ದೇಶದಲ್ಲಿ ಫೋರ್ಸ್ ಮೋಟರ್ಸ್ 1 ಸಾವಿರ ಕೋಟಿ ರು. ಹೂಡಿಕೆ

Force Motors 1,000 Crore Investment For India
ದೇಶದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಸುಮಾರು 1 ಸಾವಿರ ಕೋಟಿ ರುಪಾಯಿ ಹೂಡಿಕೆ ಮಾಡಲು ಫೋರ್ಸ್ ಮೋಟರ್ಸ್ ನಿರ್ಧರಿಸಿದೆ. ಇದು ದೇಶದ ಪ್ರಮುಖ ವಾಣಿಜ್ಯ ವಾಹನ ತಯಾರಿಕಾ ಕಂಪನಿ ಮತ್ತು ಪ್ರೀಮಿಯಂ ಫೋರ್ಸ್ ಒನ್ ಸ್ಪೋರ್ಟ್ಸ್ ಕಾರು ತಯಾರಿಕಾ ಕಂಪನಿಯಾಗಿದೆ. ಕಂಪನಿಯು ದೇಶಕ್ಕೆ ಹೊಸ ವಾಹನಗಳನ್ನು ಪರಿಚಯಿಸುವ ಉದ್ದೇಶದಿಂದ ಈ ಬೃಹತ್ ಹೂಡಿಕೆ ಮಾಡಲು ನಿರ್ಧರಿಸಿದೆ.

ಹೈದರಾಬಾದಿನಲ್ಲಿ ಫೋರ್ಸ್ ಮೋಟರ್ಸ್ ಉದ್ಘಾಟಿಸಿದ ಸಂದರ್ಭದಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಸನ್ ಫಿರೊಡಿಯಾ ಹೂಡಿಕೆ ಯೋಜನೆ ಕುರಿತು ತಿಳಿಸಿದ್ದಾರೆ. ಕಂಪನಿಯು ಇತ್ತೀಚೆಗೆ ದೇಶದ ಮಾರುಕಟ್ಟೆಗೆ ಫೋರ್ಸ್ ಒನ್ ಸ್ಪೋರ್ಟ್ಸ್ ಕಾರು ಪರಿಚಯಿಸಿತ್ತು. ಇದು ಕಂಪನಿಯ ಮೊದಲ ಪ್ರಯಾಣಿಕ ವಾಹನ ಕೂಡ ಹೌದು.

ಜರ್ಮನಿಯ ಜಂಟಿ ಉದ್ಯಮ ಮ್ಯಾನ್ ಟ್ರಕ್ಸ್ ಕಂಪನಿಯಲ್ಲಿರುವ ತನ್ನ ಪಾಲನ್ನು ಸುಮಾರು 950 ಕೋಟಿ ರು.ಗೆ ಮಾರಾಟ ಮಾಡಲು ಕೂಡ ಫೋರ್ಸ್ ಮೋಟರ್ಸ್ ನಿರ್ಧರಿಸಿದೆ. ಕಂಪನಿಯು ಮ್ಯಾನ್ ಟ್ರಕ್ಸ್ ಜೊತೆಗೆ ಬಸ್ ಮತ್ತು ಟ್ರಕ್ ಉತ್ಪಾದಿಸುತ್ತಿದೆ. ಫೋರ್ಸ್ ಮೋಟರ್ಸ್ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಹೆಚ್ಚು ಪಾಲು ಪಡೆಯಲು ಪ್ರಯತ್ನಿಸುತ್ತಿದೆ.

Most Read Articles

Kannada
English summary
Force Motors, the leading Indian commercial vehicle manufacturer and the builder of the Force One premium SUV has announced plans to invest a whopping Rs.1000 crores in India in the next two years. This huge investment will be utilized for new product development.
Story first published: Wednesday, November 23, 2011, 14:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X