ಎಸ್60ಗೆ ಅತ್ಯುತ್ತಮ ಬೇಡಿಕೆ, ಲಕ್ಷುರಿಗೆ ಜೈ ಎಂದ ಗ್ರಾಹಕ

Volvo S60 Luxury Sedan
ಸ್ವೀಡನ್ ನ ಕಾರ್ ತಯಾರಿಕಾ ಕಂಪನಿ ವೊಲ್ವೊ ಭಾರೀ ಖುಷಿಯಲ್ಲಿದೆ. ಕಂಪನಿಯು ಇತ್ತೀಚೆಗೆ ದೇಶದಲ್ಲಿ ಹೊರತಂದ ವೋಲ್ವೊ ಎಸ್60ಗೆ ಗ್ರಾಹಕರಿಂದ ಅತ್ಯುತ್ತಮ ಬೇಡಿಕೆ ಕಂಡಿರುವುದೇ ಇದಕ್ಕೆ ಕಾರಣವಂತೆ. ಕಂಪನಿಯ ಇತ್ತೀಚಿನ ಐಷಾರಾಮಿ ಸೆಡಾನ್ ಕಾರ್ ಮಾರುಕಟ್ಟೆಗೆ ಬಿಡುಗಡೆಗೊಂಡ ಕೇವಲ ಒಂದೇ ವಾರದಲ್ಲಿ ಸುಮಾರು 100 ಯೂನಿಟ್ ಬುಕ್ಕಿಂಗ್ ಆಗಿದೆಯೆಂದು ಕಂಪನಿ ಪ್ರಕಟಿಸಿದೆ.

ಐಷಾರಾಮಿ ಕಾರೊಂದಕ್ಕೆ ಈ ಮಟ್ಟಿನ ಬೇಡಿಕೆ ಕಂಡು ಖುಷಿಗೊಂಡಿರುವ ವೋಲ್ವೊ ಮುಂದಿನ ದಿನಗಳಲ್ಲಿ ಇನ್ನಷ್ಟು ಲಕ್ಷುರಿ ಮಾಡೆಲ್ ಪರಿಚಯಿಸುವ ಸಾಧ್ಯತೆಯಿದೆ. ಕಂಪನಿಯು ಈಗ ಕೇವಲ ಶೇ. 0.7ರಷ್ಟು ಮಾರುಕಟ್ಟೆ ಪಾಲು ಪಡೆದಿದ್ದು ಒಟ್ಟಾರೆ ಮಾರಾಟ ಸುಮಾರು 22 ಲಕ್ಷ ಯೂನಿಟ್ ಗಳಾಗಿವೆ. ಆದರೆ ಈಗಿನ ಅತ್ಯುತ್ತಮ ಬೇಡಿಕೆಯಿಂದಾಗಿ ಮುಂದಿನ ದಿನಗಳಲ್ಲಿ ಕಂಪನಿಯ ಮಾರಾಟ ಗಣನೀಯವಾಗಿ ಏರಿಕೆ ಕಾಣುವ ನಿರೀಕ್ಷೆಯಲ್ಲಿದೆ.

ಬೆಂಗಳೂರಿನಲ್ಲೂ ಡೀಲರ್ ಷಿಪ್: ಕಂಪನಿಯು ಈ ವರ್ಷದ ಅಂತ್ಯಕ್ಕೆ ಮುನ್ನ ದೇಶದಲ್ಲಿ ಸುಮಾರು 12 ಡೀಲರ್ ಷಿಪ್ ನೆಟ್ ವರ್ಕ್ ಆರಂಭಿಸಲು ಯೋಜನೆ ಹೊಂದಿದೆ. ಈಗ ಕಂಪನಿಯು ದೆಹಲಿ, ಚಂಡಿಗಢ, ಮುಂಬೈ, ಕೊಯಮೊತ್ತುರು, ಕೊಚ್ಚಿ, ಪುಣೆ ಮತ್ತು ಹೈದರಾಬಾದ್ ಸೇರಿದಂತೆ 7 ಕಡೆಗಳಲ್ಲಿ ಡೀಲರ್ ಗಳನ್ನು ಹೊಂದಿದೆ. ಕಂಪನಿಯು ಶೀಘ್ರದಲ್ಲಿ ಬೆಂಗಳೂರು ಸೇರಿದಂತೆ ಚೆನ್ನೈ, ಕೊಲ್ಕತ್ತಾ, ಜೈಪುರ ಮತ್ತು ಅಹಮಾದಬಾದ್ ನಲ್ಲಿ ಡೀಲರ್ ಷಿಪ್ ನೆಟ್ ವರ್ಕ್ ಆರಂಭಿಸಲಿದೆ.

2020ರ ವೇಳೆಗೆ ದೇಶದ ಲಕ್ಷುರಿ ಕಾರ್ ಸೆಗ್ಮೆಂಟ್ ಸುಮಾರು 1,40,000 ದಿಂದ 1.50,000 ಯೂನಿಟ್ ಗೆ ಮುಟ್ಟುವ ನಿರೀಕ್ಷೆಯನ್ನು ವೊಲ್ವೊ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಪೌಲ್ ಡೆ ವೊಯ್ಜಿಸ್ ವ್ಯಕ್ತಪಡಿಸಿದ್ದಾರೆ. ಅವರು ಭಾರತದ ಐಷಾರಾಮಿ ಕಾರ್ ಮಾರುಕಟ್ಟೆಯ ಕುರಿತು ಆಶಾವಾದ ವ್ಯಕ್ತಪಡಿಸಿದ್ದು, ಶೀಘ್ರದಲ್ಲಿ ಇಲ್ಲಿ ವಿಶ್ವದ ಪ್ರಮುಖ ಲಕ್ಷುರಿ ಕಂಪನಿಗಳು ತಳವೂರುವ ಸಾಧ್ಯತೆಯಿದೆ ಎಂದರು.

Most Read Articles

Kannada
Story first published: Tuesday, March 22, 2011, 10:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X