ಆಗಸ್ಟ್ ತಿಂಗಳಲ್ಲಿ ಮಾರುತಿ ಮಾರಾಟ ಭಾರೀ ಇಳಿಕೆ

ನವದೆಹಲಿ, ಆ 3: ಕಳೆದ ತಿಂಗಳು ದೇಶದ ಬೃಹತ್ ಪ್ರಯಾಣಿಕ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಕಾರು ಮಾರಾಟ ಕಳೆದ ವರ್ಷದ ಆಗಸ್ಟ್ ತಿಂಗಳಿಗಿಂತ ಶೇಕಡ 40ರಷ್ಟು ಇಳಿಕೆ ಕಂಡಿದೆ.

ಮಾನೆಸರ್ ಘಟಕದಲ್ಲಿ ನೌಕರರ ಗಲಭೆಯಿಂದ ಗ್ರಾಹಕರಿಗೆ ಸಮರ್ಪಕವಾಗಿ ಕಾರು ಪೂರೈಸಲು ಸಾಧ್ಯವಾಗದೆ ಇದ್ದದ್ದು ಮಾರಾಟ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಕಂಪನಿಯು ಮಾನೆಸರ್ ಘಟಕದಲ್ಲಿ ಉತ್ಪಾದನೆಯನ್ನು ಇತ್ತೀಚಿನವರೆಗೆ(ಜುಲೈ 21- ಆ 20) ಸ್ಥಗಿತಗೊಳಿಸಿತ್ತು.

ಆಗಸ್ಟ್ ತಿಂಗಳಲ್ಲಿ ಮಾರುತಿ ಸುಜುಕಿ ಕಂಪನಿಯು 54,415 ಕಾರು ಮಾರಾಟ ಮಾಡಿದ್ದು, 2011ರ ಇದೇ ತಿಂಗಳ 91,442 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಶೇಕಡ 40ರಷ್ಟು ಇಳಿಕೆ ದಾಖಲಿಸಿದೆ.

ಮಾನೆಸರ್ ಘಟಕಕ್ಕೆ ಬೀಗಮುದ್ರೆ ಹಾಕಿದ್ದರಿಂದ ಸ್ವಿಫ್ಟ್, ಡಿಜೈರ್, ಎಸ್ಎಕ್ಸ್4 ಮತ್ತು ಎ-ಸ್ಟಾರ್ ಮಾಡೆಲ್ ಗಳ ಪೂರೈಕೆಗೆ ಹಿನ್ನಡೆಯಾಗಿರುವುದು ಮಾರಾಟ ಇಳಿಕೆಗೆ ಪ್ರಮುಖ ಕಾರಣವೆಂದು ಮಾರುತಿ ಸುಜುಕಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ತಿಂಗಳು ಕಂಪನಿಯು 3,085 ಡಿಜೈರ್ ಮತ್ತು 6,059 ಯುನಿಟ್ ಸ್ವಿಫ್ಟ್, ಎಸ್ಟಿಲೊ, ರಿಟ್ಜ್ ಕಾರುಗಳನ್ನು ಮಾರಾಟ ಮಾಡಿದೆ. ಇದೇ ಸಮಯದಲ್ಲಿ ಜಿಪ್ಸಿ, ಎರ್ಟಿಗಾ ಮತ್ತು ಗ್ರಾಂಡ್ ವಿಟರಾ ಕಾರುಗಳ ಮಾರಾಟ 6,883 ಯುನಿಟ್ ತಲುಪಿದೆ.

Most Read Articles

Kannada
English summary
India's largest passenger car maker Maruti Suzuki August sales down 40 percent. Maruti Suzuki sold 54,415 units last month as against 91,442 units sold in August last year.
Story first published: Monday, September 3, 2012, 10:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X