ಇಂಗ್ಲೆಂಡ್ vs ಆಸ್ಟ್ರೇಲಿಯಾ; ಗೆಲುವು ಯಾರಿಗೆ?

By Nagaraja

ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ರೋಚಕ ಆಶ್ಯಸ್ ಕ್ರಿಕೆಟ್ ಕದನ ನಡೆಯುತ್ತಿರುವಂತೆಯೇ ಇನ್ನೊಂದೆಡೆ ಜಾಗ್ವಾರ್ ಐಷಾರಾಮಿ ಕಾರಿನಲ್ಲಿ ಕ್ರಿಕೆಟಿಗರ ಡ್ರೈವಿಂಗ್ ಪರೀಕ್ಷೆ ನಡೆದಿದೆ.

ಹೌದು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದ ತಲಾ ಮೂವರು ಕ್ರಿಕೆಟಿಗರು ಲಗ್ಷುರಿ ಜಾಗ್ವಾರ್ ಎಕ್ಸ್‌ಎಫ್‌ಆರ್-ಎಸ್ ಸ್ಪೋರ್ಟ್ಸ್ ಕಾರಿನ ಪರೀಕ್ಷೆ ನಡೆಸಿದ್ದಾರೆ. ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡ್ರೆಸನ್, ಕಲಾತ್ಮಕ ದಾಂಡಿಗ ಜಾನಥನ್ ಟ್ರಾಟ್ ಹಾಗೂ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಇಯಾನ್ ಬೆಲ್ ಕ್ರಿಕೆಟ್ ಪಿಚ್‌ನಿಂದ ಸ್ವಲ್ಪ ಹೊತ್ತು ದೂರವುಳಿದು ಜಾಗ್ವಾರ್ ಜತೆ ಜಾಲಿ ರೈಡ್ ಹೊಡೆದಿದ್ದಾರೆ. ಇದೇ ಸಂದರ್ಭದಲ್ಲಿ ಆಸೀಸ್‌ನ ಮಾಜಿ ಕ್ರಿಕೆಟಿಗ ಮಾರ್ಟಿನ್, ವೇಗದ ಬೌಲರ್‌ಗಳಾದ ಶಾನ್ ಟೇಟ್ ಹಾಗೂ ಡಿರ್ಕ್ ನ್ಯಾನೆಸ್ ಕೂಡಾ ಉಪಸ್ಥಿತರಿದ್ದರು.


5.0 ಲೀಟರ್ ವಿ8 ಸೂಪರ್ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಜಾಗ್ವಾರ್ 550 ಪಿಎಸ್ ಪವರ್ ಉತ್ಪಾದಿಸುವ ಕ್ಷಮತೆಯನ್ನು ಹೊಂದಿದೆ. ಇದು ಗಂಟೆಗೆ ಗರಿಷ್ಠ 186 ಮೈಲ್ ವೇಗದಲ್ಲಿ ಚಲಿಸಲಿದೆ. ಹಾಗೆಯೇ ಕೇವಲ 4.4 ಸೆಕೆಂಡುಗಳಲ್ಲಿ 0-60 ಮೈಲ್ ವೇಗವರ್ಧಿಸಲಿದೆ.

ಇಂಗ್ಲೆಂಡ್ ಹಾಗೂ ಆಸೀಸ್ ಕ್ರಿಕೆಟಿಗರ ನಡುವಣ ಈ ಜಾಗ್ವಾರ್ ಕಾರು ರೇಸಿಂಗ್ ಯೂಟ್ಯೂಬ್ ಸಂಚಲನ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಅಂತಿಮದಲ್ಲಿ ಆಸೀಸ್ ಕ್ರಿಕೆಟಿಗರು ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿದೆ ನೋಡಿ ಆಕರ್ಷಕ ವೀಡಿಯೋ...
<center><iframe width="600" height="450" src="//www.youtube.com/embed/q4uRPmkio9U" frameborder="0" allowfullscreen></iframe></center>

Most Read Articles

Kannada
English summary
James Anderson, Jonathan Trott and Ian Bell took some time away from the cricket pitch to test drive the new Jaguar XFR-S at Jaguars proving ground in Gaydon. The England cricket trio were taking on three Australian counterparts in a driving challenge.
Story first published: Wednesday, August 7, 2013, 13:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X