ದೇಶಿ ಮಾರುಕಟ್ಟೆಯಲ್ಲಿ ಹ್ಯುಂಡೈ ಕಾರು ಮಾರಾಟ ಹೆಚ್ಚಳ

ಪ್ರಮುಖ ವಾಹನ ತಯಾರಿಕಾ ಕಂಪನಿ ಹ್ಯುಂಡೈ ಮೋಟರ್ ಇಂಡಿಯಾವು ದೇಶದಲ್ಲಿ ವಾಹನ ಮಾರಾಟವನ್ನು ಗಮನಾರ್ಹವಾಗಿ ಹೆಚ್ಚಿಸಿಕೊಳ್ಳುತ್ತಿದೆ. ಕಳೆದ ತಿಂಗಳು ಹ್ಯುಂಡೈ ದೇಶದಲ್ಲಿ 28,257 ಕಾರು ಮಾರಾಟ ಮಾಡಿದ್ದು, ಕಳೆದ ವರ್ಷದ 26,677 ಯುನಿಟ್ ದೇಶಿ ಮಾರಾಟಕ್ಕೆ ಹೋಲಿಸಿದರೆ ಶೇಕಡ 5.9ರಷ್ಟು ಏರಿಕೆ ದಾಖಲಿಸಿದೆ.

ಆದರೆ ರಫ್ತು ಸೇರಿದಂತೆ ಕಂಪನಿಯ ಒಟ್ಟಾರೆ ಕಾರು ಮಾರಾಟ ಶೇಕಡ 8ರಷ್ಟು ಇಳಿಕೆ ಕಂಡಿದೆ. ಕಂಪನಿಯು ಕಳೆದ ತಿಂಗಳು ಒಟ್ಟಾರೆ 46,886 ಯುನಿಟ್ ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ಅವಧಿಯ 51,012 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಮಾರಾಟ ಕಡಿಮೆಯಾಗಿದೆ.

"ಡೀಸೆಲ್ ಕಾರಿಗೆ ಅತ್ಯಧಿಕ ಬೇಡಿಕೆ ಇತ್ಯಾದಿ ಕಾರಣಗಳಿಂದ ಕಾರು ಮಾರಾಟ ಕಡಿಮೆಯಾಗಿದೆ. ಆದರೂ ಕಂಪನಿಯು ದೇಶದಲ್ಲಿ ಕಾರು ಮಾರಾಟ ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ" ಎಂದು ಹ್ಯುಂಡೈ ಕಂಪನಿಯ ಮಾರಾಟ ವಿಭಾಗದ ಉಪಾಧ್ಯಕ್ಷರಾದ ರಾಕೇಶ್ ಶ್ರೀವಾತ್ಸವ ಹೇಳಿದ್ದಾರೆ.

"ಹಣದುಬ್ಬರದ ಟ್ರೆಂಡ್, ಇಂಧನ ದರ ಹೆಚ್ಚಳ ಮತ್ತು ಬಡ್ಡಿದರ ಹೆಚ್ಚಳ ಇತ್ಯಾದಿ ಕಾರಣಗಳಿಂದ ಒಟ್ಟಾರೆ ಮಾರುಕಟ್ಟೆಯಲ್ಲಿ ಬೇಡಿಕೆ ಸಂಕುಚಿತವಾಗಿದೆ. ಮಾರುಕಟ್ಟೆಯ ಭಾವನೆಗಳು ಇನ್ನೂ ಗಮನಾರ್ಹ ಬದಲಾವಣೆ ಕಂಡಿಲ್ಲ" ಎಂದು ಅವರು ಹೇಳಿದ್ದಾರೆ.

ಕಳೆದ ತಿಂಗಳು ಇಯಾನ್, ಸ್ಯಾಂಟ್ರೊ, ಐ10, ಐ20 ಮುಂತಾದ ಎ2 ಸೆಗ್ಮೆಂಟ್ ಕಾರುಗಳ ಮಾರಾಟ ಸುಮಾರು 40,049 ಯುನಿಟ್ ಆಗಿದೆ. ಎ3 ಸೆಗ್ಮೆಂಟ್ ಕಾರುಗಳಾದ ಅಸೆಂಟ್, ವೆರ್ನಾ ಇತ್ಯಾದಿ ಕಾರುಗಳ ಮಾರಾಟ 6,145 ಯುನಿಟ್ ತಲುಪಿದೆ. ಕಳೆದ ತಿಂಗಳು 608 ಯುನಿಟ್ ಎಲಾಂಟ್ರಾ ಮತ್ತು 65 ಯುನಿಟ್ ಸಾಂತಾ ಫೆ ಮಾರಾಟವಾಗಿದ್ದವು.

Most Read Articles

Kannada
English summary
Hyundai Motor India reported 28,257 unit domestic sales in august 2012. Hyundai car Sales up by 6 percent compared last year.
Story first published: Monday, September 3, 2012, 10:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X