ಫೋರ್ಸ್ ಒನ್ ಗೆ ಧುಮುಕಿದ ಅಮಿತಾಬ್ ಬಚ್ಚನ್

ಶೀಘ್ರದಲ್ಲಿ ಟಿವಿ ಚಾನೆಲ್ ಗಳಲ್ಲಿ ಅಮಿತಾಬ್ ಬಚ್ಚನ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಫೋರ್ಸ್ ಮೋಟರಿನ ಸ್ಪೋರ್ಟ್ಸ್ ಕಾರು ಫೋರ್ಸ್ ಒನ್ ಟೆಲಿವಿಷನ್ ಜಾಹೀರಾತು ಶೂಟಿಂಗ್ ಭರದಿಂದ ನಡೆಯುತ್ತಿದೆ. ಇದರಲ್ಲಿ ಕಂಪನಿಯ ಬ್ರಾಂಡ್ ಅಂಬಾಸಡರ್ ಅಮಿತಾಬ್ ನಟಿಸುತ್ತಿದ್ದಾರೆ.

ಕಂಪನಿಯು ಇತ್ತೀಚೆಗೆ ದೇಶದ ಮಾರುಕಟ್ಟೆಗೆ ಫೋರ್ಸ್ ಒನ್ ಸ್ಪೋರ್ಟ್ಸ್ ಕಾರು ಪರಿಚಯಿಸಿತ್ತು. ಇದಕ್ಕೆ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ಹೊಸ ಟೆಲಿವಿಷನ್ ಜಾಹೀರಾತು ಮೂಲಕ ಇನ್ನಷ್ಟು ಗ್ರಾಹಕರನ್ನು ಸೆಳೆಯುವ ಪ್ರಯತ್ನಕ್ಕೆ ಕಂಪನಿ ಕೈಹಾಕಿದೆ.

ಫೋರ್ಸ್ ಒನ್ ಕಾರಿನ ಬ್ರಾಂಡ್ ರಾಯಭಾರಿಯಾಗಿ ಅಮಿತಾಬ್ ಬಚ್ಚನ್ ಇತ್ತೀಚೆಗೆ ನೇಮಕಗೊಂಡಿದ್ದರು. ರಾಜಸ್ಥಾನದ ಸುಂದರ ತಾಣಗಳಲ್ಲಿ ಜಾಹೀರಾತು ಶೂಟಿಂಗ್ ನಡೆಯುತ್ತಿದೆ.

ಈ ಟೆಲಿವಿಷನ್ ಕಮರ್ಷಿಯಲ್ ಜಾಹೀರಾತಿಗೆ ಶೇಖರ್ ಕಪೂರ್ ನಿರ್ದೇಶನವಿದೆ. ಮಸೊಮ್, ಮಿಸ್ಟರ್ ಇಂಡಿಯಾ, ಬಂಡಿತ್ ಕ್ವೀನ್ ಮತ್ತು ಎಲಿಜಬೆತ್ ಸಿನಿಮಾ ನಿರ್ದೇಶನದ ಮೂಲಕ ಈಗಾಗಲೇ ಶೇಖರ್ ಕಪೂರ್ ಜನಪ್ರಿಯರಾಗಿದ್ದಾರೆ.

ಆಸ್ಕರ್ ಪ್ರಶಸ್ತಿ ಆಯ್ಕೆ ಪಟ್ಟಿವರೆಗೆ ಶೇಖರ್ ಕಪೂರ್ ಎಲಿಜಬೆತ್ ಸಿನಿಮಾ ಹೋಗಿತ್ತು. 2000ನೆ ಇಸವಿಯಲ್ಲಿ ಶೇಖರ್ ಕಪೂರ್ ಪದ್ಮಶ್ರಿ ಪ್ರಶಸ್ತಿ ಪಡೆದಿದ್ದರು. ಇನ್ಕ್ರೆಡಿಬಲ್ ಇಂಡಿಯಾ, ಟಾಟಾ ಸಫಾರಿ, ರೈಡ್ ಆಂಡ್ ಟೇಲರ್, ಬಜಾಜ್ ಆವೆಂಜರ್ ಜಾಹೀರಾತು ಮೂಲಕ ಜನಪ್ರಿಯರಾಗಿರುವ ಮೋಹನನ್ ಛಾಯಗ್ರಾಹಣವಿದೆ.

ಫೋರ್ಸ್ ಒನ್ ಕಾರು: ಫೋರ್ಸ್ ಮೋಟರಿನ ಮೊದಲ ಪ್ರಯಾಣಿಕ ಕಾರು. ಫೋರ್ಸ್ ಒನ್ ಕಾರು 4 ವೀಲ್ ಡ್ರೈವ್ ಮತ್ತು 2 ವೀಲ್ ಡ್ರೈವ್ ಆವೃತ್ತಿಗಳಲ್ಲಿ ದೊರಕುತ್ತಿದೆ. ನೂತನ ಫೋರ್ಸ್ ಒನ್ ಕಾರಿನ ಎಕ್ಸ್ ಶೋರೂಂ ದರ 10.65 ಲಕ್ಷ ರುಪಾಯಿ ಆಗಿದೆ. (ಹೆಚ್ಚಿನ ಮಾಹಿತಿಗಾಗಿ "ಫೋರ್ಸ್ ಒನ್" ಕ್ಲಿಕ್ ಮಾಡಿರಿ)

Most Read Articles

Kannada
English summary
Force Motors to soon kick off its new TV commercial ad about SUV Force One with Brand Ambassador Amitabh Bachchan. Force Motors recently Launched Its First Sports Utility Vehicle Force One with a price tag of Rs. 10.65 lakhs (Ex-Showroom).
Story first published: Monday, October 17, 2011, 11:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more