ಸೈಕಲ್ ಮೇಲೆ ವಾಕ್ ಮಾಡಿರಿ: ಆರೋಗ್ಯಕ್ಕೆ ಒಳ್ಳೇದು!

ಒಮ್ಮೆಗೆ ಎರಡು ಕೆಲಸಕ್ಕೆ ಕೈ ಹಾಕಬೇಡ. ಅದನ್ನು ಮುಗಿಸಿ ಆಮೇಲೆ ಇದನ್ನು ಮಾಡು ಅಂತ ಯಾರಾದರೂ ಬುದ್ದಿವಾದ ಹೇಳಬಹುದು. ಒಂದೇ ದೋಣಿಯಲ್ಲಿ ಪ್ರಯಾಣಿಸು, ಎರಡು ದೋಣಿಗೆ ಕಾಲಿಡಬೇಡ ಅಂತ ಹೇಳುವವರೂ ಇದ್ದಾರೆ. ಇವೆಲ್ಲ ಮಾತಿನ ಒಟ್ಟಾರೆ ತಾತ್ಪರ್ಯ ಏನಪ್ಪ ಅಂದ್ರೆ ಒಂದೇ ಸಾರಿ ಎರಡು ಕೆಲಸ ಮಾಡೋದು ಕಷ್ಟಾ ಅಂತ.

ಸೈಕಲ್ ನಿಂದ ಇಳಿದು ವಾಕ್ ಮಾಡಬಹುದು. ಆದರೆ ಸೈಕಲ್ ನಲ್ಲಿಯೇ ವಾಕಿಂಗ್ ಮಾಡಲು ಸಾಧ್ಯವಿದೆಯೇ? ಇಲ್ಲೊಂದು ಹೊಸ ಸೈಕಲ್ ಮಾರುಕಟ್ಟೆಗೆ ಬಂದಿದೆ. ಎಲಿಪ್ಪಿಗೊ 3ಸಿ(ElliptiGO 3C) ಎಂಬ ಬೈಸಿಕಲ್ ನಲ್ಲಿ ವಾಕಿಂಗ್ ಮತ್ತು ಸೈಕ್ಲಿಂಗ್ ಒಟ್ಟಾಗಿ ಮಾಡಬಹುದಾಗಿದೆ. ಇದರ ಪೆಡಲ್ ಮೇಲೆ ವಾಕಿಂಗ್ ರೀತಿ ನಡೆದರೆ ಸಾಕು ಸೈಕಲ್ ವೇಗವಾಗಿ ಸಾಗುತ್ತದೆ.

ಎಲಿಪ್ಪಿಗೊ ಎಂಬ ವಿದೇಶಿ ಕಂಪನಿಯೊಂದು ಇಂತಹ ವಿನೂತನ ಬೈಸಿಕಲ್ ಹೊರತಂದಿದೆ. ಇದರ ದರ ಸುಮಾರು 1,799 ಡಾಲರ್. ಅಂದ್ರೆ ಅಂದಾಜು 80 ಸಾವಿರ ರೂಪಾಯಿ. ವಿಶೇಷವೆಂದರೆ ಈ ಬೈಸಿಕಲ್ ನಲ್ಲಿ ಯಾವುದೇ ಸಾಮಾಗ್ರಿಗಳನ್ನು ಸಾಗಿಸಲು ಸಾಧ್ಯವಿಲ್ಲ. ಬರೀ ನೀವು ಮಾತ್ರ ವಾಕಿಂಗ್ ಮತ್ತು ಸೈಕ್ಲಿಂಗ್ ಮಾಡಬಹುದು ಅಷ್ಟೇ! ಈ ಸೈಕಲ್ ಕಿತ್ತಲೆ ಮತ್ತು ಹಸಿರು ಬಣ್ಣಗಳಲ್ಲಿ ದೊರಕುತ್ತದೆ.

Most Read Articles

Kannada
English summary
Exercise equipments maker ElliptiGO devloped a a machine that can helps you for jogging and cycling both at the same time. This latest model, the ElliptiGO 3C lets you exercise on the elliptical paddler priced at $1799 or around Rs. 80,000.
Story first published: Friday, May 6, 2011, 12:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X