ನಿಸ್ಸಾನ್ ಸನ್ನಿ ಸಹೋದರ ಕಾರ್ ಶಿಲ್ಫಿ ಬರುತ್ತೆ!

ಜಪಾನಿನ ಕಾರು ತಯಾರಿಕಾ ಕಂಪನಿ ನಿಸ್ಸಾನ್ ಈಗಾಗಲೇ ಸಿ ಸೆಗ್ಮೆಂಟ್ ಸೆಡಾನ್ ಸನ್ನಿ ಮೂಲಕ ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ. ಇದೀಗ ಕಂಪನಿಯು ಡಿ ಸೆಗ್ಮೆಂಟ್ ಸೆಡಾನ್ ಕಾರು ಶಿಲ್ಪಿ ಪರಿಚಯಿಸಲು ಯೋಜಿಸಿದೆ ಎಂಬ ಊಹಾಪೋಹಗಳು ಎದ್ದಿವೆ. ಈ ಕುರಿತು ಕಂಪನಿ ಇನ್ನೂ ಖಚಿತಪಡಿಸಿಲ್ಲ.

ಚೀನಾದ ಮಾರುಕಟ್ಟೆಗೆ ಶಿಲ್ಫಿ ಕಾರನ್ನು ಪರಿಚಯಿಸಿದ ನಂತರ ದೇಶದ ರಸ್ತೆಗೆ ನಿಸ್ಸಾನ್ ಪರಿಚಯಿಸುವ ನಿರೀಕ್ಷೆಗಳಿವೆ. ಈಗಾಗಲೇ ಶಿಲ್ಫಿ ಸೆಡಾನ್ ಕಾರು ಉತ್ತರ ಅಮೆರಿಕದಲ್ಲಿ ಸೆಂಟ್ರಾ ಹೆಸರಿನಲ್ಲಿ ಮಾರಾಟವಾಗುತ್ತಿದೆ. ಭಾರತದ ರಸ್ತೆಗೆ ಆಗಮಿಸುವಾಗ ಇನ್ಯಾವುದೋ ಹೊಸ ಹೆಸರಿನೊಂದಿಗೆ ಬರುತ್ತೋ ಗೊತ್ತಿಲ್ಲ.

ಚೈನಿಸ್ ಆವೃತ್ತಿ ಶಿಲ್ಪಿ 1.8 ಲೀಟರಿನ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಕಾರು ದೇಶದ ರಸ್ತೆಗೆ ಡೀಸೆಲ್ ಆವೃತ್ತಿಯಲ್ಲೂ ಆಗಮಿಸುವ ನಿರೀಕ್ಷೆಯಿದೆ. ಶಿಲ್ಪಿ ಕಾರಿನ ದರ ಸುಮಾರು 14 ಲಕ್ಷ ರುಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.

ಸದ್ಯ ದೇಶದಲ್ಲಿ ಎಂಟ್ರಿ ಲೆವೆಲ್ ಸನ್ನಿ ಮತ್ತು ಟೀನಾ ಪ್ರೀಮಿಯಂ ಕಾರುಗಳ ಮಧ್ಯದ ಸೆಗ್ಮೆಂಟಿಗೆ ಯಾವುದೇ ಕಾರುಗಳನ್ನು ನಿಸ್ಸಾನ್ ಹೊಂದಿಲ್ಲ. ನೂತನ ನಿಸ್ಸಾನ್ ಶಿಲ್ಪಿ ಡಿ ಸೆಗ್ಮೆಂಟಿಗೆ ಆಗಮಿಸಿದರೆ ಈ ಕೊರತೆ ನೀಗಲಿದೆ. ಈಗಾಗಲೇ ಇತರ ಕಂಪನಿಗಳು ಷೆವರ್ಲೆ ಕ್ರೂಝ್, ಟೊಯೊಟಾ ಕೊರೊಲಾ ಆಲ್ಟಿಸ್, ಫೋಕ್ಸ್ ವ್ಯಾಗನ್ ಜೆಟ್ಟಾ, ಸ್ಕೋಡಾ ಲೌರಾ, ಹೋಂಡಾ ಸಿವಿಕ್ ಮತ್ತು ರೆನಾಲ್ಟ್ ಫ್ಲೂಯೆನ್ಸ್ ಮುಂತಾದ ಕಾರುಗಳನ್ನು ಹೊಂದಿವೆ.

Most Read Articles

Kannada
English summary
Nissan, the Japanese carmaker which is looking to gain volume sales in the country has been successful with the Sunny C-segment sedan. Now speculations are that the company will roll out the Sylphy D-segment sedan which was showcased at the recently concluded Beijing Motor Show.
Story first published: Thursday, May 10, 2012, 12:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X