ಮಹೀಂದ್ರ ಸ್ಕಾರ್ಪಿಯೊ ಆಟೋಮ್ಯಾಟಿಕ್ ಮಾರಾಟ ಸ್ಥಗಿತ?

ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ಆಟೋಮ್ಯಾಟಿಕ್ ಸ್ಕಾರ್ಪಿಯೊ ಕಾರು ಪ್ರೇಮಿಗಳಿಗೆ ಒಂದು ನಿರಾಶೆಯ ಸುದ್ದಿಯಿದು. ಕಂಪನಿಯು ಮುಂದಿನ ಕೆಲವೇ ತಿಂಗಳಲ್ಲಿ ಸ್ಕಾರ್ಪಿಯೊ ಆಟೋಮ್ಯಾಟಿಕ್ ಆವೃತ್ತಿಯ ಮಾರಾಟವನ್ನು ಸ್ಥಗಿತಗೊಳಿಸಲಿದೆಯಂತೆ. ಈಗಾಗಲೇ ಆರು ಸ್ಪೀಡಿನ ಆಟೋಮ್ಯಾಟಿಕ್ ಸ್ಕಾರ್ಪಿಯೊ ಆವೃತ್ತಿಯನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಂಪನಿ ಸ್ಥಗಿತಗೊಳಿಸಿದೆ.

ಆಟೋಮ್ಯಾಟಿಕ್ ಗೇರುಗಳ ಅಲಭ್ಯತೆಯೇ ಸ್ಕಾರ್ಪಿಯೊ ಆಟೋಮ್ಯಾಟಿಕ್ ಕಾರುಗಳ ಮಾರಾಟ ನಿಲ್ಲಿಸಲು ಪ್ರಮುಖ ಕಾರಣವೆನ್ನಲಾಗಿದೆ. ಕೆಲವು ವರ್ಷಗಳಿಂದ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪೂರೈಸುತ್ತಿದ್ದ ಡಿಎಸ್ಐ ದಿವಾಳಿಯಾಗಿರುವುದು ಮಹೀಂದ್ರ ಪಾಲಿಗೆ ನುಂಗಲಾರದ ತುತ್ತಾಗಿದೆ.

ಮಹೀಂದ್ರ ಸ್ಕಾರ್ಪಿಯೊ ಆಟೋಮ್ಯಾಟಿಕ್ ಕಾರು ಎರಡು ಆವೃತ್ತಿಗಳಲ್ಲಿ ದೊರಕುತ್ತದೆ. ವಿಎಲ್ಎಕ್ಸ್ 2 ವೀಲ್ ಡ್ರೈವ್ ಮತ್ತು ವಿಎಲ್ ಎಕ್ಸ್ 4 ವೀಲ್ ಡ್ರೈವ್ ಆವೃತ್ತಿಗಳಲ್ಲಿ ಈ ಕಾರು ಲಭ್ಯವಿದೆ. ಇದರಲ್ಲಿ ಟೂ ವೀಲ್ ಡ್ರೈವ್ ಸ್ಕಾರ್ಪಿಯೊ ದರ 11.21 ಲಕ್ಷ ರು. ಮತ್ತು ಫೋರ್ ವೀಲ್ ಡ್ರೈವ್ ಕಾರಿನ ದರ ಸುಮಾರು 12.63 ಲಕ್ಷ ರುಪಾಯಿ ಇದೆ.

ಡಿಎಸ್ಐ ಕಂಪನಿಯು ನಾಲ್ಕು ಸ್ಪೀಡಿನ ಮತ್ತು ಆರು ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನುಗಳನ್ನು ಫೋರ್ಡ್, ಕ್ರಿಸ್ಲರ್ ಮತ್ತು ಸ್ಯಾಂಗ್ಯೊಂಗ್ ಮೋಟರ್ ಕಾರ್ಪ್ ಕಂಪನಿಗಳಿಗೆ ಪೂರೈಸುತ್ತಿದೆ. ಕಂಪನಿಯು 8 ಸ್ಪೀಡಿನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಕೂಡ ಅಭಿವೃದ್ಧಿಪಡಿಸುತ್ತಿದೆ.

ಮಹೀಂದ್ರ ಕಂಪನಿಯ ಸ್ಕಾರ್ಪಿಯೊ ಕಾರು ಇತ್ತೀಚೆಗೆ ಹೊಸ ದಾಖಲೆ ಸೃಷ್ಟಿಸಿದೆ. ಮಹೀಂದ್ರ ಕಂಪನಿಗೆ ದಾಖಲೆಯ ಸರಮಾಲೆ ನೀಡುತ್ತಿರುವ ಸ್ಕಾರ್ಪಿಯೊ ಮತ್ತೊಂದು ಮೈಲುಗಲ್ಲು ತಲುಪಿದೆ. 2011-12ರಲ್ಲಿ ಸ್ಕಾರ್ಪಿಯೊ ಮಾರಾಟ 50 ಸಾವಿರ ಯುನಿಟ್ ದಾಟಿದೆ. ಇದು ಸ್ಕಾರ್ಪಿಯೊ ರಸ್ತೆಗಿಳಿದ ನಂತರದ ಪ್ರಪ್ರಥಮ ಅತ್ಯಧಿಕ ಮಾರಾಟವಾಗಿದೆ.

Most Read Articles

Kannada
English summary
Suv specialist Mahindra has decided to discontinue the automatic Scorpio production due to supply problem. The automatic scorpio sales will be stopped in the next couple of months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X