ಏಪ್ರಿಲ್ ಒಂದರಿಂದ ವಾಹನ ವಿಮೆ ದುಬಾರಿ

ವಿಮಾ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ(ಐಆರ್ ಡಿಎ)ವು ಥರ್ಡ್ ಪಾರ್ಟಿ ಅಥವಾ ಮೂರನೇ ಪಾರ್ಟಿಯವರಿಗೆ ನೀಡುವ ವಿಮಾ ಪರಿಹಾರ ವಿಮಾ ಪಾವತಿ ದರವನ್ನು ಏಪ್ರಿಲ್ ಒಂದರಿಂದ ಹೆಚ್ಚಿಸಲಿದೆ. ಮುಂದಿನ ತಿಂಗಳಿನಿಂದ ಕಡ್ಡಾಯ ಥರ್ಡ್ ಪಾರ್ಟಿ ವಾಹನ ವಿಮೆ ಶೇಕಡ 6ರಿಂದ ಶೇಕಡ 40ರವರೆಗೆ ಏರಿಕೆ ಕಾಣಲಿದೆ.

ವಿಮೆ ಕ್ಲೈಮ್ ಸೇವೆಗಳ ವೆಚ್ಚ ಹೆಚ್ಚಾಗಿರುವ ಹಿನ್ನಲೆಯಲ್ಲಿ ಐಆರ್ ಡಿಎ ಈ ನಿರ್ಧಾರಕ್ಕೆ ಬಂದಿದೆ. ಇದರೊಂದಿಗೆ ವಾಹನ ಹಾನಿ ಪಾಲಿಸಿ ಮೊತ್ತವೂ ಏರಿಕೆ ಕಾಣುವ ಸಾಧ್ಯತೆಯಿದೆ. ನೂತನ ವಿಮಾ ದರ ಹೆಚ್ಚಳವು ವಾಣಿಜ್ಯ ವಾಹನಗಳಿಗೆ ಹೆಚ್ಚು ಪರಿಣಾಮ ಬೀರಿದೆ.

ಗೂಡ್ಸ್ ಸಾಗಿಸುವ ತ್ರಿಚಕ್ರ ವಾಹನಗಳಿಗೆ ವಿಮಾ ದರ 2,440 ರುಪಾಯಿ ಇತ್ತು. ಇದೀಗ ಹೊಸ ದರದ ಪ್ರಕಾರ ಇದು 3,415 ರುಪಾಯಿಗೆ ಏರಿಕೆ ಕಾಣಲಿದೆ.

7,500 ಕೆಜಿ ಸಾಮಾರ್ಥ್ಯದ ಟ್ರಕ್ ವಿಮಾ ದರವು 8,420 ರು.ನಿಂದ 9,818 ರು.ಗೆ ಏರಿಕೆ ಕಂಡಿದೆ. ಖಾಸಗಿ ಕಾರುಗಳ ಥರ್ಡ್ ಪಾರ್ಟಿ ವಿಮಾ ಪಾವತಿ ದರ 880 ರು.ನಿಂದ 925 ರು.ಗೆ ಹೆಚ್ಚಳ ಮಾಡಲಾಗಿದೆ. ವಾಣಿಜ್ಯ ವಾಹನಗಳಿಗೆ ಹೋಲಿಸಿದರೆ ಇದು ಕಡಿಮೆ.

ಈ ಹಿಂದೆ ವಾಣಿಜ್ಯ ವಾಹನ ವಿಮಾ ಪಾವತಿ ಹೆಚ್ಚಿಸಿದಕ್ಕೆ ಟ್ರಕ್ ಕಾರ್ಮಿಕ ಸಂಘವು ದೇಶಾದ್ಯಂತ ಮುಷ್ಕರ ನಡೆಸಿದ್ದರು. ಅಪಘಾತ ಇತ್ಯಾದಿಗಳಿಂದ ವಾಹನ ಹಾನಿ ವಿಮೆ ಪಾವತಿ ಮೊತ್ತ ಶೇಕಡ 15ರಿಂದ ಶೇಕಡ 20ರಷ್ಟು ಏರಿಕೆ ಕಂಡಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

Most Read Articles

Kannada
English summary
IRDA will hike Third-party Motor insurance cover rates Between 6% to 40%. Insurance Regulatory Development Authority will rise insurance rates from April 1.
Story first published: Wednesday, March 28, 2012, 10:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X