ಲಂಬೊರ್ಗಿನಿ ಅಗ್ಗದ ಕಾರು ಬೇಕೆ? ಸ್ವಲ್ಪ ತಾಳಿ!

ಲಂಬೊರ್ಗಿನಿ ಕಂಪನಿಯು ಪ್ರಪ್ರಥಮ ಬಾರಿಗೆ ಅಗ್ಗದ ಕಾರೊಂದನ್ನು ಹೊರತರುವ ಪ್ರಕ್ರಿಯೆಯಲ್ಲಿದೆ. ಅಗ್ಗದ ಕಾರೆಂದರೆ ಕೆಲವು ಲಕ್ಷ ರುಪಾಯಿಗೆ ದೊರಕುವ ಕಾರಲ್ಲ. ಇದು ಲಂಬೊರ್ಗಿನಿ ಕಂಪನಿಯು ಇಲ್ಲಿವರೆಗೆ ತಂದಿರುವ ಕಾರುಗಳಲ್ಲಿ ಅಗ್ಗದ ಕಾರು. ದರ ಸುಮಾರು 1.1 ಕೋಟಿ ರುಪಾಯಿ ಇರಲಿದೆ.

ಲಂಬೊರ್ಗಿನಿ ಉರಾಸ್ ಹೆಸರಿನ ಕಾರನ್ನು ಕಂಪನಿಯು ಈ ವರ್ಷದ ಆರಂಭದಲ್ಲಿ ಬೀಜಿಂಗ್ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಿತ್ತು. ಇದರ ಕುರಿತು ವಾಹನ ಅಭಿಮಾನಿಗಳು ಬರಪೂರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಕಂಪನಿಯು ಈ ಕಾರನ್ನು ಉತ್ಪಾದಿಸಲು ನಿರ್ಧರಿಸಿದೆ ಎಂಬ ಸುದ್ದಿಬಂದಿದೆ.

ನೂತನ ಲಂಬೊರ್ಗಿನಿ ಉರಾಸ್ ಕಾರು 2016ರ ವೇಳೆಗೆ ರಸ್ತೆಗಿಳಿಯುವ ನಿರೀಕ್ಷೆಯಿದೆ. ದರ ಸುಮಾರು 1,35,000 ಪೌಂಡ್ ಇರಲಿದೆ. ಅಂದರೆ ಅಂದಾಜು 1.1 ಕೋಟಿ ರುಪಾಯಿ ಇರಲಿದೆ. ಇಷ್ಟು ದರಕ್ಕೆ ದೊರಕಿದರೆ ಇದು ಕಂಪನಿಯ ಅತಿ ಅಗ್ಗದ ಕಾರಾಗಲಿದೆ. ದೇಶದ ರಸ್ತೆಗೆ ಆಗಮಿಸುವಾಗ ತೆರಿಗೆ ಭಾರವೆಲ್ಲ ಸೇರಿ ಸುಮಾರು 2 ಕೋಟಿ ರು. ಆಸುಪಾಸಿನಲ್ಲಿರಲಿದೆ.

ಈಗ ಕಂಪನಿಯು ಲಂಬೊರ್ಗಿನಿ ಗಲಾರ್ಡೊ ಮತ್ತು ಲಂಬೊರ್ಗಿನಿ ಅವೆಂಟಡೊರ್ ಎಂಬೆರಡು ಕಾರುಗಳನ್ನು ದೇಶದಲ್ಲಿ ಮಾರಾಟ ಮಾಡುತ್ತಿದೆ. ಇದರ ದರ ಕ್ರಮವಾಗಿ 2 ಕೋಟಿ ರು. ಮತ್ತು 3.7 ಕೋಟಿ ರುಪಾಯಿ ಇದೆ.

ನೂತನ ಲಂಬೊರ್ಗಿನಿ ಉರಾಸ್ ಕಾರಿನ ಬಗ್ಗೆ ಸದ್ಯ ಕೊಂಚ ಮಾಹಿತಿ ದೊರಕಿದೆ. ಇದು 4.0 ಲೀಟರಿನ ವಿ8 ಎಂಜಿನ್ ಹೊಂದಿರಲಿದೆ. ಇದು ಗರಿಷ್ಠ 600 ಅಶ್ವಶಕ್ತಿ ಮತ್ತು 480 ಟಾರ್ಕ್ ಪವರ್ ನೀಡಲಿದೆ.

Most Read Articles

Kannada
English summary
Lamborghini's Cheapest Car - Urus To Cost Rs 1.1 crore. The Urus SUV which had received great applause from auto enthusiasts is still in concept stage and far away from production reality. However, latest reports are that the car will debut in 2016 and carry a price tag of £135,000 (approx Rs 1.1 Crore).
Story first published: Monday, July 16, 2012, 16:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X