ಅಪಘಾತ ರಹಿತ ಚಾಲನೆಗೆ ಟಾಟಾ ಮೋಟರ್ಸ್ ತರಬೇತಿ

Mysore Sumukh Driving
ಪುಣೆ, ಜೂನ್ 23: ಇಲ್ಲಿನ ಭೋಸಾರಿ ಪ್ರದೇಶದಲ್ಲಿರುವ ಕೇಂದ್ರ ರಸ್ತೆ ಸಾರಿಗೆ ಸಂಸ್ಥೆ(ಸಿಐಆರ್ಟಿ)ಯ ಪಕ್ಕದಲ್ಲಿ ಚಾಲಕರಿಗೆ ತರಬೇತಿ ನೀಡುವ ಕೇಂದ್ರವೊಂದನ್ನು ಟಾಟಾ ಮೋಟರ್ಸ್ ಆರಂಭಿಸಲಿದೆ.

ಭಾರತದ ವಾಹನ ಚಾಲಕರು ದಕ್ಷತೆಯಿಂದ ವಾಹನ ಚಲಾಯಿಸುವಂತೆ ರೂಪಿಸುವುದು ಇದರ ಉದ್ದೇಶವೆಂದು ಕಂಪನಿಯ ಪ್ರಾದೇಶಿಕ ಎಂಡಿ ಪ್ರಕಾಶ್ ತೆಲಂಗ್ ಹೇಳಿದ್ದಾರೆ.

"ದೇಶದಲ್ಲಿ ಅತ್ಯಧಿಕ ಪ್ರಮಾಣದ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಚಾಲಕರಿಗೆ ಸೂಕ್ತ ತರಬೇತಿಯ ಕೊರತೆಯಿಂದ ಇಂತಹ ಹೆಚ್ಚಿನ ಅಪಘಾತಗಳು ಸಂಭವಿಸುತ್ತವೆ" ಎಂದರು.

ಇಂತಹ ಅಪಘಾತಗಳನ್ನು ತಡೆಗಟ್ಟಲು, ಉತ್ತಮ ಚಾಲನಾ ತಂತ್ರಗಳನ್ನು ಕಲಿಸಲು ಟಾಟಾ ಮೋಟರ್ಸ್ ವಿನೂತನ ಚಾಲನಾ ತರಬೇತಿ ಪ್ರಯತ್ನ ಮಾಡಲಿದೆ" ಎಂದು ತೆಲಂಗ್ ಹೇಳಿದ್ದಾರೆ.

ಕಂಪನಿಯು ಈಗಾಗಲೇ ಭಾಟಿಂಡ, ಪಂಜಾಬ್ ಸೇರಿದಂತೆ ಆರು ಕಡೆ ಚಾಲಕ ತರಬೇತಿ ಕೇಂದ್ರಗಳನ್ನು ತೆರೆದಿದೆ. ಕರ್ನಾಟಕದಲ್ಲೂ ಇಂತಹ ತರಬೇತಿ ಕೇಂದ್ರವನ್ನು ಕೆಲವು ತಿಂಗಳಲ್ಲಿ ತೆರೆಯುವ ನಿರೀಕ್ಷೆಯಿದೆ.

Most Read Articles

Kannada
English summary
"Tata Motors will open drivers training centre on an area of 14-acre at the Central Institute of Road Transport (CIRT), Bhosari" Company officials Said.
Story first published: Wednesday, June 20, 2012, 11:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X