ವರ್ಷದ ಆರಂಭದಲ್ಲೇ ಕಾರು ಮಾರಾಟಕ್ಕೆ ಹೊಡೆತ

By Nagaraja

ಆರ್ಥಿಕ ಕುಸಿತ ಹಾಗೂ ಇಂಧನ ಬೆಲೆ ವರ್ಧಿಸಿರುತ್ತಿರುವ ಹಿನ್ನಲೆಯಲ್ಲಿ 2013 ವರ್ಷದ ಮೊದಲ ತಿಂಗಳಲ್ಲೇ ದೇಶದ ಕಾರು ಮಾರಾಟವು ಹಿನ್ನಡೆಯತ್ತ ಮುಖ ಮಾಡಿದೆ. ಹಾಗಿದ್ದರೂ ದೇಶದ ಅಗ್ರ ಕಾರು ಸಂಸ್ಥೆಗಳು ಉತ್ತಮ ಮಾರಾಟ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿರುವುದು ನೆಮ್ಮೆದಿಗೆ ಕಾರಣವಾಗಿದೆ.

ಕಾರು ಕಂಪನಿಗಳು ದರ ಏರಿಕೆಗೊಳಿಸಿರುವುದು ಹಾಗೂ ಬಡ್ಡಿದರ ಏರಿಕೆ ಕಂಡಿರುವುದು ಸಹ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಕಾರಣವಾಗಿದೆ. ಇದು ಗ್ರಾಹಕರ ಕಾರು ಖರೀದಿ ಭಾವನೆಗಳನ್ನು ಕುಂಠಿತಗೊಳಿಸಿತ್ತು.

ಟಾಟಾ ಮೋಟಾರ್ಸ್ ಶೇಕಡಾ 50ರಷ್ಟು ಕುಸಿತ ದಾಖಲಿಸಿದ್ದರೆ, ಟೊಯೊಟಾ, ಫೋರ್ಡ್, ಜನರಲ್ ಮೋಟಾರ್ಸ್‌ಗಳಂತಹ ಕಂಪನಿಗಳು ಸಹ ಹಿಂಬಡ್ತಿ ಪಡೆದಿವೆ. ಈ ನಡುವೆ ಮಾರುತಿ, ಹ್ಯುಂಡೈ ಹಾಗೂ ಮಹೀಂದ್ರ ಹಸಿರು ನಿಶಾನೆ ತೋರಿರುವುದು ಈ ಕಂಪನಿಗಳ ಮೇಲೆ ಗ್ರಾಹಕರ ನಂಬಿಕೆಗೆ ಸಾಕ್ಷಿಯಾಗಿದೆ.

ಜನವರಿ ತಿಂಗಳಲ್ಲಿ 1.03 ಲಕ್ಷ ಯುನಿಟ್ ಸೇಲ್ ಮಾಡುವ ಮೂಲಕ ಮಾರುತಿ ಶೇಕಡಾ 2ರಷ್ಟು ಪ್ರಗತಿ ಕಂಡಿದೆ. ಇದು ಕಳೆದ ವರ್ಷ 1.01 ಲಕ್ಷ ಯುನಿಟ್‌ಗಳಾಗಿದ್ವು. ಮಾರುತಿಯ ಎರ್ಟಿಗಾ ಎಂಪಿವಿ ಹಾಗೂ ಡಿಜೈರ್ ಎಂಟ್ರಿ ಲೆವೆಲ್ ಸೆಡಾನ್ ಕಾರುಗಳು ಉತ್ತಮ ಮಾರಾಟವನ್ನು ಕಾಯ್ದುಕೊಂಡಿರುವುದು ಮುನ್ನಡೆಗೆ ಕಾರಣವಾಗಿದೆ.

ಮಾರುತಿಯ ಪ್ರಬಲ ಪ್ರತಿಸ್ಪರ್ಧಿಯಾಗಿರುವ ಹ್ಯುಂಡೈ ಕೂಡಾ ಜನವರಿ ತಿಂಗಳಲ್ಲಿ 34,032 ಕಾರುಗಳನ್ನು ಮಾರಾಟ ಮಾಡುವ ಮೂಲಕ ಶೇಕಡಾ 1ರಷ್ಟು ಹೆಚ್ಚಳ ದಾಖಲಿಸಿಕೊಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 33,900 ಯುನಿಟ್ ಮಾರಾಟವಾಗಿದ್ದವು. ಕೊರಿಯಾದ ಈ ಕಾರು ಉತ್ಪಾದಕರಿಗೆ ಸಾಂಟ್ರೊ ಹಾಗೂ ಐ10 ಮಾದರಿಗಳು ನೆರವಿಗೆ ಬಂದಿದ್ದವು.

ಮತ್ತೊಂದೆಡೆ ದೇಶದ ಎಸ್‌ಯುವಿ ದೈತ್ಯ ಮಹೀಂದ್ರ ಶೇಕಡಾ 33ರಷ್ಟು ಭರ್ಜರಿ ಪ್ರಗತಿ ದಾಖಲಿಸಿದೆ. ಹಾಗೆಯೇ 2012 ಎಪ್ರಿಲ್‌ನಿಂದ ಡಿಸೆಂಬರ್ ಅವಧಿಯಲ್ಲಿ ಕಾರು ಮಾರಾಟವು ಸ್ಥಿರವಾಗಿದೆ. ಹಾಗಿದ್ದರೂ ಬಜೆಟ್ ಬಳಿಕ ಕಾರು ಮಾರಾಟ ಹೆಚ್ಚಳಗೊಳ್ಳುವ ಭರವಸೆಯನ್ನು ಕಂಪನಿಗಳು ಹೊಂದಿವೆ.

Most Read Articles

Kannada
English summary
Car sales began the new year on a poor note as economic slowdown and high fuel prices continued to batter demand in January. However, the top three makers Maruti, Hyundai and Mahindra managed to grow.
Story first published: Monday, February 4, 2013, 12:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X