ಅಕ್ಟೋಬರ್ ಒಂದರಿಂದ ಕಾರುಗಳ ದರ ಹೆಚ್ಚಳ

ಒಂದು ಕೈಯಿಂದ ಕೊಟ್ಟು ಇನ್ನೊಂದು ಕೈಯಿಂದ ಕಸಿದುಕೊಳ್ಳುವುದೆಂದರೆ ಬಹುಶಃ ಇದೇ ಇರಬೇಕು. ಹಬ್ಬದ ಆಫರುಗಳನ್ನು, ಡಿಸ್ಕೌಂಟುಗಳನ್ನು ಪ್ರಕಟಿಸುತ್ತಿದ್ದ ಕಾರು ಕಂಪನಿಗಳು ಇದೀಗ ಕಾರುಗಳ ದರ ಹೆಚ್ಚಳಕ್ಕೆ ಮುಂದಾಗಿವೆ.

ಹೋಂಡಾ ಕಂಪನಿಯು ದೇಶದಲ್ಲಿ ಜಾಝ್, ಬ್ರಿಯೊ ಮತ್ತು ಸಿಟಿ ಕಾರುಗಳ ದರವನ್ನು ಶೇಕಡ 0.2ರಿಂದ ಶೇಕಡ 2.6ರಷ್ಟು ಹೆಚ್ಚಳ ಮಾಡಲು ನಿರ್ಧರಿಸಿದೆ. ಮಾರುತಿ ಸುಜುಕಿ ಸಹ ಶೀಘ್ರದಲ್ಲಿ ದರ ಹೆಚ್ಚಳ ನಿರ್ಧಾರವನ್ನು ಪ್ರಕಟಿಸುವ ಸೂಚನೆ ದೊರೆತಿದೆ.

ಅಕ್ಟೊಬರ್ ಒಂದರಿಂದ ಬ್ರಿಯೊ ಕಾರು ದರ ಸಾವಿರ ರು.ನಷ್ಟು, ಪ್ರೀಮಿಯಂ ಹ್ಯಾಚ್ ಬ್ಯಾಕ್ ಜಾಝ್ ದರ 15 ಸಾವಿರ ರು.ನಷ್ಟು ಮತ್ತು ಸೆಡಾನ್ ಕಾರು ಹೋಂಡಾ ಸಿಟಿ ದರ 1-6 ಸಾವಿರ ರು. ದುಬಾರಿಯಾಗಲಿದೆ. ಸಿವಿಕ್, ಅಕಾರ್ಡ್, ಸಿಆರ್ ವಿ ದರ ಹೆಚ್ಚಳವಿಲ್ಲವೆಂದು ಕಂಪನಿ ತಿಳಿಸಿದೆ.

ದೇಶದ ಬೃಹತ್ ಪ್ರಯಾಣಿಕ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಸಹ ದರ ಹೆಚ್ಚಳ ಮಾಡಲು ನಿರ್ಧರಿಸಿದೆ. ಈ ಕುರಿತು ಶೀಘ್ರದಲ್ಲಿ ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯನ್ನು ಮಾರುತಿ ಸುಜುಕಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹಬ್ಬದ ಸೀಸನಿನಲ್ಲಿ ಕಾರುಗಳ ಮಾರಾಟ ಹೆಚ್ಚಾಗಿರುತ್ತದೆ. ಇಂತಹ ಸಮಯದಲ್ಲಿ ದರ ಹೆಚ್ಚಳವು ಗ್ರಾಹಕರಿಗೆ ಕೊಂಚ ನಿರಾಶೆ ಉಂಟು ಮಾಡಲಿದೆ.

Most Read Articles

Kannada
English summary
Car Price Hike in October 2012. Honda planning to increase Brio, Jazz and City price hike. Maruti suzuki also hike prices of its cars within a week.
Story first published: Tuesday, September 25, 2012, 16:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X