರಲ್ ಮೋಟಾರ್ಸ್ ನ್ನು ಹಿಂದಿಕ್ಕಿ ದೊರಕಿದ ನಂಬರ್ ಒನ್ ಪಟ್ಟವನ್ನು ಟೊಯೋಟಾ ಈ ವರ್ಷ ಕಳೆದುಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.

ಇದರಲ್ಲಿ ಹೆಚ್ಚಿನ ಕಾರು, ಮಿನಿ ವ್ಯಾನ್ ಗಳನ್ನು ಜಪಾನ್ ನಿಂದ ಹಿಂಪಡೆಯಲಿದೆ. ಇದರಲ್ಲಿ ಸುಮಾರು 12 ಲಕ್ಷದಷ್ಟು ನೊಹಾ ಮಿನಿವ್ಯಾನ್, 75 ಸಾವಿರ ಕ್ರೊನ್ ಮಾಡೆಲ್, 6 ಸಾವಿರ ಟೌನೆಸ್ ವ್ಯಾನ್ ಗಳು ಸೇರಿವೆ. ಇಷ್ಟೇ ಅಲ್ಲದೇ ಜಾಗತಿಕ ಮಾರುಕಟ್ಟೆಗೆ ಮಾರಾಟ ಮಾಡಿದ ಅಂದಾಜು 14.9 ಲಕ್ಷ ಆವೆನಿಸ್ ಮಾಡೆಲ್ ಗಳನ್ನು ಹಿಂಪಡೆಯಲಿದೆ. 2000ರ ಮಾರ್ಚ್ ನಿಂದ 2008ರ ಅಕ್ಟೋಬರ್ ವರೆಗೆ ಉತ್ಪಾದಿಸಿರುವ ಮಾಡೆಲ್ ಗಳನ್ನು ವಾಪಸ್ಸು ಪಡೆಯಲಿದೆ.

ಕಂಪನಿಯ ಈ ನಿರ್ಧಾರ ಕಂಪನಿಯ ಮಾರುಕಟ್ಟೆ ಮೇಲೆಯೂ ದೊಡ್ಡ ಹೊಡೆತ ನೀಡಿದೆ. ನಿನ್ನೆ ಅಪರಾಹ್ನದ ವಹಿವಾಟಿನಲ್ಲಿ ಟೊಯೊಟಾ ಷೇರು ದರ ಶೇಕಡಾ 2ರಷ್ಟು ಕುಸಿದಿತ್ತು. ಆದರೆ ಈ ಹಿಂಪಡೆತದಿಂದ ಕಂಪನಿಗೆ ಉಂಟಾಗುವ ನಷ್ಟವನ್ನು ವಕ್ತಾರರು ಇನ್ನೂ ಬಹಿರಂಗಪಡಿಸಿಲ್ಲ.

Most Read Articles

Kannada
English summary
Toyota Motors Corp. they would recall some cars in mostly in Japan.This is to fix faulty fuel pipes and high pressure fuel pumps. Toyota recall is for cars which were manufactures between the months May2000 and October 2008.
Story first published: Wednesday, June 20, 2012, 11:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X