ಜುಲೈನಲ್ಲಿ ಹ್ಯುಂಡೈ ಕಾರು ಮಾರಾಟ ಭರ್ಜರಿ ಏರಿಕೆ

ದೇಶದ ಎರಡನೇ ಬೃಹತ್ ಕಾರು ತಯಾರಿಕಾ ಕಂಪನಿ ಮತ್ತು ದೇಶದ ಬೃಹತ್ ಪ್ರಯಾಣಿಕ ಕಾರು ರಫ್ತುದಾರ ಹ್ಯುಂಡೈ ಮೋಟರ್ಸ್ ಇಂಡಿಯಾ(ಎಚ್ಎಂಐಎಲ್)ದ ಜುಲೈ ತಿಂಗಳ ವಾಹನ ಮಾರಾಟ ಶೇಕಡ 7.6ರಷ್ಟು ಏರಿಕೆ ದಾಖಲಿಸಿದೆ.

ಕಂಪನಿಯು ಕಳೆದ ತಿಂಗಳು ಒಟ್ಟಾರೆ 52,845 ಯುನಿಟ್ ಕಾರು ಮಾರಾಟ ಮಾಡಿದ್ದು, ಕಳೆದ ವರ್ಷದ ಜುಲೈನ 49,666 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಶೇಕಡ 6.4ರಷ್ಟು ಏರಿಕೆ ಕಂಡಿದೆ. ಕಂಪನಿಯ ದೇಶಿ ಕಾರು ಮಾರಾಟ 27,585 ಯುನಿಟ್ ತಲುಪಿದ್ದು, ಕಳೆದ ವರ್ಷದ ಇದೇ ತಿಂಗಳ 25,642 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಶೇ. 7.6ರಷ್ಟು ಏರಿಕೆ ದಾಖಲಿಸಿದೆ.

2012ರ ಜುಲೈ ತಿಂಗಳಿನಲ್ಲಿ ಕಂಪನಿಯು 25,260 ಯುನಿಟ್ ಕಾರು ರಫ್ತು ಮಾಡಿದೆ. ಕಳೆದ ವರ್ಷದ ಜುಲೈ ತಿಂಗಳ 24,024 ಯುನಿಟ್ ರಫ್ತಿಗೆ ಹೋಲಿಸಿದರೆ ಇದು ಶೇಕಡ 5.1ರಷ್ಟು ಹೆಚ್ಚಳವಾಗಿದೆ.

"ದುಬಾರಿ ಇಂಧನ ದರ ಮತ್ತು ಬಡ್ಡಿದರ ಏರಿಕೆಯ ನಡುವೆಯೂ ಜುಲೈನಲ್ಲಿ ಒಟ್ಟಾರೆ ಮಾರುಕಟ್ಟೆಯಲ್ಲಿ ಹ್ಯುಂಡೈ ಕಾರುಗಳಿಗೆ ಬೇಡಿಕೆ ಹೆಚ್ಚಳವಾಗಿದೆ" ಎಂದು ಹ್ಯುಂಡೈ ಮೋಟರ್ಸ್ ಇಂಡಿಯಾ ಲಿಮಿಟೆಡಿನ ಉಪಾಧ್ಯಕ್ಷರಾದ ರಾಕೇಶ್ ಶ್ರೀವಾತ್ಸವ ಹೇಳಿದ್ದಾರೆ.

ಜುಲೈವರೆಗೆ ಕಂಪನಿಯ ಒಟ್ಟಾರೆ ಕಾರು ಮಾರಾಟ ಇಂತಿದೆ. ಇಯಾನ್, ಸ್ಯಾಂಟ್ರೊ, ಐ10, ಐ20 ಸೇರಿದಂತೆ ಎ2 ಸೆಗ್ಮೆಂಟ್ ಕಾರು ಮಾರಾಟ 44,274 ಯುನಿಟಿಗೆ ತಲುಪಿದೆ. ಅಸೆಂಟ್ ಮತ್ತು ವೆರ್ನಾ ಕಾರುಗಳ ಮಾರಾಟ 8,454 ಯುನಿಟಿಗೆ ತಲುಪಿದೆ. 32 ಸೊನಾಟಾ ಮತ್ತು 85 ಯುನಿಟ್ ಸಾಂತಾ ಫೆ ಕಾರುಗಳು ಮಾರಾಟವಾಗಿವೆ.

Most Read Articles

Kannada
English summary
Hyundai Motor India Ltd registered aggregate sales of 52,845 units (49,666 units) in July, up 6.4pc from the corresponding month last year. Hyundai Motors domestic sales up by 7.6 percent.
Story first published: Friday, August 3, 2012, 16:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X