ಬಜೆಟ್ 2011: ಭಯ ಮತ್ತು ನಿರೀಕ್ಷೆಯಲ್ಲಿ ವಾಹನ ಕಂಪನಿಗಳು

ಹಣಕಾಸು ಸಚಿವ ಪ್ರಣಬ್ ಮುಖರ್ಜಿ 2011-12ರ ಸಾಲಿನ ಮುಂಗಡ ಪತ್ರ ಮಂಡಿಸುತ್ತಿದ್ದಾರೆ. ಸಹಜವಾಗಿಯೇ ವಾಹನ ಕಂಪನಿಗಳು ಭಾರತ-ಇಂಗ್ಲೆಂಡ್ ವಿಶ್ವಕಪ್ ಪಂದ್ಯದ ಅಂತಿಮ ಓವರ್ ನಲ್ಲಿ ಕ್ರಿಕೆಟ್ ಅಭಿಮಾನಿಗಳಿದ್ದಂತೆ ತಳಮಳದಿಂದಿವೆ. ಒಂದಿಷ್ಟು ಭಯ, ಕಾತುರ, ನಿರೀಕ್ಷೆಯಿಂದ ವಾಹನ ಕಂಪನಿಗಳು ಪ್ರಣಬ್ ಅವರನ್ನು ದಿಟ್ಟಿಸಿ ನೋಡುತ್ತಿವೆ.

ವಾಹನ ಷೇರುಗಳು ಪಂಕ್ಚರ್: ಉತ್ಪಾದನಾ ವೆಚ್ಚ ಹೆಚ್ಚಳ, ಅಬಕಾರಿ ಸುಂಕದ ಕುರಿತ ತಳಮಳದಿಂದಾಗಿ ವಾಹನ ಷೇರುಗಳು ಭಯದಲ್ಲಿದ್ದು, ಇಂದಿನ ವಹಿವಾಟಿನ ಆರಂಭದಲ್ಲಿಯೇ ವಾಹನ ಷೇರುಗಳು ಇಳಿಕೆ ಕಂಡಿವೆ. ಇಂದಿನ ವಹಿವಾಟಿನಲ್ಲಿ ಹೀರೋ ಹೋಂಡಾ ಷೇರು ದರ 1,469 ರೂ.ಗೆ ತಲುಪಿದ್ದು ಶೇ. 2ರಷ್ಟು ಇಳಿಕೆ ಕಂಡಿದೆ. ಟಾಟಾ ಮೋಟರ್ಸ್ ಮತ್ತು ಬಜಾಜ್ ಆಟೋ ಷೇರುಗಳು ಕ್ರಮವಾಗಿ 1,086 ರೂ. ಮತ್ತು 1,264 ರೂ.ಗೆ ತಲುಪಿದ್ದು ಶೇ. 1.5ರಷ್ಟು ಇಳಿಕೆ ಕಂಡಿವೆ. ಮಹೀಂದ್ರ ಮತ್ತು ಮಹೀಂದ್ರ, ಮಾರುತಿ ಸುಜುಕಿ ಷೇರುಗಳೂ ಗಣನೀಯವಾಗಿ ಇಳಿಕೆ ಕಂಡಿವೆ.

ಇಂಧನ ದರ ಹೆಚ್ಚಳ, ಹಣದುಬ್ಬರ ಏರಿಳಿತ ಮತ್ತು ಬಡ್ಡಿದರಗಳು ಏರಿಕೆ ಕಂಡರೂ ವಾಹನ ಕ್ಷೇತ್ರದ ಸಕ್ಸಸ್ ಸ್ಟೋರಿಗೆ ಏನೂ ಕುಂದಾಗಿರಲಿಲ್ಲ. ತೆರಿಗೆ ಸಂಗ್ರಹ ಗುರಿ ಮತ್ತು ಇತರ ಆದಾಯಗಳು ಏರಿಕೆ ಕಂಡು ಆರ್ಥಿಕತೆ ಗಮನಾರ್ಹ ಪ್ರಗತಿಯತ್ತ ಮುಖ ಮಾಡಿರುವುದರಿಂದ ವಾಹನ ಮಾರುಕಟ್ಟೆಯೂ ಸಾಕಷ್ಟು ಪ್ರಗತಿ ದಾಖಲಿಸಿದೆ. ಆದರೆ ಪ್ರಸಕ್ತ ಮುಂಗಡ ಪತ್ರದಲ್ಲಿ ವಾಹನೋದ್ಯಮಕ್ಕೆ ಏನು ದೊರೆಯಲಿದೆ ಮತ್ತು ಸರಕಾರ ನೀಡಿರುವ ಉತ್ತೇಜನ ಪ್ಯಾಕೇಜ್ ಗಳಲ್ಲಿ ಏನನ್ನು ಕಸಿದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

Most Read Articles

Kannada
English summary
Government presents its Budget for the next fiscal year. That time Auto Stocks in red. Hero Honda shed 2% at Rs 1,469. Tata Motors and Bajaj Auto were down 1.5% each at Rs 1,086 and Rs 1,264, respectively. Other auto stocks - Mahindra & Mahindra and Maruti Suzuki slipped as well.
Story first published: Monday, February 28, 2011, 11:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more