ಮಂಕಾದ ಕಾರು ಮಾರಾಟ: ಯಾಕೆ ಹೀಗಾಯ್ತೊ?

By Praveen

ನವದೆಹಲಿ, ಸೆ 10: ಹಬ್ಬದ ಸೀಸನಿನಲ್ಲಿ ಕಾರು ಮಾರಾಟ ಗರಿಗೆದರಬೇಕಿತ್ತು. ಆದರೆ ಕಳೆದ ತಿಂಗಳು ದೇಶದ ವಾಹನ ಮಾರಾಟವೂ ಗಮನಾರ್ಹವಾಗಿ ಇಳಿಕೆ ಕಂಡಿದೆ. ಸರಕಾರವು ದೇಶದ ವಾಹನೋದ್ಯಮಕ್ಕೆ ಉತ್ತೇಜನ ನೀಡುವ ಅಗತ್ಯವಿದೆ ಎಂದು ಸ್ಯಾಮ್ ಹೇಳಿದೆ.

ಕಳೆದ ಹತ್ತು ತಿಂಗಳಲ್ಲಿಯೇ ಪ್ರಪ್ರಥಮ ಬಾರಿಗೆ ದೇಶದ ಕಾರು ಮಾರಾಟ ಶೇಕಡ 18.56ರಷ್ಟು ಇಳಿಕೆ ಕಂಡಿದೆ ಎಂದು ದೇಶದ ವಾಹನ ತಯಾರಿಕರ ಒಕ್ಕೂಟ(ಸ್ಯಾಮ್) ಪ್ರಕಟಣೆ ತಿಳಿಸಿದೆ. ಇದೇ ಸಮಯದಲ್ಲಿ ಕಾರು ರಫ್ತು ಶೇಕಡ 26.83ರಷ್ಟು ಇಳಿಕೆ ಕಂಡಿದೆ. ಇದು ಕಳೆದ ಹನ್ನೊಂದು ವರ್ಷಗಳಲ್ಲಿಯೇ ಭಾರಿ ಪ್ರಮಾಣದ ಇಳಿಕೆಯಾಗಿದೆ.

2008-10ರ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ನೀಡಿದಂತಹ ಉತ್ತೇಜನ ಪ್ಯಾಕೇಜ್ ನೀಡುವುದೇ ದಾರಿಯೆಂದು ಸ್ಯಾಮ್ ಹೇಳಿದೆ. ಜೊತೆಗೆ ಅಬಕಾರಿ ತೆರಿಗೆ ಕಡಿತ ಮಾಡುವ ಅಗತ್ಯವನ್ನು ಸ್ಯಾಮ್ ಒತ್ತಿ ಹೇಳಿದೆ.

ಆಗಸ್ಟ್ ತಿಂಗಳಲ್ಲಿ ದೇಶದಲ್ಲಿ ಒಟ್ಟಾರೆ ವಾಹನ ಮಾರಾಟ 13,54,436 ಯುನಿಟ್ ತಲುಪಿದ್ದು, ಶೇಕಡ 3.9ರಷ್ಟು ಇಳಿಕೆ ಕಂಡಿದೆ. ಇದು ಕಳೆದ ಮೂರುವರೆ ವರ್ಷಗಳಲ್ಲಿಯೇ ಅತ್ಯಧಿಕ ಪ್ರಮಾಣದ ಇಳಿಕೆಯಿದೆ.

ಪ್ರಸಕ್ತ ವರ್ಷದ ಆಗಸ್ಟ್ ತಿಂಗಳಲ್ಲಿ ದೇಶದಲ್ಲಿ ಒಟ್ಟು 1,18,142 ಯುನಿಟ್ ಕಾರು ಮಾರಾಟವಾಗಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಇದು 1,45,066 ಯುನಿಟ್ ಆಗಿತ್ತು. ಶೇಕಡ 18.56ರಷ್ಟು ಇಳಿಕೆ ಕಂಡಿರುವುದು ಕಳೆದ ವರ್ಷದ ಅಕ್ಟೋಬರ್ ತಿಂಗಳ ನಂತರ ಮೊದಲ ಬಾರಿಯಾಗಿದೆ.

"ಸಹಜವಾಗಿ ಈ ಹಬ್ಬದ ಅವಧಿಯಲ್ಲಿ ಮಾರಾಟ ಗರಿಗೆದರಬೇಕಿತ್ತು. ಆದರೆ ಅದು ಆಗುತ್ತಿಲ್ಲ. ನಾವೀಗ ಸಂಕಷ್ಟದಲ್ಲಿದ್ದೇವೆ. ನಮಗೆ ಸರಕಾರದ ನೆರವು ಬೇಕು" ಎಂದು ಸ್ಯಾಮ್ ಹಿರಿಯ ನಿರ್ದೇಶಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

Most Read Articles

Kannada
English summary
India Car sales downed by 18.56 per cent in August.The overall growth in domestic sales during April-August 2012 was 6.61 percent over same period last year. However, in August 2012 overall sales declined by (-3.9) percent over August 2011.
Story first published: Monday, September 10, 2012, 17:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X