ಲಾಟರಿಯಲ್ಲಿ ಲಂಬೊರ್ಗಿನಿ ಕಾರ್ ಗೆದ್ದ ಸೂಫಿ ಅಬ್ದುಲ್ಲಾ

ರಾಬಿನ್ ಶರ್ಮಾ ರಚಿತ "ಫೆರಾರಿ ಮಾರಿದ ಪಕೀರ" ಕೃತಿ ನೀವು ಓದಿರಬಹುದು. ಅದೇ ಹೆಡ್ ಲೈನ್ ನೆನಪಿಸುವಂತೆ ಕೇರಳದ ವ್ಯಕ್ತಿಯೊಬ್ಬ ಲಾಟರಿಯಲ್ಲಿ ಗೆದ್ದ ಲಂಬೊರ್ಗಿನಿ ಕಾರು ಮಾರಾಟ ಮಾಡಲು ಉದ್ದೇಶಿಸಿದ್ದಾನೆ. ಅದರಲ್ಲಿ ಸಿಕ್ಕ ದುಡ್ಡಿನಲ್ಲಿ ಕೊಂಚ ಸ್ವಂತಕ್ಕೆ ಮತ್ತು ಉಳಿದ ದುಡ್ಡನ್ನು ದಾನ ಧರ್ಮಕ್ಕೆ ಮೀಸಲಿಡಲು ಯೋಚಿಸಿದ್ದಾನೆ.

ಅಬುದಾಬಿಯಲ್ಲಿ ಟೊಯೊಟಾ ಡೆಲಿವರಿ ವ್ಯಾನಿನಲ್ಲಿ ಚಾಲಕನಾಗಿ ಕೆಲಸ ಮಾಡುವ ಕೇರಳದ ಸೂಫಿ ಅಬ್ದುಲ್ಲಾ ಮಾಲ್ ನಲ್ಲಿ ಆಯೋಜಿಸಿದ್ದ ಸುಮಾರು 3,786 ರುಪಾಯಿ ಮೌಲ್ಯದ ಲಕ್ಕಿ ಡ್ರಾ ಕೂಪನ್ ಖರೀದಿಸಿದ್ದಾನೆ. ಆ ಜನಪ್ರಿಯ ಲಕ್ಕಿ ಡ್ರಾ ಕೂಪನನ್ನು ಸಾವಿರಾರು ಜನರು ಖರೀದಿಸಿದ್ದರು. ಆದರೆ ಅದೃಷ್ಟ ದೇವತೆ ಒಲಿದದ್ದು ಸೂಫಿ ಅಬ್ದುಲ್ಲಾನಿಗೆ.

ಬಹುಮಾನವಾಗಿ ಈತನಿಗೆ ದೊರಕಿದ್ದು, ಸುಮಾರು 2 ಕೋಟಿ ರುಪಾಯಿ ಮೌಲ್ಯದ ಲಂಬೋರ್ಗಿನಿ ಗಲಾರ್ಡೊ ಸ್ಪೋರ್ಟ್ಸ್ ಕಾರು. ಹಳೆಯ ಸ್ಕೂಟರ್ ಬಿಟ್ಟು ಏನೂ ಸ್ವಂತ ವಾಹನ ಇಲ್ಲದ ಈತನಿಗೆ ಈ ಐಷಾರಾಮಿ ಸ್ಪೋರ್ಟ್ಸ್ ಕಾರು ಸಿಕ್ಕಿದೆ. ಆತನಿಗೆ ಈ ಕಾರಿನಲ್ಲಿ ಶೋಕಿ ಮಾಡುವ ಯಾವ ಆಸೆಯೂ ಇಲ್ವಂತೆ. ಈ ಕಾರನ್ನು ಮಾರಿ ದುಡ್ಡು ಕಿಸೆಗೆ ಹಾಕಿಕೊಳ್ಳುವ ಯೋಜನೆಯನ್ನು ಸೂಪಿ ಅಬ್ದುಲ್ಲಾ ಪ್ರಕಟಿಸಿದ್ದಾನೆ.

ಕೇರಳದ ಜನರ ಪ್ರಮುಖ ಆದಾಯದ ಮೂಲವಿರುವುದು ವಿದೇಶಗಳಲ್ಲಿ ದುಡಿಯುವ ವ್ಯಕ್ತಿಗಳು. ಸೂಫಿ ಅಬ್ದುಲ್ಲಾನದ್ದೂ ಅದೇ ಕಥೆ. ಕಾರು ಮಾರಿದ ದುಡ್ಡನ್ನು ಏನು ಮಾಡುತ್ತಿರಿ ಎಂಬ ಪ್ರಶ್ನೆಗೆ "ಊರಲ್ಲಿ ಮನೆ ಕಟ್ಟಲು ಮಾಡಿದ ಸಾಲ ತೀರಿಸುತ್ತೇನೆ" ಎಂದು ಹೇಳಿದ್ದಾನೆ.

ಸಾಲ ತೀರಿಸಿ ಉಳಿದ ದುಡ್ಡನ್ನು ಏನು ಮಾಡುವಿರಿ ಎಂಬ ಪ್ರಶ್ನೆಗೆ ಉತ್ತರವಾಗಿ ಆತನ ಇನ್ನೊಂದು ಸಮಾಜಮುಖಿ ಮುಖ ಹೊರಬಿದ್ದಿದೆ. ಉಳಿದ ಹಣದಲ್ಲಿ ಅವಶ್ಯಕತೆ ಇದ್ದ ಬಡವರಿಗೆ ಮನೆ ಕಟ್ಟಿಕೊಡುತ್ತಾನಂತೆ. ಸ್ಥಳೀಯ ಮಸೀದಿಯೊಂದಕ್ಕೆ ದೊಡ್ಡ ಮೊತ್ತದ ಹಣವನ್ನು ದಾನ ಮಾಡುವ ಉದ್ದೇಶವೂ ಇದೆಯಂತೆ.

ಸರಿ ಓದುಗರೇ, ಈಗ ನಿಮ್ಮಲ್ಲೊಂದು ಪ್ರಶ್ನೆ. ನಿಮಗೆ ಕೋಟಿ ರುಪಾಯಿ ದೊರಕಿದರೆ ಏನು ಮಾಡುವಿರಿ? ಇಲ್ಲೇ ಕಾಮೆಂಟ್ ಬಾಕ್ಸಿನಲ್ಲಿ ಪ್ರಾಮಾಣಿಕವಾಗಿ ಬರೆಯುವಿರಾ? ಪ್ಲೀಸ್.

Most Read Articles

Kannada
English summary
A Kerala based van driver Soupi Abdulla has won a Lamborghini Gallardo supercar in a lottery in Abu Dhabi. Soupi Abdulla has so far only owned an old scooter and the Gallardo is definitely a pleasant surprise. The Lamborghini Gallardo is powered by a V10 engine and costs Rs.2 crores in India.
Story first published: Monday, August 27, 2012, 16:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more