ಫೋರ್ಡ್‌ನಿಂದ 6,92,000 ಕಾರುಗಳ ರಿಕಾಲ್

By Nagaraja

ಅಮೆರಿಕದ ಐಕಾನಿಕ್ ಕಾರು ಬ್ರಾಂಡ್ ಆಗಿರುವ ಫೋರ್ಡ್, 6,92,000 ವಾಹನಗಳನ್ನು ರಿಕಾಲ್ ಮಾಡಲು ನಿರ್ಧರಿಸಿದೆ. ಸಂಸ್ಥೆಯ ಪ್ರಕಾರ ಸಿ ಮ್ಯಾಕ್ಸ್ ಹೈಬ್ರಿಡ್ ಹಾಗೂ ಎಸ್ಕೇಪ್ ಎಸ್‌ಯುವಿ ಸುರಕ್ಷತೆಯಲ್ಲಿ ತೊಂದರೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಇಂತಹದೊಂದು ಕ್ರಮ ಕಂಡುಬಂದಿದೆ.

ಪ್ರಮುಖವಾಗಿಯೂ ಉತ್ತರ ಅಮೆರಿಕದಲ್ಲಿ ಮಾರಾಟವಾಗಿರುವ ವಾಹನಗಳಲ್ಲಿ ಸಮಸ್ಯೆ ಕಂಡುಬಂದಿದೆ. ಈ ಪೈಕಿ ಎಸ್ಕೇಪ್ ಮಾದರಿಯಲ್ಲಿ ಎರಡು ಸಮಸ್ಯೆಗಳಿವೆ. ಇದರಲ್ಲಿರುವ ಕರ್ಟೈನ್ ಏರ್‌ಬ್ಯಾಗ್ ಅಪಘಾತ ವೇಳೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಹಾಗಯೇ ಬಾಗಿಲು ಸಮಸ್ಯೆ ಸಹ ಕಂಡುಬಂದಿದೆ. ಇನ್ನೊಂದೆಡೆ ಸಿ ಮ್ಯಾಕ್ಸ್ ಮೇಲೆ ತಿಳಿಸಿದಂತೆ ಕರ್ಟೈನ್ ಏರ್ ಬ್ಯಾಗ್ ಸಮಸ್ಯೆ ಹೊಂದಿದೆ.

Ford Order

ಫೋರ್ಡ್ ಸಂಸ್ಥೆಯ ಪ್ರಕಾರ ಇದುವರೆಗೆ ಯಾವುದೇ ಅಪಘಾತ ದಾಖಲಾಗಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ವಾಹನಗಳನ್ನು ವಾಪಾಸ್ ಪಡೆದುಕೊಳ್ಳಲಾಗುತ್ತಿದ್ದು, ಸಮಸ್ಯೆ ಬಗೆಹರಿಸಿದ ಬಳಿಕ ಹಿಂತಿರುಗಿಸಲಾಗುವುದು.

ವರದಿಗಳ ಪ್ರಕಾರ ಕೆನಡಾದಲ್ಲಿ ಮಾರಾಟವಾಗುತ್ತಿರುವ ಎಸ್ಕೇಪ್ ಹಾಗೂ ಸಿ ಮ್ಯಾಕ್ಸ್ ಮಾದರಿಗಳಲ್ಲಿ ಇದೇ ಸಮಸ್ಯೆ ಕಂಡುಬಂದಿದೆ. ಇದರಂತೆ ರಿಕಾಲ್ ಪ್ರಗತಿಯಲ್ಲಿದೆ.

Most Read Articles

Kannada
English summary
American Iconic car brand will be recalling two of their cars the C-Max hybrid and Escape SUV.
Story first published: Saturday, May 10, 2014, 14:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X