ಟಾಟಾ ನ್ಯಾನೊ ಕಾರಿಗೆ ಸಚಿನ್ ನೀಡಿದ ಸಲಹೆ

ದೇಶದ ಅಗ್ರಗಣ್ಯ ವಾಹನ ತಯಾರಿಕಾ ಕಂಪನಿ ಟಾಟಾ ಮೋಟರ್ಸ್ ಕಂಪನಿಯ ನ್ಯಾನೊ ಕಾರು ಈಗಾಗಲೇ ಜಗತ್ತಿನ ಗಮನ ಸೆಳೆದಿದೆ. ಆದರೆ ಮಾರಾಟದಲ್ಲಿ ನ್ಯಾನೊ ಕಾರು ಹಿನ್ನಡೆ ಅನುಭವಿಸುತ್ತಿರುವ ಕುರಿತು ಇತ್ತೀಚೆಗೆ ರತನ್ ಟಾಟಾ ಖೇದ ವ್ಯಕ್ತಪಡಿಸಿದ್ದರು. ಸಮಯ ಮಿಂಚುವ ಮುನ್ನ ನ್ಯಾನೊ ಕಾರಿಗೆ ಉತ್ತೇಜನ ನೀಡುವ ಅಗತ್ಯತೆಯನ್ನು ಅವರು ಒತ್ತಿ ಹೇಳಿದ್ದರು.

ಟಾಟಾ ಸಮೂಹದಿಂದ ನಿವೃತ್ತಿಯ ಅಂಚಿನಲ್ಲಿರುವ ರತನ್ ಟಾಟಾರ ಕಳವಳಕ್ಕೆ ಕಾರಣವೂ ಇದೆ. ಅದು ಅವರ ಕನಸಿನ ಕೂಸು. ಅದನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಅವರು ಆಸ್ಪತ್ರೆಯಿಂದ ಸ್ಟ್ರೆಚರ್ ಮೂಲಕ ಬಂದಿದ್ದರು. ಜಗತ್ತಿಗೆ ಅಗ್ಗದ ಕಾರು ನೀಡುವ ಕನಸನ್ನು ನ್ಯಾನೊ ಮೂಲಕ ರತನ್ ಟಾಟಾ ಸಾಕಾರಗೊಳಿಸಿದ್ದರು. (ಓದಿ: ನ್ಯಾನೊ ಏಳುಬೀಳುಗಳು)

ನ್ಯಾನೊ ಕಾರು ಹೆಚ್ಚು ಜನರ ಗಮನ ಸೆಳೆಯಲು ನಿಮ್ಮ ಸಲಹೆಯೇನೆಂದು ನಿನ್ನೆ ಕನ್ನಡ ಡ್ರೈವ್ ಸ್ಪಾರ್ಕ್ ಓದುಗರಲ್ಲಿ ಪ್ರಶ್ನಿಸಿತ್ತು. ಅದಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ಕನ್ನಡ ಡ್ರೈವ್ ಸ್ಪಾರ್ಕ್ ಓದುಗರಾದ ಸಚಿನ್ ನೀಡಿರುವ ಸಲಹೆ ಆಸಕ್ತಿದಾಯಕವಾಗಿದೆ.

ಅವರ ಸಲಹೆ
* ಮೊದಲು ಟಾಟಾ ನ್ಯಾನೊ ಕಾರನ್ನು ಮೆಗಾಫಿಕ್ಸೆಲ್ ವಿನ್ಯಾಸದಲ್ಲಿ ಹೊರತರಬೇಕು.
* ಕಪ್ಪು ಬಂಪರ್ ಇರಬಾರದು
* ಹೊಸ ಡಿಸೈನ್ ಮೂಲಕ ಜನರನ್ನು ಸೆಳೆಯಬೇಕು.
* ಯಾವುದೇ ಸಮಸ್ಯೆಗಳಿಂದ ಹೆಸರುಕೆಡಿಸಿಕೊಳ್ಳಬಾರದು.
* ಕಾರ್ಲ್ ಸ್ಲಿಮ್ ಮಾರುಕಟ್ಟೆ ಕಾರ್ಯತಂತ್ರ ಮತ್ತು ಪರಿಣತಿ ಬಳಸಬೇಕು.
* ಅಗ್ಗದ ಕಾರು ಬದಲಾಗಿ, ಜನಸಾಮಾನ್ಯರು ಖರೀದಿಸಬಹುದಾದ ಕಾರೆಂದು ಮಾರ್ಕೆಟಿಂಗ್ ಮಾಡಬೇಕು.
* ಇಂಟಿರಿಯರ್ ವಿನ್ಯಾಸವೂ ನ್ಯಾನೊ ಕಾನ್ಸೆಪ್ ಕಾರು ಮೆಗಾಫಿಕ್ಸೆಲ್ ತರಹನೇ ಇರಬೇಕು.

ನ್ಯಾನೊ ಕಾರು ಈ ರೀತಿಯಿದ್ದರೆ ಪ್ರತಿಸ್ಪರ್ಧಿ ಕಂಪನಿಗಳನ್ನು ಬಿಟ್ಟು ಜನರು ಟಾಟಾ ಮೋಟರ್ಸ್ ಕಡೆ ಆಕರ್ಷಿತರಾಗುತ್ತರೆ ಎಂದು ಓದುಗರಾದ ಸಚಿನ್ ಸಲಹೆ ನೀಡಿದ್ದಾರೆ. ಅವರ ಸಲಹೆಗೆ ಧನ್ಯವಾದಗಳು. ಪ್ರೀತಿಯ ಓದುಗರೇ ನಿಮ್ಮಲ್ಲೂ ಬ್ರಿಲಿಯಂಟ್ ಸಲಹೆಗಳಿರಬಹುದಲ್ವೆ? ಕೆಳಗಿನ ಕಾಮೆಂಟ್ ಬಾಕ್ಸಿನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Most Read Articles

Kannada
English summary
Drivespark has received several responses to an article on how the Tata Nano can be made better. One reader by name Sachin has suggested that the Nano's design must be changed to look similar to the Nano Pixel concept. Do send us your feedback on this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X