ಮೇ ಅಂತ್ಯಕ್ಕೆ ಟಾಟಾ ಸಫಾರಿ ಸ್ಟ್ರೋಮ್ ಯುಗ ಆರಂಭ

ಬಹುನಿರೀಕ್ಷಿತ "ಟಾಟಾ ಸಫಾರಿ ಸ್ಟ್ರೋಮ್" ಸ್ಪೋರ್ಟ್ಸ್ ಯುಟಿಲಿಟಿ ವಾಹನ ಈ ತಿಂಗಳ ಅಂತ್ಯಕ್ಕೆ ರಸ್ತೆಗಿಳಿಯುವ ನಿರೀಕ್ಷೆಯಿದೆ. ತಿಂಗಳ ಅಂತ್ಯಕ್ಕೆ ಆಗಮಿಸುವ ಕುರಿತು ಕಂಪನಿಯ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ. ಮೂಲಗಳ ಪ್ರಕಾರ ಸ್ಟ್ರೋಮ್ ಆಗಮಿಸೋದು ನಿಚ್ಚಳವಾಗಿದೆ.

ಟಾಟಾ ಮೋಟರ್ಸ್ ಕಂಪನಿಯ ನೂತನ ಇನ್ನೋವೇಟಿವ್ ಉತ್ಪನ್ನಗಳು ಜಾಗತಿಕವಾಗಿ ಗಮನ ಸೆಳೆಯುತ್ತಿವೆ. ನೂತನ ಸಫಾರಿ ಸ್ಟ್ರೋಮ್ ಆಕರ್ಷಕ ಒವಿಆರ್ಎಂ, ಬಾಡಿ ಬಣ್ಣದ ಡೋರ್ ಹ್ಯಾಂಡಲ್, ಆಕರ್ಷಕ ಮಿಣುಕು ದೀಪ ಮತ್ತು ಎದ್ದು ಕಾಣುವ ಎಗ್ಸಾಟ್ ಪೈಪುಗಳಿಂದ ಅತ್ಯಾಕರ್ಷಕವಾಗಿ ಕಾಣುತ್ತಿವೆ.

ಹೊಸ ಏಳು ಸೀಟಿನ ಸಫಾರಿ ಸ್ಟ್ರೋಮ್ ಎಸ್‌ಯುವಿ ಇಂಟಿರಯರ್ ಕೂಡ ಲಗ್ಷುರಿಯಾಗಿದೆ. ಅತ್ಯುತ್ತಮ ಗುಣಮಟ್ಟದ ಪ್ಲಾಸ್ಟಿಕ್, ಶಕ್ತಿಶಾಲಿ ಏರ್ ಕಂಡಿಷನ್ ವ್ಯವಸ್ಥೆ, ಡ್ಯಾಷ್ ಬೋರ್ಡಿನಲ್ಲಿ ಬೃಹತ್ ಸ್ಥಳಾವಕಾಶ, ಚರ್ಮದ ಸೀಟುಗಳು, ಪವರ್ ವಿಂಡೋ, ಪವರ್ ಸ್ಟೀಯರಿಂಗ್, ಕ್ಲೈಮೇಟ್ ಕಂಟ್ರೋಲ್, ಎಲೆಕ್ಟ್ರಿಕ್ ಡೋರ್ ಸೈಡ್ ಮಿರರ್ ಮತ್ತು ಹಿಂಭಾಗದ ಡಿಫಾಗರ್ ಇತ್ಯಾದಿ ಫೀಚರುಗಳು ನೂತನ ಸಫಾರಿ ಸ್ಟ್ರೋಮ್‌ನಲ್ಲಿರಲಿವೆ.

ನೂತನ ಟಾಟಾ ಸಫಾರಿ ಸ್ಟ್ರೋಮ್ 2.2 ಲೀಟರಿನ ಡಿಕೊರ್ ಡೀಸೆಲ್ ಎಂಜಿನ್ ಹೊಂದಿರಲಿದೆ. ಇದರಲ್ಲಿ ಸುರಕ್ಷತೆಯ ಪ್ರಯಾಣಕ್ಕೆ ಸೂಕ್ತವಾಗಿ ಆರು ಏರ್ ಬ್ಯಾಗುಗಳು, ಬ್ರೇಕ್ ಅಸಿಸ್ಟ್, ಪಾರ್ಕಿಂಗ್ ಸೆನ್ಸಾರ್, ರಿಮೊಟ್ ಸೆಂಟ್ರಲ್ ಲಾಕಿಂಗ್ ಸಿಸ್ಟಮ್, ಫಾಗ್ ಲ್ಯಾಂಪ್, ಆಂಟಿ ಲಾಕ್ ಬ್ರೇಕ್ ಸಿಸ್ಟಮ್, ಇಎಸ್‌ಸಿ, ಇಬಿಡಿ ಮತ್ತು ಟ್ರಾಕ್ಷನ್ ಕಂಟ್ರೋಲ್ ಇತ್ಯಾದಿಗಳಿರಲಿವೆ.

Most Read Articles

Kannada
English summary
Tata Motors planning to unveil All New Tata Safari Strome in Indian Market. The Safari Storme is powered by a 2.2L 16-valve common rail (DiCOR) engine (140 PS power; 320 Nm torque) with a variable geometry turbo, mated with a 5-speed manual transmission. Electronic shift-on-the-fly (ESOF)etc..
Story first published: Tuesday, May 15, 2012, 11:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X