ಹೀರೋ ಹೋಂಡಾ ಇನ್ನು ಮುಂದೆ ಹೀರೋ ಮೋಟೊಕಾರ್ಪ್

ಹೀರೋ ಹೋಂಡಾದ ಹೊಸ ಹೆಸರು ಹೀರೋ ಮೋಟೊಕಾರ್ಪ್ ಎಂದು ಬದಲಾಗಲಿದೆ ಎಂದು ನಾವು ಈ ಹಿಂದೆ ವರದಿ ಮಾಡಿದ್ದೇವು. ಅದೀಗ ನಿಜವಾಗಿದೆ. ಕಂಪನಿ ಇಂದು ಹೊಸ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದೆ. ಹೀರೋ ಹೋಂಡಾ ಕಂಪನಿಯು ತನ್ನ ಹೆಸರನ್ನು ಹೀರೋ ಮೋಟೊಕಾರ್ಪ್ ಲಿಮಿಟೆಡ್ ಎಂದು ಔಪಚಾರಿಕ ಸಮಾರಂಭವೊಂದರಲ್ಲಿ ಬದಲಾಯಿಸಿಕೊಂಡಿದೆ.

ದೇಶದ ರಸ್ತೆಯಲ್ಲಿ 26 ವರ್ಷಕ್ಕಿಂತ ಹೆಚ್ಚು ವರ್ಷ ಮೋಡಿ ಮಾಡಿದ "ಹೀರೋ ಹೋಂಡಾ" ಹೆಸರು ಇನ್ನಿಲ್ಲ. ದೇಶದ ಬೃಹತ್ ದ್ವಿಚಕ್ರ ವಾಹನ ತಯಾರಿಕಾ ಕಂಪನಿಗಿನ್ನು ಹೊಸ ಹೆಸರು. ಜಪಾನಿನ ಹೋಂಡಾದೊಂದಿಗೆ ಮೈತ್ರಿ ಕಡಿದುಕೊಂಡ ನಂತರ ಹೊಸ ಹೆಸರು ಸೃಷ್ಟಿಸುವ ಅನಿವಾರ್ಯತೆ ಕಂಪನಿಗೆ ಒದಗಿತ್ತು.

ಇದರೊಂದಿಗೆ ಹೊಸ ಬ್ರಾಂಡ್ ಐಡೆಂಟಿಟಿಯನ್ನು ಮುಂದಿನ ತಿಂಗಳು ಲಂಡನಿನಲ್ಲಿ ಅನಾವರಣಗೊಳಿಸಲಾಗುವುದು ಎಂದು ಕಂಪನಿ ಹೇಳಿದೆ. "ಕಂಪನಿಯು ಔಪಚಾರಿಕವಾಗಿ ಹೆಸರನ್ನು ಹೀರೋ ಮೋಟೊಕಾರ್ಪ್ ಲಿಮಿಟೆಡ್ ಎಂದು ಬದಲಾಯಿಸಿಕೊಂಡಿದೆ. ಇದಕ್ಕೆ ರಿಜಿಸ್ಟರ್ ಆಫ್ ಕಂಪನೀಸ್ ಅನುಮೋದನೆ ನೀಡಿದೆ" ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ ತಿಂಗಳು ಕಂಪನಿಯ ಷೇರುದಾರರು ಹೆಸರು ಬದಲಾಯಿಸಲು ಅನುಮೋದನೆ ನೀಡಿದ್ದರು.

"ಇದು ಕೇವಲ ಹೆಸರಿನ ಬದಲಾವಣೆಯಲ್ಲ. ಕಂಪನಿಯ ಕನಸು, ಗುರಿ. ಸಾಧನೆಗೆ ಹೊಸ ಶಕೆಯಾಗಿದೆ" ಎಂದು ಹೀರೋ ಮೋಟೊಕಾರ್ಪ್ ಚೇರ್ಮನ್ ಬ್ರಿಜ್ಮೊಹನ್ ಲಾಲ್ ಹೇಳಿದ್ದಾರೆ. ಕಂಪನಿಯು ಈ ತಿಂಗಳ ಆರಂಭದಲ್ಲಿ specialistWolff Olin ಕಂಪನಿಯನ್ನು ಬ್ರಾಂಡ್ ಐಡೆಂಟಿಟಿ ನಿರ್ಮಾಣಕ್ಕಾಗಿ ನೇಮಿಸಿದೆ.

Most Read Articles

Kannada
English summary
Hero Honda, India's leading two-wheeler manufacturer has finally made its name change official. The company will now call itself as the Hero MotoCorp Ltd. the announcement was made days before the company would announce its global strategy in London. The company had sough approval from its share holders to change its name to Hero MotoCorp after its joint venture partner Honda Motors of Japan decided to leave the partnership. The company also sought approval from necessary government authorities after getting approval from its shareholders.
Story first published: Friday, July 29, 2011, 15:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X