5 ವರ್ಷದ ಬಳಿಕ ರೇಸಿಂಗ್ ಜಗತ್ತಿಗೆ ಮರಳಿದ ಹೋಂಡಾ

By Nagaraja

ದೀರ್ಘ ಐದು ವರ್ಷಗಳ ಬಳಿಕ ಫಾರ್ಮುಲಾ ಒನ್ ರೇಸಿಂಗ್ ಜಗತ್ತಿಗೆ ಹೋಂಡಾ ರಿ ಎಂಟ್ರಿ ಕೊಡುತ್ತಿದೆ. ಪ್ರತಿಷ್ಠಿತ ಎಫ್ ತಂಡವಾದ ಮೆಕ್‌ಲಾರೆನ್‌ಗೆ ಹೋಂಡಾ ಎಂಜಿನ್ ಪೂರೈಕೆ ಮಾಡಲಿದ್ದು, ಗರಿಷ್ಠ ನಿರ್ವಹಣೆ ನೀಡುವ ಪ್ರಯತ್ನ ಮಾಡಲಿದೆ.

ಹೋಂಡಾ 1.6 ಲೀಟರ್ ಟರ್ಬೊಚಾರ್ಜ್ಡ್ ಎಂಜಿನ್ ಕಡಿಮೆ ಹೊಗೆ ಹೊರಸೂಸಲಿದ್ದು, ಗರಿಷ್ಠ ಇಂಧನ ದಕ್ಷತೆ ಒದಗಿಸಲಿದೆ. ಇದು 2014ನೇ ಆವೃತ್ತಿಯಿಂದ ರೇಸಿಂಗ್ ಜಗತ್ತಿಗೆ ಪ್ರವೇಶಿಸುವ ಸಾಧ್ಯತೆಗಳು ನಿಚ್ಚಳವಾಗಿದೆ.

ಜಗತ್ತಿನ ಪ್ರತಿಷ್ಠಿತ ಆಟೋ ರೇಸಿಂಗ್ ಆದ ಎಫ್1, ತಂತ್ರಜ್ಞಾನ ಅಭಿವೃದ್ಧಿಗೆ ಉತ್ತಮ ವೇದಿಕೆಯಾಗಲಿದೆ. ಈ ಹಿಂದೆ ಮೆಕ್‌ಲಾರೆನ್ ಹಾಗೂ ಹೋಂಡಾ ಜತೆಯಾಗಿ 1988ರಿಂದ 91 ಅವಧಿಯಲ್ಲಿ ನಿರಂತರವಾಗಿ ಪ್ರಶಸ್ತಿ ಬಾಚಿಕೊಂಡಿತ್ತು.

ಒಟ್ಟಿನಲ್ಲಿ ರೇಸಿಂಗ್ ಜಗತ್ತಿನಲ್ಲಿ ಮೆಕ್‌ಲ್ಯಾರೆನ್ ಹಾಗೂ ಹೋಂಡಾ ಗತಕಾಲದ ವೈಭವವನ್ನು ಮರುಕಳಿಸುವತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ.

Most Read Articles

Kannada
English summary
Honda has confirmed it will return to Formula 1 in 2015 as engine supplier to McLaren. Honda had withdrawn from the sport after the 2008 season, due to a string of poor performances and the economic crisis the world was in then.
Story first published: Monday, May 20, 2013, 11:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X