ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಚುನಾವಣಾ ತಂತ್ರ?

ಗುಜರಾತ್ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವಿನ ಸಾಧನೆ ಮಾಡಿರುವ ಮುಖ್ಯಮಂತ್ರಿ ನರೇಂದ್ರ ಮೋದಿ ಇದೀಗ ಕೇಂದ್ರ ರಾಜಕೀಯದತ್ತ ದಾಪುಗಾಲನ್ನಿಡಲು ಸಜ್ಜಾಗುತ್ತಿದ್ದಾರೆ.

ಪಕ್ಷದಿಂದಲೇ ವಿರೋಧಗಳಿರುವುದರಿಂದ ಮೋದಿ ಎನ್‌ಡಿಎ ಪ್ರಧಾನಿ ಅಭ್ಯರ್ಥಿ ಎನಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಹಾಗಿದ್ದರೂ ಗುಜರಾತ್ ಅಭಿವೃದ್ದಿ ಮಂತ್ರ ಬಿಜೆಪಿಯ ಈ ಹಿರಿಯ ಮುಖಂಡರಿಗೆ ನೆರವಾಗುವ ಸಾಧ್ಯತೆಯಿದೆ.

ಈಗಾಗಲೇ 2013 ಲೋಕಸಭಾ ಚುನಾವಣೆಯನ್ನು ನರೇಂದ್ರ ಮೋದಿ ವರ್ಸಸ್ ರಾಹುಲ್ ಗಾಂಧಿ ಎಂದೇ ಬಿಂಬಿಸಲಾಗುತ್ತಿದೆ. ಮಾಧ್ಯಮಗಳಿಂದಲೂ ಇದಕ್ಕೆ ಪುಕ್ಕಟ್ಟೆ ಪ್ರಚಾರ ಕೂಡಾ ಸಿಗುತ್ತಿದೆ.

ಅಂದ ಹಾಗೆ ಮೋದಿ ಪ್ರಧಾನಿ ಅಭ್ಯರ್ಥಿ ಆದ್ದಲ್ಲಿ ಯಾವ ಕಾರಿನಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ ಎಂಬುದೇ ನಮ್ಮ ಪ್ರಶ್ನೆ? ನಾವೀಗಲೇ ನೋಡಿರುವುವಂತೆಯೇ ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರ ಬಂದಿರುವಂತೆಯೇ ನೂತನ ಕೆಜೆಪಿ ಪಕ್ಷ ಸ್ಥಾಪಿಸಿರುವ ಮಾಜಿ ಸಿಎ ಬಿ. ಎಸ್. ಯಡಿಯೂರಪ್ಪ ತಮ್ಮ ರಾಜ್ಯ ಪ್ರವಾಸಕ್ಕಾಗಿ ಅತಿ ನೂತನ ಟೊಯಾಟಾದ ಲ್ಯಾಂಡ್ ಕ್ರೂಸರ್ ಪ್ರಾಡೊ ಪ್ರೀಮಿಯಂ ಕಾರು ಖರೀದಿಸಿದ್ದರು. (ಲಿಂಕ್ ಇಲ್ಲಿದೆ ನೋಡಿ)

ಇನ್ನು ಯಡಿಯೂರಪ್ಪ ತರಹನೇ ಬಿಜೆಪಿಯೊಂದಿಗೆ ಮುನಿಸುಕೊಂಡ ಬಳಿಕ ಪಕ್ಷದಿಂದ ಹೊರಬಂದು ನೂತನ ಬಿಎಸ್‌ಆರ್ ಪ್ರಾದೇಶಿಕ ಪಕ್ಷ ಕಟ್ಟಿದ್ದ ಬಳ್ಳಾರಿ ಜನಾರ್ದನ ರೆಡ್ಡಿ ಆಪ್ತ ಮಿತ್ರ ಶ್ರೀರಾಮುಲು ಕೂಡಾ ದುಬಾರಿ ಹಮ್ಮರ್ ಕಾರಿನಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದರು. (ಲಿಂಕ್ ಇಲ್ಲಿದೆ)

ಇನ್ನು ಕೇಂದ್ರದತ್ತ ದೃಷ್ಟಿ ಹಾಯಿಸಿದ್ದರೆ ಮೋದಿ ಚುನಾವಣಾ ತಂತ್ರ ಹೇಗಿರಲಿದೆ ಎಂಬುದು ಕುತೂಹಲ ಕೆರಳಿಸಿದೆ. ಬಳ್ಳ ಮೂಲಗಳ ಪ್ರಕಾರ ಮೋದಿ ಅಧಿಕೃತ ವಾಹನ ಮಹೀಂದ್ರ ಸ್ಕಾರ್ಪಿಯೊ. ಹಾಗಾಗಿ ಇದೇ ಕಾರಿನಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳುವ ಸಾಧ್ಯತೆ ಇದೆ. ಹಾಗಿದ್ದರೆ ಮೋದಿ ಸ್ಕಾರ್ಪಿಯೊ ಮ್ಯಾಜಿಕ್ ಮಾಡಲಿದೆಯೇ ಎಂಬುದನ್ನು ನೋಡೋಣ...

Mahindra Scorpio

ಮಹೀಂದ್ರ ಸ್ಕಾರ್ಪಿಯೊ ದೇಶದಲ್ಲಿ ಅತಿ ಹೆಚ್ಚು ಪ್ರಚಾರ ಗಿಟ್ಟಿಸಿಕೊಂಡಿರುವ ಎಸ್‌ಯುವಿ ಕಾರಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಮಹೀಂದ್ರದಿಂದ ನಿರ್ಮಾಣವಾಗಿರುವ ಮೊದಲ ಎಸ್‌ಯುವಿ ವಾಹನವಾಗಿದೆ.

Mahindra Scorpio

ಭಾರತ ಸೇರಿದಂತೆ ಅಂತರಾಷ್ಟ್ರೀಯ ಮಾರಾಟದಲ್ಲೂ ಸ್ಕಾರ್ಪಿಯೊ ಯಶ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ಇಂಟೆಗ್ರೇಟಡ್ ಡಿಸೈನ್ ಹಾಗೂ ಉತ್ಪಾದಕ ತಂಡವು (IDAM) ಸ್ಕಾರ್ಪಿಯೊ ವಿನ್ಯಾಸ ತಯಾರಿಸಿವೆ.

Mahindra Scorpio

ವರ್ಷದ ಕಾರು, ವರ್ಷದ ಎಸ್‌ಯುವಿ, ವರ್ಷದ ಅತ್ಯುತ್ತಮ ಕಾರು ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಸ್ಕಾರ್ಪಿಯೊ ಬಗಲಿಗೇರಿಸಿಕೊಂಡಿದೆ.

Mahindra Scorpio

ದೇಶದ ಎಸ್‌ಯುವಿ ಉತ್ಸಾಹಿಗಳಿಗೆ ಮಹೀಂದ್ರದ ಸ್ಕಾರ್ಪಿಯೊ ಉತ್ತಮ ಆಫ್ ರೋಡಿಂಗ್ ಮನರಂಜನೆಯನ್ನು ನೀಡುತ್ತಿದೆ.

Mahindra Scorpio

2002ನೇ ಇಸವಿಯಲ್ಲಿ ಮಹೀಂದ್ರ ಸ್ಕಾರ್ಪಿಯೊ ಮಾರುಕಟ್ಟೆಗೆ ಆಗಮಿಸಿತ್ತು. ಹಾಗೆಯೇ 2006ನೇ ಸಾಲಿನಲ್ಲಿ ಸ್ಕಾರ್ಪಿಯೊ ಅಪ್‌ಗ್ರೇಡ್ ವರ್ಷನ್ ಆಲ್ ನ್ಯೂ ಸ್ಕಾರ್ಪಿಯೊ ಬಿಡುಗೊಡೆಗೊಳಿಸಲಾಗಿತ್ತು.

Mahindra Scorpio

ಹಾಗೆಯೇ 2007ರಲ್ಲಿ ಸ್ಕಾರ್ಪಿಯೊ ಪಿಕ್ ಅಪ್ ವರ್ಷನ್ ಹಾಗೂ 2008ರಲ್ಲಿ ಸ್ಕಾರ್ಪಿಯೊ 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಗೇರ್ ವರ್ಷನ್ ರಸ್ತೆಗಿಳಿದಿದ್ದವು. 2009ರಲ್ಲಿ ಡ್ಯುಯಲ್ ಏರ್‌ಬ್ಯಾಗ್ ಎಬಿಎಸ್ ತಂತ್ರಜ್ಞಾನವು ಆಳವಡಿಸಲಾಗಿತ್ತು.

Mahindra Scorpio

ಮಹೀಂದ್ರದ ಎಲ್ಲ ಸ್ಕಾರ್ಪಿಯೊ ವೆರಿಯಂಟ್‌ಗಳು ಟು ವೀಲ್ ಡ್ರೈವ್ ಆಯ್ಕೆಯಲ್ಲಿ ಲಭ್ಯವಿದೆ. ಹಾಗಿದ್ದರೂ ವಿಎಲ್‌ಎಕ್ಸ್ ಹಾಗೂ ವಿಎಲ್‌ಎಕ್ಸ್ ಆಟೋಮ್ಯಾಟಿಕ್ ವೆರಿಯಂಟ್ 4 ವೀಲ್ ಡ್ರೈವ್‌ನಲ್ಲಿ ಲಭ್ಯವಿದೆ. 2012ರಲ್ಲಿ 4X4 ವರ್ಷನ್ ಸ್ಕಾರ್ಪಿಯೊ ಎಲ್‌ಎಕ್ಸ್ ವೆರಿಯಂಟ್ ಆಗಮನವಾಗಿತ್ತು.

Mahindra Scorpio

ಮಹೀಂದ್ರ ಸ್ಕಾರ್ಪಿಯೊ 2.2 ಲೀಟರ್, 4 ಸಿಲಿಂಡರ್ mHawk ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದೆ. ಇದು 120 ಬಿಎಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರ ಯಶಸ್ಸಿನ ಬಳಿಕ 2.6 ಎಲ್ CRDe ಎಂಜಿನ್ ಆಯ್ಕೆ ಕೂಡಾ ಆಳವಡಿಸಲಾಗಿತ್ತು.

Mahindra Scorpio

ಇಂಟಿಯರ್ ಸೇರಿದಂತೆ ಎಕ್ಸ್‌ಟೀರಿಯರ್ ವಿನ್ಯಾಸ ಕೂಡಾ ಆಕರ್ಷಕವಾಗಿದೆ. ಈ 5 ಸೀಟಿನ ಕಾರು ಉತ್ತಮ ಲಗ್ಗೇಜ್ ಸ್ಪೇಸ್ ಹೊಂದಿದ್ದು ದೂರ ಪ್ರಯಾಣಕ್ಕೂ ಯೋಗ್ಯವಾಗಿದೆ. ಪ್ರಮುಖವಾಗಿಯೂ ದೇಶದ ಮಧ್ಯಮ ಕುಟುಂಬವೂ ಇಂದಿಗೂ ಸ್ಕಾರ್ಪಿಯೊವನ್ನು ಹೆಚ್ಚು ಆಶ್ರಯಿಸಿಕೊಂಡಿದೆ.

Mahindra Scorpio

ಒಟ್ಟಿನಲ್ಲಿ ನರೇಂದ್ರ ಮೋದಿ ಎನ್‌ಡಿಎ ಪ್ರಧಾನಿ ಅಭ್ಯರ್ಥಿಯಾದ್ದಲ್ಲಿ ಸ್ಕಾರ್ಪಿಯೊದಲ್ಲೇ ಮುಂದಿನ ಲೋಕಸಭಾ ಚುನಾವಣಾ ಪ್ರಚಾರ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಾಗಿದೆ.

Most Read Articles

Kannada
English summary
Mahindra Scorpio is the best selling entry level SUV in India. Have a look at this interesting story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X