ಹರ್ಷಿಕಾ ಹುಡುಕಿಕೊಂಡ ಹೊಸ ಬಾಯ್ ಫ್ರೆಂಡ್!

ಕನ್ನಡ ಚಿತ್ರರಂಗದ ಕ್ಯೂಟ್ ನಟಿ ಹರ್ಷಿಕಾ ಪೂಣಚ್ಚ ಎಸ್‌ಯುವಿ ಟಾಪ್ ಎಂಡ್ ಮಾಡೆಲ್ ರೆನೊ ಡಸ್ಟರ್ ಕೊಂಡುಕೊಂಡಿದ್ದಾರೆ. ಅಷ್ಟಕ್ಕೂ ಈ ಕೊಡಗಿನ ಚೆಲುವೆಗೆ ಡಸ್ಟರ್ ಇಷ್ಟವಾಗಲು ಕಾರಣವಾದರೂ ಏನಿರಬಹುದು.

ಈ ಬಗ್ಗೆ ಆಲೋಚಿಸುತ್ತಾ ಸಾಗಿದರೆ ಡಸ್ಟರ್ ಅತ್ಯಾಕರ್ಷಕ ಫೀಚರ್ಸ್‌ಗಳ ಬಗ್ಗೆ ನೆನಪಾಗುತ್ತದೆ. ಅತ್ಯುತ್ತಮ ಇಂಧನ ಕ್ಷಮತೆ ಹೊಂದಿರುವ ಡಸ್ಟರ್ ಆರಾಮದಾಯಕ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿದೆ.

ಹರ್ಷಿಕಾ ಅಭಿನಯದ ಅದ್ವೈತ, ಅಲೆ, ಬಿ3, ಮೀಟ್ರು, ಬೀಟ್ ಹಾಗೂ ಕ್ರೇಜಿ ಕೃಷ್ಣ ಚಿತ್ರಗಳು ಇನ್ನಷ್ಟೇ ತೆರೆ ಕಾಣಬೇಕಾಗಿದೆ. ಮುಂದಿನ ದಿನಗಳಲ್ಲಿ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ರೆಡಿಯಾಗುತ್ತಿರುವಂತೆಯೇ ದುಬಾರಿ ಡಸ್ಟರ್‌ಗೆ ಹರ್ಷಿಕಾ ಮನ ಸೋತಿದ್ದಾರೆ.

ಹಾಗಿದ್ದರೆ ಬನ್ನಿ ಡಸ್ಟರ್ ಎಂಜಿನ್, ಬೆಲೆ, ಫೀಚರ್ ಹಾಗೂ ಕಲರ್ ವೆರಿಯಂಟ್‌ಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ ಬನ್ನಿ...

ಎಂಟು ವೆರಿಯಂಟ್

ಎಂಟು ವೆರಿಯಂಟ್

ರೆನೊ ಡಸ್ಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದ್ದು, ಒಟ್ಟು ಎಂಟು ವೆರಿಯಂಟ್‌ಗಳಲ್ಲಿ ಸಿಗಲಿದೆ. ಇದರಲ್ಲಿ 1.6 ಲೀಟರಿನ ಪೆಟ್ರೋಲ್ ಎಂಜಿನ್ 104 ಪಿಎಸ್ ಪವರ್ ನೀಡುತ್ತದೆ. 1.5 ಲೀಟರಿನ ಡೀಸೆಲ್ ಎಂಜಿನ್ 85 ಪಿಎಸ್ ಮತ್ತು 110 ಪಿಎಸ್ ಪವರ್ ಆಯ್ಕೆಗಳಲ್ಲಿ ದೊರಕುತ್ತದೆ.

ದರ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ದರ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಪೆಟ್ರೋಲ್ ಆರ್‌ಎಕ್ಸ್‌ಇ- 7,53,321 ಲಕ್ಷ ರು.

ಪೆಟ್ರೋಲ್ ಆರ್‌ಎಕ್ಸ್‌ಎಲ್- 8,55,103 ಲಕ್ಷ ರು.

ಡೀಸೆಲ್ 85 ಪಿಎಸ್ ಆರ್‌ಎಕ್ಸ್ಇ- 8,44,925 ಲಕ್ಷ ರು.

ಡೀಸೆಲ್ 85 ಪಿಎಲ್ ಆರ್‌ಎಕ್ಸ್‌ಎಲ್- 9,46,703 ಲಕ್ಷ ರು.

ಡೀಸೆಲ್ 85 ಪಿಎಸ್ ಆರ್‌ಎಕ್ಸ್‌ಎಲ್ ಒಪ್ಷನ್ ಪ್ಯಾಕ್- 10,48,481 ಲಕ್ಷ ರು.

ಡೀಸೆಲ್ 110 ಪಿಎಸ್ ಆರ್‌ಎಕ್ಸ್‌ಎಲ್- 10,48,481 ಲಕ್ಷ ರು.

ಡೀಸೆಲ್ 110 ಪಿಎಲ್ ಆರ್‌ಎಕ್ಸ್‌ಝಡ್- 11,50,259 ಲಕ್ಷ ರು.

ಡೀಸೆಲ್ 110 ಪಿಎಸ್ ಆರ್‌ಎಕ್ಸ್‌ಝಡ್ ಆಪ್ಷನ್ ಪ್ಯಾಕ್- 11,80,792 ಲಕ್ಷ ರು.

ಕಲರ್ ವೆರಿಯಂಟ್

ಕಲರ್ ವೆರಿಯಂಟ್

ಮೆಟ್ಯಾಲಿಕ್ ವುಡ್‌ಲ್ಯಾಂಡ್ ಬ್ರೌನ್

ಮೆಟ್ಯಾಲಿಕ್ ಫಿಯರಿ ರೆಡ್

ಪಿಯರ್ಲ್ ಸುಪ್ರೀಂ ವೈಟ್

ಮೆಟ್ಯಾಲಿಕ್ ಮೂನ್‌ಲೈಟ್ ಸಿಲ್ವರ್

ಪಿಯರ್ಲ್ ಗ್ಯಾಲಕ್ಸಿ ಬ್ಲ್ಯಾಕ್

ಮೆಟ್ಯಾಲಿಕ್ ಗ್ರಾಫೈಟ್ ಗ್ರೇ

ಇಂಧನ ಕ್ಷಮತೆ

ಇಂಧನ ಕ್ಷಮತೆ

ರೆನೊ ಡಸ್ಟರ್ ಡೀಸೆಲ್ ಡಿಸಿಐ 85 ಪಿಎಸ್ ಹಾಗೂ ಡೀಸೆಲ್ ಡಿಸಿಐ 110ಪಿಎಸ್ ಎಂಜಿನ್‌ಗಳಿಗೆ ಪ್ರತಿ ಲೀಟರ್‌ಗೆ 20.45 ಕೀ.ಮೀ ಹಾಗೂ ಪೆಟ್ರೋಲ್ ವೆರೆಯಂಟ್‌ಗೆ ಪ್ರತಿ ಲೀಟರ್‌ಗೆ 13.24 ಕೀ. ಮೀ. ಮೈಲೇಜ್ ಸಿಗಲಿದೆ.

ಆರಾಮದಾಯಕ

ಆರಾಮದಾಯಕ

ಇದರ ಸೀಟನ್ನು ಎಂಟು ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು. ಹೀಗಾಗಿ ದೂರ ಪ್ರಯಾಣ ಕೈಗೊಳ್ಳುವಾಗ ತ್ರಾಸ ಪಡದೆ ಆರಾಮವಾಗಿ ಪ್ರಯಾಣ ಮಾಡಬಹುದಾಗಿದೆ. ಬಾಗಿಸಬಹುದಾದ(ಟಿಲ್ಟ್) ಸ್ಟಿಯರಿಂಗ್ ವೀಲ್ ಇದರ ಇನ್ನೊಂದು ವಿಶೇಷತೆ. ಇದರಿಂದ ಆರಾಮವಾಗಿ ಡ್ರೈವಿಂಗ್ ಮಾಡಬಹುದಾಗಿದೆ. ಇದರ ಹಿಂಭಾಗದ ಸೀಟಿನಲ್ಲಿರುವ ಏರ್ ಕಂಡಿಷನ್ ವೆಂಟ್ ಗಳಿಗೆ ಬೇರೆಯೇ ಕಂಟ್ರೋಲ್ ಸಿಸ್ಟಮ್ ಇದೆ

ಪ್ರಯಾಣ ಸುಲಭ

ಪ್ರಯಾಣ ಸುಲಭ

ಕಡಿಮೆ ಆವರ್ತನಕ್ಕೆ ಹೆಚ್ಚು ಟಾರ್ಕ್ ಪವರ್ ನೀಡುವುದರಿಂದ ಸಿಟಿ ರಸ್ತೆಯಲ್ಲಿ ಪ್ರಯಾಣ ಸುಲಭವಾಗುತ್ತದೆ. ಎಂಜಿನ್ ಹೆಚ್ಚು ಪವರ್ ನೀಡುವುದರಿಂದ ದುರ್ಗಮ ಹಾದಿಗಳಲ್ಲೂ ಹೆಚ್ಚು ಪರಿಶ್ರಮ ಪಡೆದೆ ಪ್ರಯಾಣಿಸಬಹುದಾಗಿದೆ.

ಪ್ರಬಲ ಪೈಪೋಟಿ

ಪ್ರಬಲ ಪೈಪೋಟಿ

ರೆನೊ ಡಸ್ಟರ್ ಕಾರು ಟಾಟಾ ಸಫಾರಿ, ಮಹೀಂದ್ರ ಕ್ವಾಂಟೊ ಮತ್ತು ಮಹೀಂದ್ರ ಸ್ಕಾರ್ಪಿಯೊ ಕಾರುಗಳ ಜೊತೆ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸಲಿದೆ.

Most Read Articles

Kannada
English summary
Kannada films bubbly actress Hashika Poonacha buys new car Renault Duster (Top end model). The actress says that she chose the colour and opted for the best accessories of the car. let us see specifications of this car.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more