ಟೈಟಾನಿಕ್ ಹಡಗಿನಲ್ಲಿ ಮುಳುಗಿದ ರೆನೊ ನೆನಪು

ಟೈಟಾನಿಕ್ ಅಂದಾಗ ಸಾವಿರ ನೆನಪುಗಳ ಮೆರವಣಿಗೆ. ದೊಡ್ಡದಾದ ಹಡಗೊಂದು ಸಮುದ್ರವೊಂದರಲ್ಲಿ ಮುಳುಗುವ ದೃಷ್ಯ, ಮುಳುಗುವ ಮುನ್ನ ಬದುಕಲು ಪ್ರಯತ್ನಿಸುವ ಪ್ರಯಾಣಿಕರು, ಅಲ್ಲೂ ಕಾಡಿದ ಪ್ರೀತಿಪ್ರೇಮ ತ್ಯಾಗಗಳು ನೆನಪಾಗಬಹುದು. ಆ ಹಡಗಿನಲ್ಲಿದ್ದ ಕಾರೊಂದರ ಕಥೆ ಈ ಲೇಖನದ ವಸ್ತು. ಇದು ಕನ್ನಡ ಡ್ರೈವ್‌ಸ್ಪಾರ್ಕ್ ವಿಶೇಷ.

ಜೇಮ್ಸ್ ಕ್ಯಾಮರಾನ್ "ಟೈಟಾನಿಕ್" ಚಿತ್ರದಲ್ಲಿ ಕಟ್ಟಿಕೊಟ್ಟ ಸತ್ಯಘಟನೆಗಳನ್ನು ಮರೆಯುವ ಹಾಗಿಲ್ಲ. ಈ ಚಿತ್ರದಲ್ಲಿ ಲಿಯೊನಾರ್ಡೊ ಡಿಕಾಪ್ರಿಯೊ ಮತ್ತು ಕೇಟ್ ವಿನ್ಸ್ಲೆಟ್ ನಟಿಸಿದ್ದರು. 1997ರಲ್ಲಿ ತೆರೆಕಂಡಟೈಟಾನಿಕ್ ಸಿನಿಮಾದಲ್ಲಿ ಹಡಗಿನ ಸಾಗಾಟ ವಿಭಾಗದಲ್ಲಿದ್ದ ಕಾರೊಂದರಲ್ಲಿ ಜಾಕ್ ಎನ್ ರೋಸ್ ಪ್ರೇಮಲೋಕದಲ್ಲಿ ಮಗ್ನರಾಗಿದ್ದರು. ಅಂದಹಾಗೆ ಅದು ಟೈಟಾನಿಕ್ ಹಡಗಿನಲ್ಲಿ ಮುಳುಗಿದ್ದ ನಿಜವಾದ ಕಾರು ಎಂದರೆ ನಂಬ್ತಿರಾ?

ಉತ್ತರ ಅಂಟ್ಲಾಟಿಕ್ ಸಮುದ್ರದಲ್ಲಿ ಹಿಮಬಂಡೆಗೆ ಡಿಕ್ಕಿ ಹೊಡೆದು ಮುಳುಗಿದ ಟೈಟಾನಿಕ್ ಹಡಗಿನಲ್ಲಿ ಹಲವು ಶ್ರೀಮಂತರು ಪ್ರಯಾಣಿಸುತ್ತಿದ್ದರು. ಅದರಲ್ಲಿ ಒಬ್ಬನ ಹೆಸರು ವಿಲಿಯಂ ಕಾರ್ಟರ್. ಆತ ಪೆನ್ಸಿಲ್ವೇನಿಯಾ ದೇಶದಾತ. ಆತ ಯುರೋಪಿನಲ್ಲಿ ಖರೀದಿಸಿದ 1912ರ ರೆನೊ ಟೈಪ್ ಸಿಬಿ ಕೂಪ್ ಡೆ ವಿಲ್ಲೆ ಎಂಬ ಕಾರನ್ನು ಟೈಟಾನಿಕ್ ಹಡಗಿನಲ್ಲಿ ಸಾಗಿಸಲಾಗುತ್ತಿತ್ತು.

ಟೈಟಾನಿಕ್ ಹಡಗು ದುರಂತದಲ್ಲಿ ವಿಲಿಯಂ ಕಾರ್ಟರ್, ಆತನ ಪತ್ನಿ ಮತ್ತು ಮಕ್ಕಳು ಜೀವಂತವಾಗಿ ಪಾರಾಗಿದ್ದರು. ಆ ಹಡಗಿನಲ್ಲಿ 5 ಸಾವಿರ ಡಾಲರಿನ ಕೂಪ್ ದೆ ವಿಲ್ಲೆ ಕಾರಿತ್ತು ಎಂದಿ ಲಂಡನ್ ವಿಮಾ ಕಂಪನಿಗೆ ವಿಲಿಯಂ ಕಾರ್ಟರ್ ಕ್ಲೈಮ್ ಮಾಡಿದ್ದ.

1985ರಲ್ಲಿ ಟೈಟಾನಿಕ್ ಅವಶೇಷ ಪತ್ತೆಯಾದಾಗ ರೆನಾಲ್ಟ್ ಟೈಪ್ ಸಿಬಿ ಕೂಪ್ ಕೂಡ ಪತ್ತೆಯಾಗಿತ್ತು. ಸುಮಾರು 100 ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದ ಈ ಕಾರನ್ನು ಸಾಕಷ್ಟು ಪರಿಷ್ಕೃತಗೊಳಿಸಿ ಮೊದಲಿನ ರೂಪಕ್ಕೆ ತರಲಾಗಿತ್ತು.

ರೆನಾಲ್ಟ್ ಕಂಪನಿಯು ಈ ಕಾರನ್ನು ಮೊದಲಿನ ಬಣ್ಣ ಮತ್ತು ವಿನ್ಯಾಸಕ್ಕೆ ಪರಿವರ್ತಿಸಿತ್ತು. 2003ರಲ್ಲಿ ಟೈಟಾನಿಕ್ ನೆನಪಿನ ಈ ಕಾರು 2,69,500 ಡಾಲರಿಗೆ ಹರಾಜಿನಲ್ಲಿ ಬಿಕಾರಿಯಾಯಿತು. ಟೈಟಾನಿಕ್ ಮುಳುಗಿ ಶತಕ ಕಳೆಯಿತು ಎಂಬ ಸುದ್ದಿ ಓದಿದಾಗ ಇವೆಲ್ಲ ನೆನಪಾಯಿತು. (ಕನ್ನಡ ಡ್ರೈವ್‌ಸ್ಪಾರ್ಕ್)

Most Read Articles

Kannada
English summary
The Famous Car That Sunk Along With The Titanic. Titanic, which was on its debut voyage had many uber rich persons traveling in it. One such man was William Carter of Bryn Mawr, Pennsylvania who had carried along with him the 1912 Renault Type CB Coupe de Ville which he bought from Europe.
Story first published: Thursday, June 21, 2012, 10:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X