ರಸ್ತೆಗಿಳಿಯಲು ಸರತಿ ಸಾಲಿನಲ್ಲಿವೆ 14 ಜಿಎಮ್ ಕಾರುಗಳು

GM India
ಕೊಲ್ಕತ್ತಾ, ಮೇ 7: ಮುಂದಿನ ಎರಡು ವರ್ಷಗಳಲ್ಲಿ ಭಾರತದಲ್ಲಿ ಸುಮಾರು 14 ಕಾರುಗಳನ್ನು ಹೊರತರಲು ಜನರಲ್ ಮೋಟರ್ಸ್ ಇಂಡಿಯಾ ನಿರ್ಧರಿಸಿದೆ. ಇದರಲ್ಲಿ ಆರು ಹೊಸ ಮಾಡೆಲ್ ಕಾರುಗಳಿರಲಿವೆ ಎಂದು ಕಂಪನಿಯ ಕಾರ್ಯನಿರ್ವಹಣಾಧಿಕಾರಿ ಹೇಳಿದ್ದಾರೆ. "ಆರು ಹೊಸ ಆವೃತ್ತಿಗಳಲ್ಲಿ ಎರಡು ವಾಣಿಜ್ಯ ಉದ್ದೇಶದ ವಾಹನಗಳಾಗಲಿವೆ. ಉಳಿದವು ಸೆಡಾನ್ ಮತ್ತು ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಆಗಿರಲಿವೆ" ಎಂದು ಜಿಎಂ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಕಾರ್ಲ್ ಶ್ಯಾಮ್ ಹೇಳಿದ್ದಾರೆ.

ಮುಂದಿನ ಏಪ್ರಿಲ್ ತಿಂಗಳಲ್ಲಿ ಕಂಪನಿಯು ಸಣ್ಣ ಷೆವರ್ಲೆ ಎಲೆಕ್ಟ್ರಿಕ್ ಕಾರೊಂದನ್ನು ಪ್ರದರ್ಶಿಸಲಿದೆ ಎಂದರು. ಇದನ್ನು ಜನರಲ್ ಮೋಟರ್ಸ್ ನ ಬೆಂಗಳೂರು ಘಟಕದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ. ಆದರೂ ಎಲೆಕ್ಟ್ರಿಕ್ ಕಾರನ್ನು ರಸ್ತೆಗೆ ಯಾವಾಗ ಬಿಡ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದ್ದಾರೆ.

2012 ಮತ್ತು 2013ರ ವರ್ಷಗಳಲ್ಲಿ ಜನರಲ್ ಮೋಟರ್ಸ್ ಎರಡರಿಂದ ಮೂರು ಲಕ್ಷ ಕಾರುಗಳನ್ನು ಮಾರಾಟ ಮಾಡಲು ಯೋಜಿಸಿದೆ. ಕಳೆದ ವರ್ಷದ ದೇಶದ ಕಾರು ಮಾರುಕಟ್ಟೆ ಒಟ್ಟಾರೆ ಶೇಕಡಾ 30ರಷ್ಟು ಪ್ರಗತಿ ಕಂಡಿದೆ. ಇದರಲ್ಲಿ ಜನರಲ್ ಮೋಟರ್ಸ್ ಮಾರಾಟವು ಶೇಕಡಾ 60ರಷ್ಟು ಏರಿಕೆ ಕಂಡಿದೆ ಎಂದರು.

Most Read Articles

Kannada
English summary
GM India will launch 14 variants of six new models in the country in the next two years. Among the six, two will be commercial vehicles and other models will be SUV and Sedan.
Story first published: Saturday, May 7, 2011, 12:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X