ಸೆಡಾನ್ ಕಾರುಗಳಿಗೆ ತೆರಿಗೆ ವಿನಾಯಿತಿ ಸಾಧ್ಯತೆ

ಇತ್ತೀಚೆಗಷ್ಟೇ ವಿತ್ತ ಸಚಿವ ಪಿ. ಚಿದಂಬರಂ ಸಂಸತ್ತಿನಲ್ಲಿ ಮಂಡಿಸಿದ 2013-14ನೇ ಸಾಲಿನ ಕೇಂದ್ರ ಬಜೆಟ್‌‌ ಆಟೋ ಮೊಬೈಲ್ ಜಗತ್ತಿನ ಮೇಲೆ ಭಾರಿ ಪ್ರಹಾರವನ್ನೇ ನಡೆಸಿತ್ತು. ಪ್ರಸ್ತುತ ಬಜೆಟ್‌ನಲ್ಲಿ 4 ಮೀಟರ್ ಉದ್ದದ ಮಿತಿ ದಾಟುವ ಎಸ್‌ಯುವಿ ಕಾರುಗಳಿಗೆ ಶೇಕಡಾ 27ರಿಂದ 30ರ ತನಕ ತೆರೆಗೆ ವಿಧಿಸಲಾಗಿತ್ತು.

1500ಸಿಸಿ ಎಂಜಿನ್ ಹಾಗೂ 170ಎಂಎಂ ಗ್ರೌಂಡ್ ಕ್ಲೀಯರನ್ಸ್ ದಾಟುವ ಎಸ್‌ಯುವಿ ಕಾರುಗಳಿಗೂ ಈ ಅಬಕಾರಿ ಸುಂಕ ಅನ್ವಯವಾಗಿತ್ತು. ಆದರೆ ಈ ಹೊಸ ನೀತಿಯಿಂದಾಗಿ ದೊಡ್ಡ ಸೆಡಾನ್ ಕಾರುಗಳು ಸಮಸ್ಯೆ ಎದುರಿಸುವಂತಾಗಿತ್ತು.

ಬಜೆಟ್ ಪ್ರಕಾರ ದೊಡ್ಡದಾದ ಸೆಡಾನ್ ಕಾರುಗಳಿಗೂ ತೆರಿಗೆ ಅನ್ವಯವಾಗಿತ್ತು. ಆದರೆ ಇದೀಗ ಈ ಬಗ್ಗೆ ಸ್ಪಷ್ಟೀಕರಣ ನೀಡಲು ಮುಂದಾಗಿರುವ ಕೇಂದ್ರ ಸರಕಾರ, ಸೆಡಾನ್ ಕಾರುಗಳ ಮೇಲಿನ ಅಬಕಾರಿ ಸುಂಕ ಹಿಂಪಡೆಯುವ ಸಾಧ್ಯತೆಯಿದೆ.

ಉದ್ದವಾದ ಸೆಡಾನ್ ಕಾರುಗಳು ಸರಕಾರ ಮಂಡಿಸಿರುವ ಎಸ್‌ಯುವಿ ವ್ಯಾಖ್ಯಾನದಲ್ಲಿ ಒಳಪಡುವುದಾದರೂ ಈ ಹಿಂದಿನ ಶೇಕಡಾ 27ರಷ್ಟು ತೆರಿಗೆ ಮುಂದುವರಿಸುವ ಸಾಧ್ಯತೆಯಿದೆ. ಇದರಿಂದಾಗಿ ಮಾರುತಿ ಎಸ್‌ಎಕ್ಸ್4, ಟೊಯೊಟಾ ಅಲ್ಟೀಸ್, ಹೋಂಡಾ ಸಿವಿಲ್‌ಗಳಂತಹ ಕಾರುಗಳಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಲಿದೆ.

ಒಟ್ಟಿನಲ್ಲಿ ಮಾರುಕಟ್ಟೆ ಹಿನ್ನಡೆ ಅನುಭವಿಸಿರುವ ಈ ಸಂದರ್ಭದಲ್ಲಿ ಹಾಗೂ ಸೆಡಾನ್ ಕಾರುಗಳಿಗೆ ಬೇಡಿಕೆ ಕುಸಿದಿರುವ ನಡುವೆ ಸರಕಾರ ವಿನಾಯಿತಿ ನೀಡಿರುವುದು ಎಷ್ಟರ ಮಟ್ಟಿಗೆ ಉತ್ತೇಜನ ನೀಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Most Read Articles

Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X