ನ್ಯಾನೊ ಸಾಥ್: ಗರಿಗೆದರಿದ ಟಾಟಾ ಮೋಟರ್ಸ್

ಪ್ರಯಾಣಿಕ ಕಾರುಗಳ ಭರ್ಜರಿ ಮಾರಾಟದ ನೆರವಿನಿಂದ ಕಳೆದ ತಿಂಗಳು ಟಾಟಾ ಮೋಟರ್ಸ್ ಕಾರು ಮಾರಾಟ ಗಮನಾರ್ಹವಾಗಿ ಶೇಕಡ 15ರಷ್ಟು ಏರಿಕೆ ದಾಖಲಿಸಿದೆ. ಇದೇ ಸಮಯದಲ್ಲಿ ಕಂಪನಿಯ ವಾಣಿಜ್ಯ ವಾಹನ ಮಾರಾಟವೂ ಶೇಕಡ 4ರಷ್ಟು ಹೆಚ್ಚಳವಾಗಿದೆ.

2012ರ ಜುಲೈ ತಿಂಗಳಿನಲ್ಲಿ ರಫ್ತು ಸೇರಿದಂತೆ ಟಾಟಾ ಮೋಟರ್ಸ್ ವಾಣಿಜ್ಯ ಮತ್ತು ಪ್ರಯಾಣಿಕ ವಾಹನ ಮಾರಾಟ 74,159 ಯುನಿಟ್ ತಲುಪಿದ್ದು, ಶೇಕಡ 15ರಷ್ಟು ಏರಿಕೆ ದಾಖಲಿಸಿದೆ. ಕಳೆದ ತಿಂಗಳು ಕಂಪನಿ ದೇಶದಲ್ಲಿ ಒಟ್ಟು 68,627 ಯುನಿಟ್ ವಾಹನ ಮಾರಾಟ ಮಾಡಿದ್ದು, ಶೇಕಡ 18ರಷ್ಟು ಏರಿಕೆ ದಾಖಲಿಸಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಕಂಪನಿಯ ಮಾರಾಟ 57,990 ಯುನಿಟ್ ಆಗಿತ್ತು.

ಕಳೆದ ತಿಂಗಳು ಪ್ರಯಾಣಿಕ ಕಾರುಗಳ ಮಾರಾಟ 26,240 ಯುನಿಟ್ ತಲುಪಿದ್ದು, ಕಳೆದ ವರ್ಷದ ಜುಲೂ ತಿಂಗಳ 17,192 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಶೇಕಡ 53ರಷ್ಟು ಏರಿಕೆ ದಾಖಲಿಸಿದೆ. ಇದೇ ಸಮಯದಲ್ಲಿ ಕಂಪನಿಯು 5,485 ನ್ಯಾನೊ ಕಾರು ಮಾರಾಟ ಮಾಡಿದ್ದು, 2011ರ ಜುಲೈ ತಿಂಗಳ 3,260 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಶೇಕಡ 68ರಷ್ಟು ಏರಿಕೆ ದಾಖಲಿಸಿದೆ.

ಇದೇ ಸಮಯದಲ್ಲಿ ಇಂಡಿಗೊ ಶ್ರೇಣಿಯ ವಾಹನ ಮಾರಾಟ 6,816 ಯುನಿಟ್ ತಲುಪಿದ್ದು, ಕಳೆದ ವರ್ಷದ ಜುಲೈ ತಿಂಗಳ 4,877 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಶೇಕಡ 40ರಷ್ಟು ಏರಿಕೆ ದಾಖಲಿಸಿದೆ. ಟಾಟಾ ಸುಮೊ/ ಸಫಾರಿ/ಆರಿಯಾ/ವೆಂಚ್ಯೂರ್ ಶ್ರೇಣಿಯ ಕಾರು ಮಾರಾಟ 5,087 ಯುನಿಟ್ ತಲುಪಿದ್ದು, ಜುಲೈ 2011ರ 3,195 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಶೇಕಡ 59ರಷ್ಟು ಏರಿಕೆ ದಾಖಲಿಸಿದೆ.

Most Read Articles

Kannada
English summary
Tata Motors, India's largest vehicle manufacturer has posted a positive sales report for the month of July. Tata Motors July sales rose by 15% thanks top the robust performance of its passenger cars. Tata Motors has stated its commercial vehicle sales grew by 4% in July.
Story first published: Friday, August 3, 2012, 9:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X