ಹೊಸ ಮೈಲುಗಲ್ಲು ತಲುಪಿದ ಮಹೀಂದ್ರ ಸ್ಕಾರ್ಪಿಯೊ

ಮಹೀಂದ್ರ ಕಂಪನಿಗೆ ದಾಖಲೆಯ ಸರಮಾಲೆ ನೀಡುತ್ತಿರುವ ಸ್ಕಾರ್ಪಿಯೊ ಮತ್ತೊಂದು ಮೈಲುಗಲ್ಲು ತಲುಪಿದೆ. 2011-12ರಲ್ಲಿ ಸ್ಕಾರ್ಪಿಯೊ ಮಾರಾಟ 50 ಸಾವಿರ ಯುನಿಟ್ ದಾಟಿದೆ. ಇದು ಸ್ಕಾರ್ಪಿಯೊ ರಸ್ತೆಗಿಳಿದ ನಂತರದ ಪ್ರಪ್ರಥಮ ಅತ್ಯಧಿಕ ಮಾರಾಟವಾಗಿದೆ.

2011-12ರಲ್ಲಿ ಸುಮಾರು 50,844 ಯುನಿಟ್ ಸ್ಕಾರ್ಪಿಯೊ ಮಾರಾಟವಾಗಿದ್ದು, 2010-11ರ 43,451 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಶೇಕಡ 17ರಷ್ಟು ಏರಿಕೆ ಕಂಡಿದೆ.

"ಇದು ನಮಗೆ ಇನ್ನೊಂದು ಸಂಭ್ರಮದ ಕ್ಷಣ. ಐಕಾಣಿಕ್ ಮತ್ತು ಟ್ರೆಂಡಿ ಸ್ಕಾರ್ಪಿಯೊ ರಸ್ತೆಗಿಳಿದ ಹತ್ತು ವರ್ಷಗಳಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ದೇಶದ ವಾಹನ ಉದ್ಯಮದಲ್ಲಿ ಸ್ಕಾರ್ಪಿಯೊ ಹೆಚ್ಚು ಜನಪ್ರಿಯ ಮತ್ತು ಬಹುಮೆಚ್ಚುಗೆ ಪಡೆದ ಬ್ರಾಂಡಾಗಿದೆ" ಎಂದು ಮಹೀಂದ್ರ ಆಂಡ್ ಮಹೀಂದ್ರ ವಾಹನ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧೀಕಾರಿ ಪ್ರವೀಣ್ ಶಾ ಹೇಳಿದ್ದಾರೆ.

ಕಂಪನಿಯು ಮುಂದಿನ ವರ್ಷ ನೂತನ ಸ್ಕಾರ್ಪಿಯೊ ಆವೃತ್ತಿಯೊಂದನ್ನು ಕೂಡ ಹೊರತರಲು ಯೋಜಿಸಿದೆ. ಕಂಪನಿಯು ಈ ಪ್ರಾಜೆಕ್ಟಿಗೆ ಡಬ್ಲ್ಯು105 ಎಂದು ಹೆಸರಿಟ್ಟಿದೆ. ಚೆನ್ನೈನ ಮಹೀಂದ್ರ ರಿಸರ್ಚ್ ವ್ಯಾಲಿಯಲ್ಲಿ ಹೊಸ ಸ್ಕಾರ್ಪಿಯೊ ಅಪ್ ಗ್ರೇಡಿಂಗ್ ಕೆಲಸ ಆರಂಭವಾಗಿದೆ.

ಸ್ಕಾರ್ಪಿಯೊ ಜನಪ್ರಿಯತೆಗೆ ಸಾಕ್ಷಿಯಾಗಿ ಈಗಾಗಲೇ ಸ್ಕಾರ್ಪಿಯೊ ಫೇಸ್‌ಬುಕ್ ಪ್ಯಾನ್ ಪೇಜಿನಲ್ಲಿ ಹತ್ತು ಲಕ್ಷ ಅಭಿಮಾನಿಗಳಿದ್ದಾರೆ. ಯೂಟ್ಯೂಬಿನಲ್ಲಿ ಸುಮಾರು 15 ಲಕ್ಷ ಜನರು ಸ್ಕಾರ್ಪಿಯೊ ವಿಡಿಯೋ ನೋಡಿದ್ದಾರೆ. ಕಂಪನಿಯು 2015ರಲ್ಲಿ ಹೈಬ್ರಿಡ್ ಸ್ಕಾರ್ಪಿಯೊ ಹೊರತರುವ ಸುದ್ದಿಯೂ ವಾಹನ ಲೋಕದಲ್ಲಿ ಓಡಾಡುತ್ತಿದೆ.

Most Read Articles

Kannada
English summary

 Mahindra Scorpio, the company's record breaking SUV, has achieved another milestone by posting its highest ever annual sales in 2011-12 since its launch. The Scorpio which was launched a decade ago recorded a sales figure of 50,844 units against 43,451units in 2010-11 marking a growth of 17%.
Story first published: Monday, May 7, 2012, 14:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X