ವಾಹನಗಳ ಇಂಧನ ದಕ್ಷತೆಗೆ ಸ್ಟಾರ್ ರೇಟಿಂಗ್ ಮಸೂದೆ

New fuel efficiency Norms
ವಿದೇಶಗಳಲ್ಲಿ ವಾಹನಗಳ ಇಂಧನ ದಕ್ಷತೆಗೆ ಸ್ಟಾರ್ ರೇಟಿಂಗ್ ನೀಡಲಾಗುತ್ತದೆ. ಇಂತಹ ಕಾರ್ಯತಂತ್ರ ಭಾರತದಲ್ಲೂ ಆರಂಭವಾಗಲಿದೆ. ಪರಿಸರ ಸ್ನೇಹಿ ವಾಹನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ವಾಹನಗಳ ಇಂಧನ ದಕ್ಷತೆಗೆ ರೇಟಿಂಗ್ ನೀಡುವ ಹೊಸ ಮಸೂದೆಯೊಂದನ್ನು ಈ ತಿಂಗಳ ಅಂತ್ಯದಲ್ಲಿ ಹೊರತರಲು ನಿರ್ಧರಿಸಲಾಗಿದೆ. 2015ರ ನಂತರ ಎಲ್ಲಾ ಕಂಪನಿಗಳಿಗೆ ಈ ಮಸೂದೆ ಸೂಚಿಸಿದ ಇಂಧನ ದಕ್ಷತೆ ಕಡ್ಡಾಯವಾಗಲಿದೆ.

ವಾಹನಗಳ ಇಂಧನ ದಕ್ಷತೆ ಕಂಡುಹಿಡಿಯುವ ಮಾನದಂಡ ರಚಿಸುವ ಕುರಿತು ಕಾರ್ಯಪ್ರವೃತ್ತರಾಗಿರುವುದಾಗಿ ದೇಶದ ಎನರ್ಜಿ ಎಫಿಸಿಯನ್ಸಿ ವಿಭಾಗದ ಪ್ರಧಾನ ನಿರ್ದೇಶಕ ಅಜಯ್ ಮಾಥುರ್ ಹೇಳಿದ್ದಾರೆ. ವಾಹನಗಳನ್ನು ಅವುಗಳ ತೂಕಕ್ಕೆ ಅನುಗುಣವಾಗಿ ವಿವಿಧ ಇಂಧನ ದಕ್ಷತೆಯ ರೇಟಿಂಗ್ ನೀಡಲಾಗುವುದು ಎಂದರು.

ಎಲ್ಲಾ ವಾಹನಗಳಲ್ಲಿ ಇರಬೇಕಾದ ಸರಾಸರಿ ಇಂಧನ ದಕ್ಷತೆಯನ್ನು ನಿಗದಿಪಡಿಸಲು ನಿರ್ಧರಿಸಲಾಗಿದೆ. ಆರಂಭದ ಹಂತದಲ್ಲಿ ಇದನ್ನು ಪ್ರಯಾಣಿಕ ಕಾರುಗಳಿಗೆ ಅಳವಡಿಸಲಾಗುವುದು. ನಂತರ ಸ್ಕೂಟರ್, ಬೈಕ್, ಬಸ್ ಮತ್ತು ಟ್ರಕ್ ಗಳಿಗೆ ಹಂತಹಂತವಾಗಿ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Most Read Articles

Kannada
English summary
To determine the of vehicles, the government will come out with new norms by the end of this month and looking to encourage the use of eco-friendly vehicles to combat pollution. From the year 2015, the new fuel efficiency standards will be mandatory for all companies.
Story first published: Wednesday, May 4, 2011, 11:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X