ಫೋರ್ಸ್ ಮೋಟರ್ಸ್ ಹೊಸ ಹೈಬ್ರಿಡ್ ಟ್ರಾವೆಲರ್

Force Motors Set To Launch Hybrid Traveller
ಅತ್ಯಧಿಕ ಮಾರಾಟದ ವ್ಯಾನ್ "ಟ್ರಾವೆಲರ್"ನ ಹೈಬ್ರಿಡ್ ಆವೃತ್ತಿಯನ್ನು ಹೊರತರಲು ಫೋರ್ಸ್ ಮೋಟರ್ಸ್ ನಿರ್ಧರಿಸಿದೆ. ನೂತನ ಹೈಬ್ರಿಡ್ ಟ್ರಾವೆಲರನ್ನು ಮುಂದಿನ ತಿಂಗಳು ದೆಹಲಿಯಲ್ಲಿ ನಡೆಯಲಿರುವ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಲು
ದೇಶದ ಪ್ರಮುಖ ವಾಣಿಜ್ಯ ವಾಹನ ತಯಾರಿಕಾ ಕಂಪನಿ ನಿರ್ಧರಿಸಿದೆ.

ಹೈಬ್ರಿಡ್ ಟ್ರಾವೆಲರ್ ಮುಂದಿನ ವರ್ಷದ ಅಂತ್ಯದ ವೇಳೆಗೆ ರಸ್ತೆಗಿಳಿಯುವ ನಿರೀಕ್ಷೆಯಿದೆ. ಫೋರ್ಸ್ ಮೋಟರ್ಸ್ ಜರ್ಮನಿಯ ಡೈಮ್ಲಾರ್ ಕಂಪನಿಯೊಂದಿಗೆ ದೀರ್ಘಕಾಲದ ಪಾಲುದಾರಿಕೆ ಹೊಂದಿದೆ. ಇವೆರಡು ಕಂಪನಿಗಳ ಮೈತ್ರಿಯ ಫಲವಾಗಿ ಟ್ರಾವೆಲರ್ ರಸ್ತೆಗಿಳಿದಿತ್ತು.

ಡೈಮ್ಲಾರ್ ಪರವಾನಿಗೆಯಲ್ಲಿ ಫೋರ್ಸ್ ಮೋಟರ್ ನೂತನ ವಾಹನ ಅಭಿವೃದ್ಧಿಪಡಿಸುತ್ತಿದೆ. "ದೆಹಲಿ ವಾಹನ ಪ್ರದರ್ಶನದಲ್ಲಿ ನಾವು ಟ್ರಾವೆಲರ್ ಹೈಬ್ರಿಡ್ ಅವೃತ್ತಿಯನ್ನು ಪ್ರದರ್ಶಿಸಲಿದ್ದೇವೆ. ಇದು ಸೋಲರ್ ಮತ್ತು ಹೈಬ್ರಿಡ್ ತಂತ್ರಜ್ಞಾನದಿಂದ ಚಾಲನೆಗೊಳ್ಳುವ ವ್ಯಾನ್ ಆಗಿರಲಿದೆ" ಎಂದು ಫೋರ್ಸ್ ಮೋಟರ್ಸ್ ಎಂಡಿ ಪ್ರಸನ್ ಫಿರೊಡಿಯಾ ಹೇಳಿದ್ದಾರೆ.

ಇದರೊಂದಿಗೆ ಟ್ರಾವೆಲರ್ ಸಿಎನ್ ಜಿ ಎಂಜಿನ್ ಆಯ್ಕೆಯಲ್ಲೂ ದೊರಕಲಿದೆ. ಇದು ಕೂಡ ಜನವರಿ 5-11ರವರೆಗೆ ದೆಹಲಿಯಲ್ಲಿ ನಡೆಯಲಿರುವ ವಾಹನ ಪ್ರದರ್ಶನದಲ್ಲಿರಲಿದೆ. ಇದರೊಂದಿಗೆ ಫೋರ್ಸ್ ಮೋಟರ್ ಒಂಬತ್ತು ಸೀಟಿನ ವ್ಯಾನ್ ನಿರ್ಮಿಸಲು ಪರವಾನಿಗೆ ಪಡೆದಿದ್ದು, ಇದು 2013ಕ್ಕೆ ರಸ್ತೆಗಿಳಿಯಲಿದೆ. ಇದರ ದರ 12ರಿಂದ 15 ಲಕ್ಷ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.

Most Read Articles

Kannada
English summary
Force Motors, one of India's leading commercial vehicle manufacturer has announced plans to launch a hybrid version of its top selling van Traveller. The Hybrid Traveller will be displayed first at the forthcoming Delhi Auto Expo and it will be then launched before the end of 2012.
Story first published: Friday, December 23, 2011, 16:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X