ಅಪೊಲೊ ಎರಡೂವರೆ ಸಾವಿರ ಕೋಟಿ ರು. ಹೂಡಿಕೆ ಯೋಜನೆ

ಪೂರ್ವ ಯುರೋಪ್ ಮತ್ತು ಬ್ರೆಝಿಲಿನಲ್ಲಿ ಮುಂದಿನ 3-4 ವರ್ಷಗಳಲ್ಲಿ ಎರಡು ಹೊಸ ಘಟಕ ಸ್ಥಾಪಿಸುವ ಉದ್ದೇಶದಿಂದ ಸುಮಾರು 2,500 ಕೋಟಿ ರುಪಾಯಿ ಹೂಡಿಕೆ ಮಾಡಲು ಅಪೊಲೊ ಟೈರ್ ಯೋಜಿಸಿದೆ. ಕಂಪನಿಯು ಜಾಗತಿಕವಾಗಿ ಹೆಜ್ಜೆ ಗುರುತು ಹೆಚ್ಚಿಸಲು ನಿರ್ಧರಿಸಿದೆ.

ಐರೋಪ್ಯ ಮಾರುಕಟ್ಟೆಯಲ್ಲಿ ಅಪೊಲೊ ವ್ರಿಡಿಸ್ಟೈನ್ ಅಂಗಸಂಸ್ಥೆಯ ಮೂಲಕ ಕಂಪನಿಯು ವಹಿವಾಟು ನಡೆಸುತ್ತಿದೆ. ಕಂಪನಿಯು ಮುಂದಿನ ಕೆಲವೇ ವರ್ಷಗಳಲ್ಲಿ ನಾಲ್ಕೈದು ದೇಶಗಳಲ್ಲಿ ಘಟಕ ನಿರ್ಮಿಸಲು ಯೋಜಿಸಿದೆ ಎಂದು ಅಪೊಲೊ ಟೈರ್ ಚೇರ್ಮನ್ ಓಂಕಾರ್ ಎಸ್ ಕುಮಾರ್ ಹೇಳಿದ್ದಾರೆ. ಅವರು ಜಿನಿವಾ ವಾಹನ ಪ್ರದರ್ಶನದಲ್ಲಿ ಮಾತನಾಡುತ್ತಿದ್ದರು.

ಪ್ರತಿವರ್ಷಕ್ಕೆ 70 ಲಕ್ಷದಿಂದ 1 ಕೋಟಿ ಯುನಿಟ್ ಉತ್ಪಾದನಾ ಸಾಮರ್ಥ್ಯದ ಪ್ರಯಾಣಿಕ ಕಾರಿನ ರೇಡಿಯಲ್ ಟೈರ್ ಉತ್ಪಾದಿಸುವ ಘಟಕ ನಿರ್ಮಿಸಲು ಯೋಜಿಸಿದೆ. ಇದಕ್ಕಾಗಿ ಸುಮಾರು 150-200 ಮಿಲಿಯನ್ ಯುರೋ ಹೂಡಿಕೆ ಮಾಡುವ ಯೋಜನೆ ಕಂಪನಿಗಿದೆ ಎಂದರು. (ಕನ್ನಡ ಡ್ರೈವ್ ಸ್ಪಾರ್ಕ್ )

Most Read Articles

Kannada
English summary
Apollo Tyres plans to set up two new facilities in East Europe and Brazil in the next 3-4 years. These plan will require an investment of at least 400 million euro.
Story first published: Monday, March 12, 2012, 11:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X