ಬಿಎಸ್‌ಆರ್ ಪಕ್ಷ; ರಾಮುಲು 'ಹಮ್ಮರ್' ಹಮ್ಮು ಬಿಮ್ಮು

ಕರ್ನಾಟಕದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇವೆ. ಇದೀಗಷ್ಟೇ ನೂತನ ಪಕ್ಷ ಕಟ್ಟಿಕೊಂಡಿರುವ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯೆಬ್ಬಿಸಿದ್ದರು.

ಇದಾದ ಬೆನ್ನಲ್ಲೇ ಬಳ್ಳಾರಿ ರೆಡ್ಡಿ ಗಣಿ ಧನಿಗಳ ಚುನಾವಣೆ ಪ್ರಚಾರಕ್ಕೆ ಬಿಸಿ ಮುಟ್ಟಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ಜಾರಿ ನಿರ್ದೇಶನಾಲಯಗಳಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಬಳ್ಳಾರಿ ಗಣಿಧನಿಗಳು ಅಷ್ಟು ಬೇಗ ಸೋಲೊಪ್ಪಿಕೊಳ್ಳಲು ಸಿದ್ಧರಿಲ್ಲ.

ಇದರಿಂದಾಗಿ ಚುನಾವಣೆಗೆ ಸಕಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಬಿಸ್ಸಾರ್ ಕಾಂಗ್ರೆಸ್ ಎಂಬ ಪ್ರತ್ಯೇಕ ಪ್ರಾದೇಶಿಕ ಪಕ್ಷ ಕಟ್ಟಿರುವ ಶ್ರೀರಾಮುಲು ನೂತನ ರಾಜಕೀಯ ಸವಾಲುಗಳನ್ನು ಎದುರಿಸಲು ಸಿದ್ಧರಾಗಿದ್ದಾರೆ.

ಮೂಲಗಳ ಪ್ರಕಾರ ಶ್ರೀರಾಮುಲು ಅದ್ಧೂರಿ ಪ್ರಚಾರಕ್ಕೆ ಕಾರೊಂದರ ಎಂಟ್ರಿಯಾಗುತ್ತಿದೆ. ಅದು ಅಂತಿಥ ಕಾರಲ್ಲ. ದೇಶದ ಕೆಲವೇ ಕೆಲವು ಗಣ್ಯ ವ್ಯಕ್ತಿಗಳ ಬಳಿಯಿರುವ ದುಬಾರಿ 'ಹಮ್ಮರ್' ಕಾರು. ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಸ್ಪಿನ್ ಮಾಂತ್ರಿಕ ಹರಭಜನ್ ಸಿಂಗ್ ಹಾಗೂ ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ಅವರಂತಹ ಸೆಲೆಬ್ರಿಟಿಗಳ ಬಳಿ ಮಾತ್ರ ಹಮ್ಮರ್ ಕಾರಿದೆ.

ಇನ್ನು ಹೆಚ್ಚು ಹೇಳಬೆಂಕೆಂದರೆ ಹಮ್ಮರ್ ಕಾರು ಭಾರತದಲ್ಲಿ ಉತ್ಪಾದನೆಯಾಗುತ್ತಿಲ್ಲ. ಇದನ್ನು ಅಲ್ಲಿ ದೂರದ ಅಮೆರಿಕದಿಂದ ಆಮದು ಮಾಡಿಕೊಳ್ಳಬೇಕಾಗಿದೆ. ಹಾಗಾಗಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಈ ಹಮ್ಮರ್ ಕಾರನ್ನು ಪ್ರಚಾರಕ್ಕಾಗಿ ಬಳಸಲು ಶ್ರೀರಾಮುಲುಗೆ ದುಡ್ಡು ಎಲ್ಲಿಂದ ಬಂತು ಎಂಬುದಕ್ಕೆ ಜನಸಾಮಾನ್ಯರು ಉತ್ತರ ನೀಡಬೇಕಾಗಿದೆ.

ಏನೇ ಆದರೂ ಯಡಿಯೂರಪ್ಪ ತಮ್ಮ ಪ್ರಚಾರಕ್ಕೆ ದುಬಾರಿ ಪ್ರಾಡೋ ಕಾರನ್ನು ಬಳಸಬಹುದಾದರೆ ಶ್ರೀರಾಮುಲುಗೆ ಯಾಕೆ ದುಬಾರಿ ಹಮ್ಮರ್ ಬಳಸಬಾರದು? ಈ ಪರಿ ಇದೇ ರೀತಿ ಮುಂದುವರಿದರೆ ಇನ್ನಿತರ ರಾಜಕೀಯ ಪಕ್ಷಗಳ ನಾಯಕರು ಇನ್ಯಾವ ಕಾರು ಬಳಸಲಿದ್ದಾರೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ದೊರಕಲಿದೆ.

ಸದ್ಯ ಹೈದರಾಬಾದ್‌ನ ಚಂಚಲಗೂಡ ಜೈಲಿನಲ್ಲಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಂದ ಶ್ರೀರಾಮುಲು ಅರಿಗೆ ಸ್ಪಷ್ಟ ಸಂದೇಶ ಬಂದಿರುವುದು ನಿಜ. ಇದರಂತೆ ಪಕ್ಷದ ಸಂಘಟನಾ ಚಟುವಟಿಕೆಗಳಿಗೆ ಇನ್ನಷ್ಟು ಚುರುಕು ಮುಟ್ಟಿದೆ.

ಇದೇ ಸಂದರ್ಭದಲ್ಲಿ ಶ್ರೀರಾಮುಲು ತಮ್ಮ ಪ್ರಚಾರಕ್ಕಾಗಿ ಹೆಲಿಕಾಪ್ಟರ್‌ವೊಂದರನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಂಡಿರುವುದರ ಬಗ್ಗೆಯೂ ಮಾಹಿತಿ ಬಂದಿದೆ. ಒಟ್ಟಾರೆಯಾಗಿ ರಾಜ್ಯ ರಾಜಕೀಯದಲ್ಲಿ ಏನೆಲ್ಲ ಬೆಳವಣಿಗೆ ನಡೆಯಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

ಅಂದ ಹಾಗೆ ಹಮ್ಮರ್ ದರ ಎಷ್ಟು ಗೊತ್ತೇ?

ಅಂದ ಹಾಗೆ ಹಮ್ಮರ್ ದರ ಎಷ್ಟು ಗೊತ್ತೇ?

ದೆಹಲಿ ಎಕ್ಸ್ ಶೋ ರೂಂಗಳಲ್ಲಿ ಹಮ್ಮರ್ ದರ 40 ಲಕ್ಷ ರೂಪಾಯಿಗಳಿದ್ದು, ಇದು ಆನ್ ರೋಡ್ ತಲುಪುವಾಗ 50 ಲಕ್ಷಕ್ಕೂ ಹೆಚ್ಚಾಗುವ ಸಾಧ್ಯತೆಯಿದೆ.

ಬಿಎಸ್‌ಆರ್ ಪಕ್ಷ; ರಾಮುಲು 'ಹಮ್ಮರ್' ಹಮ್ಮು ಬಿಮ್ಮು

ಎಸ್‌ಯುವಿ ಟಾಪ್ ಎಂಡ್ ವೆರಿಯಂಟ್ ಕಾರು ಆಗಿರುವ ಹಮ್ಮರ್ ಸದ್ಯ ದೇಶಕ್ಕೆ ಆಮದು ಆಗುತ್ತಿರುವ ಅತಿ ದುಬಾರಿ ಕಾರುಗಳಲ್ಲಿ ಒಂದಾಗಿದೆ.

ಬಿಎಸ್‌ಆರ್ ಪಕ್ಷ; ರಾಮುಲು 'ಹಮ್ಮರ್' ಹಮ್ಮು ಬಿಮ್ಮು

ಐಷಾರಾಮಿ ಹಮ್ಮರ್ ಹಲವು ವೆರಿಯಂಟ್‌ಗಳಲ್ಲಿ ಆಮದಾಗುತ್ತಿದ್ದು, ಈ ಪೈಕಿ ಎಚ್3 ಅತಿ ಜನಪ್ರಿಯವಾಗಿದೆ.

ಬಿಎಸ್‌ಆರ್ ಪಕ್ಷ; ರಾಮುಲು 'ಹಮ್ಮರ್' ಹಮ್ಮು ಬಿಮ್ಮು

ಹಮ್ಮರ್ ಐಷಾರಾಮಿ ಇಂಟಿರಿಯರ್ ಲುಕ್

ಬಿಎಸ್‌ಆರ್ ಪಕ್ಷ; ರಾಮುಲು 'ಹಮ್ಮರ್' ಹಮ್ಮು ಬಿಮ್ಮು

ಕರ್ನಾಟಕದ ರಾಜಕೀಯದಲ್ಲಿ ನೂತನ ಬಿರುಗಾಳಿಯೆಬ್ಬಿಸಲಿದೆಯೇ ಬಿಎಸ್‌ಆರ್ ಕಾಂಗ್ರೆಸ್ ಪಕ್ಷ?

ಬಿಎಸ್‌ಆರ್ ಪಕ್ಷ; ರಾಮುಲು 'ಹಮ್ಮರ್' ಹಮ್ಮು ಬಿಮ್ಮು

ಶ್ರೀರಾಮುಲು ಬಿಎಸ್‌ಆರ್ ಪಕ್ಷಕ್ಕೆ 'ಹಮ್ಮರ್' ಬಲ

ಇವನ್ನೂ ಓದಿ: ಪ್ರಾಡೋ ಕಾರಲ್ಲಿ ಬಿಎಸ್‌ವೈ ರೋಡ್ ಶೋ

Most Read Articles

Kannada
English summary
Karnataka election gets closer. According to sources BSR Congress leader Sriramulu buys New Hummer Car for his party's election Campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more