ಮುಂದುವರೆದ ಬೆಂಗಳೂರು ಬಾಷ್ ನೌಕರರ ಮುಷ್ಕರ

Bangalore Bosch workers hunger strike
ಬೆಂಗಳೂರು, ಅ 08: ಮಾರುತಿ ಸುಜುಕಿ ನೌಕರರ 33 ದಿನಗಳ ಸುದೀರ್ಘ ಪ್ರತಿಭಟನೆಗೆ ಆಟೋ ಉದ್ಯಮವೇ ಕಂಗಲಾಗಿತ್ತು. ಇದೀಗ ಬೆಂಗಳೂರಿನ ಬಾಷ್ ಕಂಪನಿಯ 2,500 ನೌಕರರ ಉಪವಾಸ ಮುಷ್ಕರ ಆರಂಭವಾಗಿ 7 ದಿನಗಳಾಗಿವೆ. ಕಂಪನಿಯು ಮುಂದಿನ ಸುತ್ತಿನ ಮಾತುಕತೆಯನ್ನು ಸೋಮವಾರ ನಡೆಸಲಿದೆ.

ಐಟಿ ಬಿಟಿ ಕ್ಷೇತ್ರಕ್ಕೆ ಸೀಮಿತವಾಗಿದ್ದ ಹೊರಗುತ್ತಿಗೆ ಜಾಡ್ಯವನ್ನು ಆಟೋಮೊಬೈಲ್ ಕ್ಷೇತ್ರದಲ್ಲಿ ಪರಿಚಯಿಸಲು ಸಿದ್ಧತೆ ನಡೆಸಿರುವ ಬಾಷ್ ಕಂಪನಿ ಮ್ಯಾನೇಜ್ಮೆಂಟ್ ವಿರುದ್ಧ ಬಾಷ್ ನೌಕರರು ಪ್ರತಿಭಟನೆ ಆರಂಭಿಸಿದ್ದರು. ಮೈಕೊ ನೌಕರರ ಸಂಘ(ಎಂಇಎ)ಸಂಪೂರ್ಣ ಬೆಂಬಲದೊಂದಿಗೆ ಪ್ರತಿಭಟನೆಯ ಕಾವು ಹೆಚ್ಚಿದೆ.

"ಸಹಾಯಕ ಕಾರ್ಮಿಕ ಕಮಿಷನರ್ ಗುರುದಾಸ್ ಭಟ್ ಆಯುಧ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದ್ದರು. ಆದರೆ ನಮ್ಮ ಮುಷ್ಕರಕ್ಕೆ ಯಾವುದೇ ಪ್ರತಿಫಲ ದೊರಕದೇ ಇರುವುದರಿಂದ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದ್ದೇವೆ" ಎಂದು ಮೈಕೊ ಸಂಘದ ಸದಸ್ಯ ರಾಘವೇಂದ್ರ ಹೇಳಿದ್ದಾರೆ.

"ಮ್ಯಾನೆಜ್ ಮೆಂಟ್ ಮತ್ತು ಮೈಕೊ ಸಂಘವು 2009-2012ರವರೆಗೆ ಮಾಡಿಕೊಂಡ ವೇತನ ಸೆಟ್ಲ್ ಮೆಂಟ್ ಒಪ್ಪಂದವನ್ನು ಕಂಪನಿ ಉಲ್ಲಂಘಿಸಿದೆ. ಒಪ್ಪಂದ ಉಲ್ಲಂಘಿಸಿರುವ ವಿರುದ್ಧ ಕಾನೂನು ಸಮರವನ್ನೂ ಆರಂಭಿಸುವ ಯೋಜನೆಯೂ ಮೈಕೊ ಸಂಘಕ್ಕಿದೆ" ಎಂದು ವರದಿಯೊಂದು ಹೇಳಿದೆ.

ವಿಶ್ವದ ಅತಿದೊಡ್ಡ ಆಟೋಮೋಟಿವ್ ಸಾಮಾಗ್ರಿಗಳ ಉತ್ಪಾದನಾ ಸಂಸ್ಥೆ ಬಾಷ್ ನ 2,500ಕ್ಕೂ ನೌಕರರು ದೈನಂದಿನ ಕೆಲಸ ಬಿಟ್ಟು ಅಕ್ಟೋಬರ್ ಎರಡರಿಂದ ಧರಣಿ ಕೂತಿದ್ದಾರೆ. ಕಂಪನಿಯ ಹೊರಗುತ್ತಿಗೆ ನಿರ್ಣಯದಿಂದ ಹಲವಾರು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ನಮ್ಮ ಬೇಡಿಕೆ ಈಡೇರುವವರೆಗೂ ನಾವು ಹೋರಾಟ ನಿಲ್ಲಿಸುವುದಿಲ್ಲ ಎಂದು ಮೈಕೊ ಸಂಘ ಹೇಳಿದೆ.

Most Read Articles

Kannada
English summary
Bangalore Bosch's Adugodi facility workers relay hunger strike enters 7th day. The strike by Bosch employees, against the company management's decision to outsource certain manufacturing processes carried out at the plant. Bosch employees and Bosch management next round of talks on Monday.
Story first published: Saturday, October 8, 2011, 11:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X