ಆರಾಧ್ಯ ಬಚ್ಚನ್‌ಗೆ ಮಿನಿ ಕೂಪರ್ ಹುಟ್ಟುಹಬ್ಬದ ಗಿಫ್ಟ್!

ಬಾಲಿವುಡ್‌ನಲ್ಲಿ ಅದರಲ್ಲೂ ಪ್ರಮುಖವಾಗಿ ಬಚ್ಚನ್ ಫ್ಯಾಮಿಲಿಯಲ್ಲಿ ಏನೇ ನಡೆದರೂ ಮಾಧ್ಯಮದವರ ಪಾಲಿಗೆ ಅಂದೊಂದು ಸಂಭ್ರಮದ ಸುದ್ದಿ. ಇದೀಗ ಮತ್ತೆ ಬಚ್ಚನ್ ಫ್ಯಾಮಿಲಿ ಹೆಡ್‌ಲೈನ್ ಸ್ಟೋರಿಯಲ್ಲಿದ್ದಾರೆ.

ಸೆಲೆಬ್ರಿಟಿಗಳಾದ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ದಂಪತಿ ಮಗಳಾದ ಆರಾಧ್ಯ ಬಚ್ಚನ್ ನಿಜಕ್ಕೂ 'ಅದೃಷ್ಟದ ಹುಡುಗಿ' ಎಂದೇ ಬಿಂಬಿಸಬಹುದು. ಇದೀಗಷ್ಟೇ ಮೊದಲ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ತಮ್ಮ ಮುದ್ದಿನ ಪುತ್ರಿಗೆ 'ಮಿನಿ ಕೂಪರ್ ಎಸ್' ಕಾರು ನೀಡುವ ಮೂಲಕ ಅಭಿಷೇಕ್ ಬಚ್ಚನ್ ಗಮನಸೆಳೆದಿದ್ದಾರೆ.

ಹೀಗೆ ಆರಾಧ್ಯ ಬಚ್ಚನ್ ಕಾರು ಕಲೆಕ್ಷನ್ ಒಂದರ ಬಳಿಕ ಒಂದರಂತೆ ಮುಂದುವರಿಯುತ್ತಲೇ ಇವೆ. ಈ ಹಿಂದೆ ಆರಾಧ್ಯ ಜನಿಸಿದಾಗ 'ಆಡಿ ಎ8ಎಲ್' ಕಾರನ್ನು ತಂದೆ ಅಭಿಷೇಕ್ ಉಡುಗೊರೆಯಾಗಿ ನೀಡಿದ್ದರು. ಒಂದು ವೇಳೆ ಪ್ರತಿ ವರ್ಷವೂ ಇದೇ ಪರಿ ಮುಂದುವರಿದ್ದಲ್ಲಿ ನೀವೇ ಊಹಿಸಿ ನೋಡಿ ದೊಡ್ಡವಳಾಗುವಾಗ ಆರಾಧ್ಯ ಕಾರ್ ಕಲೆಕ್ಷನ್ ಎಷ್ಟಾಗಬಹುದು..?

ಆರಾಧ್ಯಳಿಗೆ ಬಚ್ಚನ್ ಮಿನಿ ಕೂಪರ್ ಹುಟ್ಟುಹಬ್ಬದ ಗಿಫ್ಟ್!

ಆರಾಧ್ಯ ಬಚ್ಚನ್ ಇದೀಗ ಮಿನಿ ಕೂಪರ್ ಎಸ್ ಕಾರನ್ನು ತಮ್ಮದಾಗಿಸಿದ್ದಾರೆ. ಮೊದಲ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ತಮ್ಮ ಪ್ರೀತಿಯ ಪುತ್ರಿ ಆರಾಧ್ಯಳಿಗೆ ಅಭಿಷೇಕ್ ಬಚ್ಚನ್ ಕಾರು ಉಡುಗೊರೆಯಾಗಿ ನೀಡಿದ್ದಾರೆ.

ಆರಾಧ್ಯಳಿಗೆ ಬಚ್ಚನ್ ಮಿನಿ ಕೂಪರ್ ಹುಟ್ಟುಹಬ್ಬದ ಗಿಫ್ಟ್!

ಕಳೆದ ವರ್ಷ ಆರಾಧ್ಯ ಜನಿಸಿದ ಸಂದರ್ಭದಲ್ಲಿ ಅಭಿಷೇಕ್ ಬಚ್ಚನ್ ಆಡಿ ಎ8 ಕಾರನ್ನು ಸನ್ಮಾನಿಸಿದ್ದರು.

ಆರಾಧ್ಯಳಿಗೆ ಬಚ್ಚನ್ ಮಿನಿ ಕೂಪರ್ ಹುಟ್ಟುಹಬ್ಬದ ಗಿಫ್ಟ್!

ತಾತ ಅತಿತಾಬ್ ಬಚ್ಚನ್ ಜತೆ ಆರಾಧ್ಯ ಬಚ್ಚನ್ ನೂತನ ಮಿನಿ ಕೂಪರ್ ಎಸ್ ಕಾರಿನಲ್ಲಿ ಮೊದಲ ಸವಾರಿ ಮಾಡಿದ್ದಾರೆ.

ಆರಾಧ್ಯಳಿಗೆ ಬಚ್ಚನ್ ಮಿನಿ ಕೂಪರ್ ಹುಟ್ಟುಹಬ್ಬದ ಗಿಫ್ಟ್!

ಮಿನಿ ಕೂಪರ್ ಎಸ್ ಮಾದರಿಯು ಕೂಪರ್‌ನ ಸ್ಫೋರ್ಟ್ಸ್ ಆವೃತ್ತಿಯಾಗಿದೆ. ಕೂಪರ್ ಎಸ್ 1.6 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದ್ದು, 184 ಬಿಎಚ್‌ಪಿ ಪೀಕ್ ಪವರ್ ಉತ್ಪಾದಿಸಲಿದ್ದು, 240 ಎನ್‌ಎಂ ಮ್ಯಾಕ್ಸಿಮಮ್ ಟರ್ಕ್ಯೂ ಹೊಂದಿರಲಿದೆ.

ಆರಾಧ್ಯಳಿಗೆ ಬಚ್ಚನ್ ಮಿನಿ ಕೂಪರ್ ಹುಟ್ಟುಹಬ್ಬದ ಗಿಫ್ಟ್!

ದೆಹಲಿ ಎಕ್ಸ್ ಶೋ ರೂಂಗಳಲ್ಲಿ ಮಿನಿ ಕೂಪರ್ ಎಸ್ ಬೆಲೆ 28.6 ಲಕ್ಷ ರೂಪಾಯಿಗಳಾಗಿದೆ.

ಆರಾಧ್ಯಳಿಗೆ ಬಚ್ಚನ್ ಮಿನಿ ಕೂಪರ್ ಹುಟ್ಟುಹಬ್ಬದ ಗಿಫ್ಟ್!

ಮಿನಿ ಕೂಪರ್ ಎಸ್ ತನ್ನದೇ ಆದ ವಿಶೇಷ ಶೈಲಿಗೆ ಹೆಸರುವಾಸಿಯಾಗಿದೆ. ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಖರೀದಿ ಗ್ರಾಹಕರ ಪೈಕಿ ಮಿನಿ ಕೂಪರ್ ಎಸ್ ಫೇವರಿಟ್ ಎನಿಸಿಕೊಂಡಿದೆ.

ಆರಾಧ್ಯಳಿಗೆ ಬಚ್ಚನ್ ಮಿನಿ ಕೂಪರ್ ಹುಟ್ಟುಹಬ್ಬದ ಗಿಫ್ಟ್!

ಮಿನಿ ಕೂಪರ್ ಎಸ್ ಟು ಡೋರ್ ಹ್ಯಾಚ್‌ಬ್ಯಾಕ್ ಕಾರು ಆಗಿದ್ದು, ಉತ್ತಮ ಸ್ಥಳವಕಾಶವನ್ನು ಹೊಂದಿದೆ

ಆರಾಧ್ಯಳಿಗೆ ಬಚ್ಚನ್ ಮಿನಿ ಕೂಪರ್ ಹುಟ್ಟುಹಬ್ಬದ ಗಿಫ್ಟ್!

ಮಿನಿ ಕೂಪರ್ ಎಸ್ ಕಾರಿನ ಹೆಸರಿನಲ್ಲಿರುವಂತೆ ಇದು ಮಿನಿ ಕಾರು ಅಲ್ಲ. ಸದ್ಯ ದೇಶದಲ್ಲಿ ಲಭ್ಯವಿರುವ ಅತ್ಯುತ್ತಮ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಒಂದಾಗಿದೆ.

Most Read Articles

Kannada
English summary
Aaradhya Bachchan is definitely a lucky baby. The daughter of star coups Abhishek Bachchan Aishwarya Rai Bachchcan has get a Mini Cooper S as her first birthday gift. Abhishek has bought the Mini Cooper S days before Aaradhya turns 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more