45 ಹೊಸ ಯಮಹಾ ಆರ್15 ಬೈಕುಗಳು ಬೆಂಕಿಗಾಹುತಿ

ಚೆನ್ನೈನ ಇರಾಂಗಾಟ್‌ಕೊಟೈ ರೇಸ್ ಟ್ರ್ಯಾಕ್‌ನಲ್ಲಿ 45 ಹೊಸ ಯಮಹಾ ಆರ್15 ಬೈಕುಗಳು ಬೆಂಕಿಗಾಹುತಿಯಾಗಿವೆ. ರೇಸ್ ಟ್ರ್ಯಾಕ್ ಹತ್ತಿರದಲ್ಲೇ ಕಾರೊಂದಕ್ಕೆ ವೆಲ್ಡ್ ಮಾಡುತ್ತಿರುವ ಸಂದರ್ಭದಲ್ಲಿ ಸಿಡಿದ ಬೆಂಕಿ ಕಿಡಿಗೆ ಸಿಲುಕಿ ಈ 45 ಹೊಸ ಬೈಕುಗಳು ಕರ್ರಗಾಗಿವೆ.

ಮೇ 8ರಿಂದ ಮೇ 11ರತನಕ ನಡೆಯಲಿರುವ ಬೈಕ್ ರೇಸಿನಲ್ಲಿ ಪ್ರಾಕ್ಟಿಸ್ ಮಾಡುವ ಉದ್ದೇಶದಿಂದ ಬೈಕುಗಳನ್ನು ತರಲಾಗಿತ್ತು. ಯಮಹಾ ಆರ್15 ಬೆಂಕಿ ಅನಾಹುತದಿಂದಾಗಿ ಈ ರೇಸ್ ಚಾಂಪಿಯನ್‌ಷಿಪ್‌ಗೆ ತಡೆಯುಂಟಾಗಿದೆ.

ಬೈಕ್ ರೇಸ್ ಪ್ರೀಯರಿಗೆ ಉತ್ತೇಜನ ನೀಡುವ ಉದ್ದೇಶದಿಂದ 2008ರಿಂದ ಇಂತಹ ರೇಸನ್ನು ಯಮಹಾ ಕಂಪನಿ ಆಯೋಜಿಸುತ್ತಿತ್ತು. ಇದೇ ಇರಾಂಗಾಟ್‌ಕೊಟೈ ರೇಸ್‌ಟ್ರ್ಯಾಕ್‌ನಲ್ಲಿ ಪ್ರತಿವರ್ಷವೂ ರೇಸ್ ಆಯೋಜಿಸಲಾಗುತ್ತಿತ್ತು.

ಬೆಂಕಿಗಾಹುತಿಯಾದ 45 ಯಮಹಾ ಆರ್15 ಬೈಕುಗಳು ಸಂಪೂರ್ಣವಾಗಿ ಉರಿದಿದ್ದು ರಿಪೇರಿ ಮಾಡಲು ಏನೂ ಉಳಿದಿಲ್ಲವೆಂದು ವರದಿಗಳು ಹೇಳಿವೆ. ರೇಸ್ ಕಾರೊಂದನ್ನು ಟ್ರ್ಯಾಕ್ ಹೊರಭಾಗದಲ್ಲಿ ವೆಲ್ಟಿಂಗ್ ಮಾಡಲಾಗುತ್ತಿತ್ತು. ಆಗ ಆಕಸ್ಮಿಕವಾಗಿ ಕಾರಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಇದರಿಂದಾಗಿ ಅಲ್ಲೇ ಸಮೀಪದಲ್ಲಿದ್ದ 45 ಹೊಸ ಬೈಕುಗಳು ಕೂಡ ಬೆಂಕಿಗಾಹುತಿಯಾಗಿವೆ.

ಇಲ್ಲಿವರೆಗೆ ಹಲವು ಕಾರುಗಳು ಉರಿದ ವರದಿಗಳನ್ನು ಓದಿದ್ದೇವೆ. ಆದರೆ ಇಷ್ಟೊಂದು ಪ್ರಮಾಣದಲ್ಲಿ ಬೈಕುಗಳು ಬೆಂಕಿಗಾಹುತಿಯಾಗಿರೋದು ಇದೇ ಫಸ್ಟ್. ಅಂದಹಾಗೆ ಈ ಬೆಂಕಿ ಅನಾಹುತಕ್ಕೆ ಬೈಕ್ ಕಾರಣವಲ್ಲ. ಹೀಗಾಗಿ ಯಮಹಾ ಆರ್15 ಬೈಕ್ ಮಾಲೀಕರು ವರಿ ಮಾಡಬೇಕಾಗಿಲ್ಲ.

Most Read Articles

Kannada
English summary
The Irungattukottai race track saw a major fire accident which saw 45 new Yamaha R15 bikes burning down completely after stray sparks from a nearby car ignited them. These bikes were brought to the race track in preparation to a practice camp for racers that was to be held between May 8th and 11th.
Story first published: Tuesday, April 24, 2012, 13:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X