ಸಂಚಾರಿ ನಿಯಮ ಉಲ್ಲಂಘನೆ: ಪೋಪ್ ವಿರುದ್ಧ ಕೇಸ್

ಕ್ಯಾಥೋಲಿಕ್ ಧರ್ಮಗುರು, ರೋಮ್ ನ ಬಿಷಪ್, ಪೋಪ್(265ನೇ ಪೋಪ್) ಬೆಂಡಿಕ್ಟ್ XVI ವಿರುದ್ಧ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ. ಜರ್ಮನಿಯ ಪ್ರವಾಸ ಮುಗಿಸಿ ಬರುವಾಗ ತನ್ನ ವಾಹನದಲ್ಲಿ ಸೀಟು ಬೆಲ್ಟ್ ಧರಿಸದೇ ಇರುವುದು ಸಂಚಾರಿ ನಿಯಮ ಉಲ್ಲಂಘನೆ ಎಂದು ಪೋಪ್ ವಿರುದ್ಧ ಲೀಗಲ್ ಪ್ರಕರಣದ ದಾಖಲಿಸಲಾಗಿದೆ.

ಪೋಪ್ ಹಲವಾರು ಬಾರಿ ಸೀಟು ಬೆಲ್ಟ್ ಧರಿಸದೇ ಪ್ರಯಾಣಿಸುತ್ತಾರೆ ಎಂದು ವೆಸ್ಟ್ ಫಾಲಿಯಾದ ವಕೀಲ ಜೋಹನ್ಸ್ ಕ್ರಿಸ್ಟಿಯನ್ ಸುದೆರ್ಮನ್ ದೂರು ದಾಖಲಿಸಿದ್ದಾರೆ. ಪೋಪ್ ಜರ್ಮನಿಯ ಫ್ರೀಬರ್ಗ್ ನಗರದಲ್ಲಿ ಸೆಪ್ಟಂಬರ್ ಅಂತ್ಯದಲ್ಲಿ ಸೀಟು ಬೆಲ್ಟ್ ಧರಿಸದೇ ಪ್ರಯಾಣಿಸಿದ್ದರು.

ಈ ಕುರಿತು ಸುದೆರ್ಮನ್ ಸಾಕ್ಷಿಯಾಗಿ ಯುಟ್ಯೂಬ್ ವಿಡಿಯೋ ಸಲ್ಲಿಸಿದ್ದಾರೆ. ಅಂದ ಹಾಗೆ ದೂರು ಸಲ್ಲಿಸಿರುವ ವಕೀಲ ಸಮಾಜವಾದಿ ಎಡಪಕ್ಷದ ಸದಸ್ಯ. ಇವರು ಕ್ಯಾಥೋಲಿಕ್ ಚರ್ಚ್ ನ ಸದಸ್ಯರಲ್ಲ. ಈ ಪ್ರಕರಣದಿಂದಾಗಿ ಪೋಪ್ ಸುಮಾರು 30 ಯೆನ್ ನಿಂದ 2,500 ಯೆನ್ ನಷ್ಟು ದಂಡ ಪಾವತಿಸಬೇಕಾಗಬಹುದು.

ಭಾರತದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದರೆ ಎಷ್ಟು ದಂಡ ಪಾವತಿಸಬೇಕು?

Most Read Articles

Kannada
English summary
Johannes Christian Sundermann, a lawyer filed a complaint against Pope Benedikt XVI for not wearing a seat belt. Traffic Rules, Driving tips, Safety Journey...
Story first published: Monday, November 28, 2011, 12:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X