ಬೆಂಗ್ಳೂರಿಂದ ಪಯಣ ಬೆಳೆಸಿದ 7 ಸ್ಟಾರ್ ಸೂಪರ್ ಲಗ್ಷುರಿ ಬಸ್

ನಮ್ಮ ಡ್ರೈವ್ ಸ್ಪಾರ್ಕ್ ಓದುಗರು ಪ್ರತಿ ಬಾರಿಯೂ ಬಸ್ಸು ಸಂಬಂಧಿ ಸುದ್ದಿಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಾರೆ. ಹಾಗಿರುವಾಗ ಸ್ವೀಡನ್‌ನ ಸೂಪರ್ ಬಸ್ ತಯಾರಕರಾದ ಸ್ಕಾನಿಯಾ ಸುದ್ದಿಯನ್ನು ಹೇಗೆ ತಪ್ಪಿಸಿಕೊಳ್ಳಲು ಸಾಧ್ಯ?

ಸ್ಕಾನಿಯಾ ಸೂಪರ್ ಲಗ್ಷುರಿ ಬಸ್ಸುಗಳು ಸದ್ಯದಲ್ಲೇ ಭಾರತ ಮಾರುಕಟ್ಟೆ ಪ್ರವೇಶಿಸಲಿದೆ ಎಂಬುದನ್ನು ಈ ಹಿಂದೆಯೇ ಪ್ರಕಟಿಸಲಾಗಿತ್ತು. ಇದರ ಬೆನ್ನಲ್ಲೇ ನಮ್ಮ ಬೆಂಗಳೂರಿನಿಂದ ಸ್ಕಾನಿಯಾ ಸೆವೆನ್ ಸ್ಟಾರ್ ಸೂಪರ್ ಲಗ್ಷುರಿ ಪ್ರಯಾಣಿಕ ವಾಹನವನ್ನು ಬಿಡುಗಡೆಗೊಳಿಸಲಾಗಿದೆ.

ಅಂದ ಹಾಗೆ ಸ್ವೀಡನ್‌ನ ಅತಿದೊಡ್ಡ ವಾಣಿಜ್ಯ ವಾಹನ ಉತ್ಪಾದಕ ಸಂಸ್ಥೆಯಾಗಿರುವ ಸ್ಕಾನಿಯಾದ ಒಳಮೈ ಭಾಗಗಳನ್ನು ಭಾರತದ ಪ್ರಖ್ಯಾತ ವಿನ್ಯಾಸ ಸಂಸ್ಥೆಯಾಗಿರುವ ದಿಲೀಪ್ ಛಾಬ್ರಿಯಾ ನೇತೃತ್ವದ ಡಿಸಿ ಡಿಸೈನ್ ರೂಪಿಸಿದೆ. ಅಂತೆಯೇ ಇದರ ಮೊದಲ ವಿತರಣೆಯನ್ನು ಸೂರತ್ ತಲಹದಿಯ ಸಿದ್ಧಿ ವಿನಾಯಕ್ ಲಾಜಿಸ್ಟಿಕ್ ಲಿಮಿಟೆಡ್ (ಎಸ್‌ವಿಎಲ್‌ಎಲ್) ವಹಿಸಿಕೊಂಡಿದೆ.

ಬೆಂಗಳೂರಿನಲ್ಲಿ ಘಟಕ

ಬೆಂಗಳೂರಿನಲ್ಲಿ ಘಟಕ

ನಿಮ್ಮ ಮಾಹಿತಿಗಾಗಿ ಬೆಂಗಳೂರಿನ ಹೊರವಲಯದಲ್ಲಿ ಸ್ಕಾನಿಯಾ ಘಟಕ ಸ್ಥಿತಗೊಂಡಿದೆ. ಪ್ರಸ್ತುತ ಇಂಟರ್ ಸಿಟಿ ಕೋಚ್ ರೇಂಜಿನ ಬಸ್ಸನ್ನು ಕಳೆದ ಫೆಬ್ರವರಿ ತಿಂಗಳಲ್ಲಿ ಅನಾವರಣಗೊಳಿಸಲಾಗಿತ್ತು.

7 ಸ್ಟಾರ್

7 ಸ್ಟಾರ್

ನೂತನ 7 ಸ್ಟಾರ್ ಸ್ಕಾನಿಯಾ ಸೂಪರ್ ಲಗ್ಷುರಿ ಇಂಟರ್‌ಸಿಟಿ ಬಸ್ಸಿನಲ್ಲಿ, ಸ್ಪಾ, ಶೌಚಾಲಯ, ದಣಿವಾರಿಕೆ ಬಾರ್, ಊಟದ ವ್ಯವಸ್ಥೆ, ವೈಯಕ್ತಿಕ ಎಲ್‌ಸಿಡಿ ಸ್ಕ್ರೀನ್, ಹೆಡ್‌ಫೋನ್ ಜತೆಗೆ ಯುಎಸ್‌ಬಿ ಸೇವೆ ಲಭ್ಯವಿರಲಿದೆ.

ಬೆಂಗ್ಳೂರಿಂದ ಪಯಣ ಬೆಳೆಸಿದ 7 ಸ್ಟಾರ್ ಸೂಪರ್ ಲಗ್ಷುರಿ ಬಸ್

ಇನ್ನು ದರದ ಬಗ್ಗೆ ಮಾತನಾಡುವುದಾದ್ದಲ್ಲಿ ನಿಮಗೆ ಎಸಿ ರೈಲಿನಲ್ಲಿ ಹೋಗುವಷ್ಟು ವೆಚ್ಚ ಮಾತ್ರ ಸ್ಕಾನಿಯಾ ಐಷಾರಾಮಿ ಪಯಣಕ್ಕಾಗಿ ತಗುಲಲಿದೆ.

120 ನೂತನ ಬಸ್ಸು

120 ನೂತನ ಬಸ್ಸು

ಸ್ಕಾನಿಯಾ ಎಸ್‌ವಿಎಲ್‌ಎಲ್ ಸೇವೆಯು ಅಕ್ಟೋಬರ್ ತಿಂಗಳಲ್ಲಿ ಮುಂಬೈನಿಂದ ಸೂರತ್‌ಗೆ ಪಯಣ ಬೆಳೆಸಲಿದೆ. ಬಳಿಕ 120 ನೂತನ ಬಸ್ಸುಗಳು ಮುಂಬೈ-ಬೆಂಗಳೂರು, ಮುಂಬೈ-ಪುಣೆ, ಮುಂಬೈ-ಸೂರತ್, ಮುಂಬೈ-ಅಹಮದಾಬಾದ್ ಮತ್ತು ಸೂರತ್-ಅಹಮದಾಬಾದ್ ಸೇರಿದಂತೆ ದೇಶದ್ಯಾಂತ ನಗರಗಳನ್ನು ಬಂಧಿಸಲಿದೆ.

250 ಕೋಟಿ ರು. ಹೂಡಿಕೆ

250 ಕೋಟಿ ರು. ಹೂಡಿಕೆ

ಬೆಂಗಳೂರು ಘಟಕಕ್ಕೆ 250 ಕೋಟಿ ರು. ಹೂಡಿಕೆ ಮಾಡಿರುವ ಸ್ಕಾನಿಯಾ, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಟ್ರಕ್ ಹಾಗೂ ಬಸ್ಸುಗಳನ್ನು ಉತ್ಪಾದಿಸಲಿದೆ. ಹಾಗೆಯೇ ಮುಂದಿನ ವರ್ಷದೊಳಗೆ ವರ್ಷಂಪ್ರತಿ 2500 ಟ್ರಕ್ ಹಾಗೂ 1000 ಬಸ್ಸುಗಳನ್ನು ಮಾರಾಟ ಮಾಡುವ ಗುರಿ ಹೊಂದಿದೆ.

ಬೆಂಗ್ಳೂರಿಂದ ಪಯಣ ಬೆಳೆಸಿದ 7 ಸ್ಟಾರ್ ಸೂಪರ್ ಲಗ್ಷುರಿ ಬಸ್

2007ನೇ ಇಸವಿಯಲ್ಲಿ ಲಾರ್ಸೆನ್ ಆಂಡ್ ಟರ್ಬೊ (ಎಲ್ ಆಂಡ್ ಟಿ) ಜತೆಗೂಡಿದ್ದ ಸ್ಕಾನಿಯಾ ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಹಾಗೆಯೇ ದೇಶದಾದ್ಯಂತ 10 ಸರ್ವೀಸ್ ವರ್ಕ್ ಶಾಪ್‌ಗಳನ್ನು ಹೊಂದಿದೆ.

ಸ್ಕಾನಿಯಾ ಸಂಸ್ಥೆ

ಸ್ಕಾನಿಯಾ ಸಂಸ್ಥೆ

ಸ್ಕಾನಿಯಾ ಗ್ರೂಪ್, ಜರ್ಮನಿಯ ಫೋಕ್ಸ್‌ವ್ಯಾಗನ್ ನಿಯಂತ್ರಣದಡಿಯಲ್ಲಿದೆ. ಬೆಂಗಳೂರಿನಿಂದ 40 ಕೀ.ಮೀ ದೂರದ ಹೊರವಲಯದ ಘಟಕಕ್ಕೆ ಕಂಪನಿಯು ಬರೋಬ್ಬರಿ 250 ಕೋಟಿ ಹೂಡಿಕೆ ಮಾಡಿದೆ.

ಮೂಲಸೌಕರ್ಯ

ಮೂಲಸೌಕರ್ಯ

ಸ್ಕಾನಿಯಾ ಎಂಟ್ರಿಯೊಂದಿಗೆ ದೇಶದ ಪ್ರಯಾಣಿಕ ಮೂಲಭೂತ ಸೌಲಭ್ಯಕ್ಕೆ ಉತ್ತೇಜನ ಸಿಗಲಿದೆ. ವಿಶೇಷವಾಗಿಯೂ ದೇಶದ ಮಾರುಕಟ್ಟೆಯನ್ನು ಗುರಿಯಾಗಿರಿಸಿ ಬಸ್ ಎಂಟ್ರಿ ಮಾಡುತ್ತಿದೆ.

ಲಗ್ಷುರಿ ಪಯಣ

ಲಗ್ಷುರಿ ಪಯಣ

ಸ್ಕಾನಿಯಾ ಬಸ್ ಉನ್ನತ ಮಟ್ಟದ ವಿನ್ಯಾಸ, ಅತ್ಯುತ್ತಮ ಇಂಧನ ಕ್ಷಮತೆ, ಗರಿಷ್ಠ ಸುರಕ್ಷತಾ ಮಾನದಂಡ ಹಾಗೆಯೇ ದೀರ್ಘದೂರ ತೊಂದರೆ ರಹಿತ ಸೇವೆಯನ್ನು ಖಾತ್ರಿಪಡಿಸುತ್ತಿದೆ.

ಬೆಂಗ್ಳೂರಿಂದ ಪಯಣ ಬೆಳೆಸಿದ 7 ಸ್ಟಾರ್ ಸೂಪರ್ ಲಗ್ಷುರಿ ಬಸ್

ಒಟ್ಟಿನಲ್ಲಿ ಬೆಂಗಳೂರು ಪ್ರಯಾಣಿಕರು ಸ್ಕಾನಿಯಾ ರಂಗಪ್ರವೇಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

Most Read Articles

Kannada
English summary
Swedish commercial vehicle manufacturer, Scania has officially launched their first Scania Super Luxury Intercity Coach in India. The bus’ interiors are designed by DC Design.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X