ಸತತ 7ನೇ ತಿಂಗಳಲ್ಲೂ ಕಾರು ಮಾರುಕಟ್ಟೆ ಕುಸಿತ

By Nagaraja

ಸತತ ಏಳನೇ ತಿಂಗಳಲ್ಲೂ ದೇಶದ ಕಾರು ಮಾರುಕಟ್ಟೆ ಕುಸಿತ ಅನುಭವಿಸಿದ್ದು, ಮೇ ತಿಂಗಳಲ್ಲಿ ಶೇಕಡಾ 12.26ರಷ್ಟು ಹಿನ್ನಡೆ ಅನುಭವಿಸಿದೆ. ಈ ನಡುವೆ ಆಟೋಮೊಬೈಲ್ ಜಗತ್ತಿನಲ್ಲಿ ಉದ್ಯೋಗ ಕಡಿತ ಸೃಷ್ಟಿಯಾಗುವ ಬಗ್ಗೆ ಭಾರತ ವಾಹನ ತಯಾರಕರ ಒಕ್ಕೂಟ (ಸಿಯಾಮ್) ಆತಂಕ ವ್ಯಕ್ತಪಡಿಸಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ದೇಶದ ಕಾರು ಮಾರುಕಟ್ಟೆಯು 1,63,222 ಯುನಿಟ್‌ಗಳ ಮಾರಾಟವನ್ನು ಕಂಡಿತ್ತು. ಆದರೆ ಈ ಬಾರಿಯದು 1,43,216 ಯುನಿಟ್‌ಗಳಿಗೆ ಕುಸಿದಿರುವುದಾಗಿ ಸಿಯಾಮ್ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಯಾಮ್ ಮಹಾ ನಿರ್ದೇಶಕ ವಿಷ್ಣು ಮಾಥುರ್, ದೀರ್ಘ ಅವಧಿಯ ವರೆಗೆ ಸತತ ಕುಸಿತ ಮುಂದುವರಿದಿದೆ. ಈ 2008-09ರಲ್ಲೂ ಹಿನ್ನಡೆ ಸಂಭವಿಸಿದಾಗಲೂ ಇಷ್ಟೊಂದು ಕೆಟ್ಟದಾದ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ ಎಂದಿದ್ದಾರೆ. ಆರ್ಥಿಕ ಕುಸಿತ, ಬೆಲೆಯೇರಿಕೆ ಹಾಗೂ ಬಡ್ಡಿದರ ಏರಿಕೆ ಎಲ್ಲವೂ ಕಾರುಗಳ ಬೇಡಿಕೆ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದಿದ್ದಾರೆ.

ಈ ಅವಧಿಯಲ್ಲಿ ಆಟೋ ದಿಗ್ಗಜ ಮಾರುತಿ ಸುಜುಕಿ ಶೇಕಡಾ 8.25, ಹ್ಯುಂಡೈ ಶೇಕಡಾ 0.35 ಹಾಗೂ ಟಾಟಾ ಮೋಟಾರ್ಸ್ ಶೇಕಡಾ 48.60ರಷ್ಟು ಇಳಿಕೆ ಅನುಭವಿಸಿದೆ. ಹಾಗಿದ್ದರೂ ಅಮೇಜ್ ನೆರವಿನೊಂದಿಗೆ ಹೋಂಡಾ ಇಂಡಿಯಾ ಶೇಕಡಾ 9.31ರಷ್ಟು ಏರಿಕೆ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಇನ್ನು ದ್ವಿಚಕ್ರ ವಾಹನ ಸೆಗ್ಮೆಂಟ್ ಕೂಡಾ ಮೇ ತಿಂಗಳಲ್ಲಿ ಅಲ್ಪ (ಶೇ. 0.72) ಹಿನ್ನಡೆ ಅನುಭವಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 8,87,646 ಯುನಿಟ್ ಮಾರಾಟವಾಗಿದ್ದರೆ ಈ ಬಾರಿಯದು 8,81288 ಯುನಿಟ್‌ಗಳಿಗೆ ಇಳಿಕೆ ಕಂಡಿದೆ. ಈ ಪೈಕಿ ಹೀರೊ ಶೇಕಡಾ 2.11 ಹಾಗೂ ಹೋಂಡಾ ಶೇ, 2.79ರಷ್ಟು ಹಿಂಬಡ್ತಿ ಅನುಭವಿಸಿದ್ದರೆ ಬಜಾಜ್ ಶೇಕಡಾ 2.6ರಷ್ಟು ಏರಿಕೆ ದಾಖಲಿಸಿದೆ.

Most Read Articles

Kannada
English summary
Car sales fell an annual 12.3 percent in May, an industry body Siam said on Tuesday, dropping for the seventh straight month, as weak consumer sentiment in a slowing economy continued to weigh on demand.
Story first published: Tuesday, June 11, 2013, 15:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X