ಟಾಟಾ ನ್ಯಾನೊ ವರ್ಷದ ವಿದ್ಯಾರ್ಥಿ ಯಾರು?

By Praveen

ದೇಶದ ಸಮಸ್ತ ಕಾಲೇಜು ತರುಣ ತರುಣಿಯರಿಗಾಗಿ ವಿನೂತನ "ನ್ಯಾನೊ ಸ್ಟುಡೆಂಟ್ ಆಫ್ ದಿ ಇಯರ್" ಸ್ಪರ್ಧೆಯೊಂದನ್ನು ಟಾಟಾ ಮೋಟರ್ಸ್ ಆರಂಭಿಸಿದೆ. ಈ ಕಾಂಟೆಸ್ಟಿನಲ್ಲಿ ಗೆದ್ದ ವಿದ್ಯಾರ್ಥಿಗೆ 3 ಲಕ್ಷ ರುಪಾಯಿ ಸ್ಕಾಲರ್ ಷಿಪ್ ದೊರಕಲಿದೆ. ಮೊದಲ ರನ್ನರ್ ಅಪ್ ಗೆ ನ್ಯಾನೊ ಕಾರು ಮತ್ತು ಎರಡನೇ ರನ್ನರ್ ಅಪ್ ಗೆ ಮೆಕ್ ಬುಕ್ ಪ್ರೊ ಬಹುಮಾನವಾಗಿ ದೊರಕಲಿದೆ.

ಈ ಕಾಂಟೆಸ್ಟಿಗಾಗಿ ಕರಣ್ ಜೊಹಾರ್ ನಿರ್ದೇಶನದ ಬಾಲಿವುಡ್ ನ ಕಾಮಿಡಿ ಸಿನಿಮಾ "ಸ್ಟುಡೆಂಟ್ ಆಫ್ ದಿ ಇಯರ್" ಜೊತೆ ಟಾಟಾ ಮೋಟರ್ಸ್ ಮೈತ್ರಿ ಮಾಡಿಕೊಂಡಿದೆ. ಟಾಟಾ ನ್ಯಾನೊ ಮೂಲಕ ಈ ಚಲನಚಿತ್ರವನ್ನು ಪ್ರಚಾರ ಪಡಿಸುವ ತಂತ್ರ ಇದಾಗಿದೆ. ಜೊತೆಗೆ ಟಾಟಾ ಕಾರಿಗೂ ಪ್ರಚಾರ ದೊರಕಲಿದೆ.

ನಿಯಮಗಳೇನು?: ಈ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಹದಿನೆಂಟು ವರ್ಷ ವಯಸ್ಸಾಗಿರುವುದು ಕಡ್ಡಾಯ. ಭಾಗವಹಿಸಲು ಇಚ್ಚಿಸುವ ವಿದ್ಯಾರ್ಥಿಗಳು www.nanostudentoftheyear.com ಇದರಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದು.

ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಭಾಗವಹಿಸಲು ಕಡೆಯ ದಿನಾಂಕ ಸೆಪ್ಟೆಂಬರ್ 28. ವೆಬ್ ತಾಣದಲ್ಲಿ ದಾಖಲಾದ ವಿದ್ಯಾರ್ಥಿಗಳ ಅಕಾಡಮಿಕ್, ಕಲ್ಚರ್, ಸ್ಪೋರ್ಟ್ಸ್ ಮತ್ತು ಸೋಷಿಯಲ್ ಲೈಫ್ ಸಾಧನೆಗಳನ್ನು ಮಾನದಂಡವಾಗಿ ಪರಿಗಣಿಸಲಾಗುವುದು.

ಈ ನಾಲ್ಕು ಮಾನದಂಡಗಳ ಮೂಲಕ ಎಂಟು ವಿದ್ಯಾರ್ಥಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗುವುದು. ಈ ಎಂಟು ಜನರ ಹೆಸರನ್ನು ಟಾಟಾ ಮೋಟರ್ಸ್ ಅಕ್ಟೋಬರ್ ಎರಡರಂದು ತನ್ನ ವೆಬ್ ತಾಣದಲ್ಲಿ ಪ್ರಕಟಿಸಲಿದೆ.

ಅಂತಿಮ ಸುತ್ತಿಗೆ ಆಯ್ಕೆಯಾದ ಎಂಟು ವಿದ್ಯಾರ್ಥಿಗಳ ನಡುವೆ "ನ್ಯಾನೊ ಸ್ಟುಡೆಂಟ್ ಆಫ್ ಇಯರ್" ಪೈಪೋಟಿ ನಡೆಯಲಿದೆ. ಟಾಟಾ ನ್ಯಾನೊ ಅಭಿಮಾನಿಗಳು ಈ ವಿದ್ಯಾರ್ಥಿಗಳಿಗೆ ತನ್ನ ವೆಬ್ ತಾಣದಲ್ಲಿ ಓಟ್ ಮಾಡಬಹುದು. ಹೆಚ್ಚು ಮತ ಪಡೆದವರಿಗೆ ನ್ಯಾನೊ ವರ್ಷದ ವ್ಯಕ್ತಿ ಪ್ರಶಸ್ತಿ ದೊರಕುತ್ತದೆ.

ವಿದ್ಯಾರ್ಥಿಗಳೇ ನೀವು ರೆಡಿನಾ?

Most Read Articles

Kannada
English summary
Tata Motors has launched the ‘Nano Student of the Year' contest, for all college students in India, to mark its association with one of Bollywood's biggest releases this year, ‘Student of the Year', a romantic comedy, directed by Karan Johar. Tata Nano is the on-ground promotion partner for the movie.
Story first published: Monday, September 17, 2012, 10:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X