ನಾಥುರಾಮ್ ಗೋಡ್ಸೆ ಬಳಸಿದ ಕಿಲ್ಲರ್ ಕಾರು

Nathuram Godse
ನಾಥುರಾಮ್ ಗೋಡ್ಸೆ ಎಲ್ಲರಿಗೂ ಚಿರಪರಿಚಿತ ಹೆಸರು. ಮಹಾತ್ಮ ಗಾಂಧೀಜಿಯನ್ನು ಹತ್ಯೆ ಮಾಡಿದ ನಾಥೂರಾಮ್ ಬಳಸಿದ ಕಾರು ಈಗಲೂ ವಾಹನ ಸಂಗ್ರಹಕರೊಬ್ಬರ ಬಳಿಯಿದೆ.

ಸ್ಟಡೆಬೇಕರ್ ಎಂಬ ನಾಲ್ಕು ಡೋರಿನ ಸೆಡಾನ್ ಕಾರನ್ನು ನಾಥೂರಾಮ್ ಗೋಡ್ಸೆ ಬಳಸಿದ್ದ. ಅದು ಕೂಡ ಬಾಪೂಜಿಯನ್ನು ಹತ್ಯೆ ಮಾಡಿದ ಸಮಯದಲ್ಲಿ. ಈ ಕಾರಣಕ್ಕಾಗಿ ಈ ಕಾರಿಗೆ ಇಷ್ಟೊಂದು ಮಹತ್ವ. ಸದ್ಯ ಈ ಕಾರು ದೆಹಲಿಯ ಪರ್ವೆಜ್ ಜಮಾಲ್ ಸಿದ್ಧೀಕ್ ಬಳಿಯಿದೆ. ಆ ಕಾರಿಗೆ ಕಿಲ್ಲರ್ ಎಂದು ಹೆಸರಿಡಲಾಗಿದೆ.

ಬಿರ್ಲಾ ಭವನ್ ಮುಂದೆ ನಾಥೂರಾಮ್ ಗೋಡ್ಸೆ 1948 ಜನವರಿ 30ರಂದು ಮಹಾತ್ಮ ಗಾಂಧೀಜಿ ಹತ್ಯೆಯ ಸಮಯದಲ್ಲಿ ಇದೇ ಕಾರನ್ನು ಬಳಸುತ್ತಿದ್ದ. 6 ಸಿಲಿಂಡರಿನ 40 ಹಾರ್ಸ್ ಪವರ್ ನೀಡುವ ಸ್ಟಡೆಬೇಕರ್ ಕಾರು 1930ರ ಮಾಡೆಲ್. ಈ ಕಾರನ್ನು ಆಟೋಮ್ಯಾಟಿಕ್ ಮತ್ತು ಮ್ಯಾನುಯಲ್ ಗೇರ್ ಗಳಲ್ಲಿ ಡ್ರೈವ್ ಮಾಡಬಹುದು. ಇಂತಹ ಆಯ್ಕೆ 1930ರ ಕಾಲದ ಕಾರುಗಳಲ್ಲಿ ಅಪರೂಪ.

ನಾಥೂರಾಮ್ ಗೋಡ್ಸೆ ಜೈಲು ಸೇರಿದ ನಂತರ ಈ ಕಾರನ್ನು ಆಂಗ್ಲೋ ಇಂಡಿಯನ್ ಸೈನಿ ಕ್ಯಾಲಿಬ್ ಎಂಬವರು ಖರೀದಿಸಿದ್ದರು. 1978ರಲ್ಲಿ ವಾರಾಣಸಿ ಮೂಲದ ಉದ್ಯಮಿ ಹರಾಜಿನಲ್ಲಿ ಈ ಕಾರನ್ನು ತನ್ನದಾಗಿಸಿಕೊಂಡರು. 1999ರಲ್ಲಿ ಆ ಉದ್ಯಮಿ ಪರ್ವೆಜ್ ಗೆ ಮಾರಾಟ ಮಾಡಿದ್ದ. ಸದ್ಯ ಕಿಲ್ಲರ್ ಕಾರು ಪರ್ವೆಜ್ ಬಳಿಯಿದೆ. ಪರ್ವೆಜ್ ಸಂಗ್ರಹದಲ್ಲಿ ಹನ್ನೆರಡು ವಿಂಟೇಜ್ ಕಾರು ಮತ್ತು 15 ಬೈಕುಗಳಿವೆ.

Most Read Articles

Kannada
English summary
This is the car that Godse rode. Killer, Nathuram Godse's 1930 Studebaker, which he reportedly rode on the day of Gandhi's murder, stands shining at a dingy Delhi garage. (Courtesy: Mid-day report)
Story first published: Saturday, August 13, 2011, 15:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X