ನಿಸ್ಸಾನ್ ಸಣ್ಣ ಕಾರು ತಯಾರಿಗೆ ಹಿಂದೂಜಾ ಸಾಥ್

Defiance Technologies to build small car with Nissan
ನಿಸ್ಸಾನ್ ಸಣ್ಣ ಕಾರು ಅಭಿವೃದ್ಧಿಗೆ ದೇಶದ ಪ್ರಖ್ಯಾತ ಹಿಂದೂಜಾ ಗ್ರೂಪ್ ಕಂಪನಿಯ ಡಿಫೈಯನ್ಸ್ ಟೆಕ್ನಾಲಜೀಸ್ ನೆರವಿಗೆ ಬರಲಿದೆ ಎಂಬುದನ್ನು ಅಶೋಕ್ ಲೇಲ್ಯಾಂಡ್ ಮುಖ್ಯಸ್ಥರಾಗಿರುವ ಧೀರಜ್ ಹಿಂದೂಜಾ ಖಚಿತಪಡಿಸಿದ್ದಾರೆ.

ಅಶೋಕ್ ಲೇಲ್ಯಾಂಡ್ ತಾಯಿ ಸಂಸ್ಥೆ ಹಿಂದೂಜಾ ಗ್ರೂಪ್. ಟ್ರಕ್ ಹಾಗೂ ಬಸ್ ನಿರ್ಮಾಣದಲ್ಲಿ ನಿಸ್ಸಾನ್ ಜತೆ ಪಾಲುದಾರಿಗೆ ಹೊಂದಿದೆ. ಇದೀಗ ಸಣ್ಣ ಕಾರು ವಾಣಿಜ್ಯದಲ್ಲೂ ಪಾಲುದಾರಿಕೆ ಪಡೆಯಲಿದೆ ಎಂದು ಹಿಂದೂಜಾ ಖಚಿತಪಡಿಸಿದ್ದಾರೆ.

ಸಂಪೂರ್ಣವಾಗಿಯೂ ವಾಣಿಜ್ಯ ಹಾಗೂ ವಾಣಿಜ್ಯ ಪ್ರಯಾಣಿಕ ವಾಹನಗಳಲ್ಲಿ ಗಮನ ಕೇಂದ್ರಿತವಾಗಿರುವ ಅಶೋಕ್ ಲೇಲ್ಯಾಂಡ್ ಕಳೆದ ದಿನವಷ್ಟೇ ಸ್ಟೈಲ್ ಎಂಪಿವಿ ಕಾರನ್ನು ಅನಾವರಣಗೊಳಿಸಿತ್ತು. ಹಾಗಿದ್ದರೂ ಘನ ವಾಹನ ವಾಣಿಜ್ಯ ಸೆಗ್ಮೆಂಟ್‌ನತ್ತವೂ ಆಕರ್ಷಿತವಾಗಿರುವ ಕಂಪನಿಯು ಜಗತ್ತಿನ ಟಾಪ್ ಫೈವ್ ಬಸ್ಸು ಹಾಗೂ ಟಾಪ್ 10 ಟ್ರಕ್ ತಯಾರಕ ಪಟ್ಟಿಯೊಳಗೆ ಸೇರ್ಪಡೆಯಾಗುವ ಗುರಿ ಹೊಂದಿದೆ.

ಈ ಬಗ್ಗೆ ಮಾತನಾಡಿರುವ ಹಿಂದೂಜಾ, ಹಗುರ ವಾಣಿಜ್ಯ ವಾಹನ (ಎಲ್‌ಸಿವಿ) ಸೇರಿದಂತೆ ವಾಣಿಜ್ಯ ವಾಹನದತ್ತ ಗಮನ ಕೇಂದ್ರಿತರಾಗಿದ್ದು, ಡಿಫೈಯನ್ಸ್ ತಂತ್ರಜ್ಞಾನವು ನಿಸ್ಸಾನ್‌ ಸಣ್ಣ ಕಾರು ಉತ್ಪಾದಿಸಲು ನೆರವು ಮಾಡಲಿದೆ ಎಂದಿದ್ದಾರೆ.

Most Read Articles

Kannada
English summary
Hinduja group company Defiance Technologies is "working with Nissan to help develop a small car", said Dheeraj Hinduja, chairman, Ashok Leyland
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X